ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ, ಅಂಗನವಾಡಿ ನವೀಕೃತ ಕಟ್ಟಡ ಉದ್ಘಾಟನೆ

ವರದಿ : ನಿಷ್ಕಲ ಎಸ್., ಜೆ.ಮಲ್ಲೇನಹಳ್ಳಿ

ಪಾಂಡವಪುರ : ತಾಲ್ಲೂಕಿನಾದ್ಯಂತ ವಿವಿಧ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶನಿವಾರ ಭೂಮಿಪೂಜೆ ಸಲ್ಲಿಸಿ ಹಲವು ಕಾಮಗಾರಿಗಳನ್ನು ಉದ್ಘಾಟಿಸಿದರು.

ತಾಲ್ಲೂಕಿನ ಹರವು ಗ್ರಾಮದಲ್ಲಿ 80 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಅವರು ಭೂಮಿಪೂಜೆ ಸಲ್ಲಿಸಿದರು.

ಪಾಂಡವಪುರ ಸಿಡಿಪಿಓ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು, ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಸೆಲ್ಕೋ ಫೌಂಡೇಷನ್ ಸಹಯೋಗದೊಂದಿಗೆ 20 ಅಂಗನವಾಡಿಗಳಿಗೆ ವಿದ್ಯುತ್ ಸ್ಟೌವ್ ಸೇರಿದಂತೆ ಅಡುಗೆ ಮಾಡುವ ಪಾತ್ರೆಗಳನ್ನು ವಿತರಣೆ ಮಾಡಿದರು.

ಬಳಿಕ ಅವರು ಬೀರಶೇಟ್ಟಹಳ್ಳಿ ಬಡಾವಣೆಯಲ್ಲಿ ನವೀಕೃತ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ, ಮಹಾತ್ಮಾಗಾಂಧಿನಗರ ಬಡಾವಣೆಯಲ್ಲಿ ಮತ್ತು ಹಾರೋಹಳ್ಳಿ ಬಡಾವಣೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಮತ್ತು ಪಾಂಡವಪುರ ಪುರಸಭೆಯಿಂದ ನಿರ್ಮಿಸಲಾಗುತ್ತಿರುವ 90 ಲಕ್ಷ ಮತ್ತು 60 ಲಕ್ಷ ರೂ ವೆಚ್ಚದ ಒಳಚರಂಡಿ ಕಾಮಗಾರಿಗೆ ಅವರು ಭೂಮಿಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ತಾಲ್ಲೂಕಿನ ಹರವು ಗ್ರಾಮದಲ್ಲಿ ದೇವಸ್ಥಾನಕ್ಕೆ ತಿರುಗಾಡುವ ರಸ್ತೆ ಶಿಥಿಲವಾಗಿದ್ದ ಕಾರಣ, ಗ್ರಾಮಸ್ಥರು ರಸ್ತೆಗೆ ಬೇಡಿಕೆ ಇಟ್ಟಿದ್ದ ಕಾರಣ ಗ್ರಾಮದ ಎರಡು ಕಡೆ ರಸ್ತೆ ಕಾಮಗಾರಿಗೆ ಇಂದು ಭೂಮುಪೂಜೆ ಸಲ್ಲಿಸಲಾಗಿದೆ. ಅಲ್ಲದೇ ಗೊರವಾಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ, ಮೂರು ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ, ನವೀಕೃತ ಅಂಗನವಾಡಿ ಕಟ್ಟಡ ಉದ್ಘಾಟನೆ, 20 ಅಂಗನವಾಡಿಗಳಿಗೆ ಅಡುಗೆ ಪಾತ್ರೆ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸರ್ಕಾರ ಹಂತಹAತವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ, ಎಲ್ಲ ಅನುದಾನಗಳಲ್ಲಿ ಕಾಮಗಾರಿ ನಡೆಯುತ್ತಿದೆ, ನಾವು ಕೇಳಿದಷ್ಟು ಹಣ ಸಿಗುತ್ತಿಲ್ಲ, ಬಂದಷ್ಟು ಅನುದಾನದಲ್ಲಿ ಕಾಮಗಾರಿ ನಡೆಸುತ್ತಿದ್ದೇವೆ ಎಂದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನಿಜವಾದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ದಯಾನಂದ, ವಕೀಲರಾದ ಮುರಳಿ, ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ವೈ.ಪಿ.ಮಂಜುನಾಥ್, ಪಿಎಸ್‌ಎಸ್‌ಕೆ ಮಾಜಿ ಉಪಾಧ್ಯಕ್ಷರಾದ ಹೆಚ್.ಎಲ್.ಪ್ರಕಾಶ್, ಸಿಡಿಪಿಓ ಪೂರ್ಣಿಮ, ಪುರಸಭೆ ಮಾಜಿ ಅಧ್ಯಕ್ಷರಾದ ಹುಚ್ಚೇಗೌಡ, ಬಿಜೆಪಿ ಮುಖಂಡರಾದ ಹೆಚ್.ಎನ್.ಪ್ರಕಾಶ್, ದಾನಿ ಅರವಿಂದ್ ರಾಘವನ್, ಮುಖಂಡರಾದ ಸಂತೋಷ್, ರಾಜು, ಲಕ್ಷೆö್ಮÃಗೌಡ, ಹಾರೋಹಳ್ಳಿ ರಮೇಶ್, ಸೋಮಶೇಖರ್, ಶ್ರೀನಿವಾಸ್, ಚಂದ್ರಶೇಖರ್, ಮುಖ್ಯಾಧಿಕಾರಿ ಸತೀಶ್ ಕುಮಾರ್, ಇಂಜಿನಿಯರ್ ನದಾಫ್ ಇತರರು ಇದ್ದರು.

ಅಮೃತ್ ಯೋಜನೆಯಡಿ ನಿರ್ಮಿಸುತ್ತಿರುವ ಕಾಮಗಾರಿಗಳು ಅಪೂರ್ಣವಾಗಿವೆ, ಗುತ್ತಿಗೆದಾರರು ರಸ್ತೆಗಳನ್ನು ಅಡ್ಡಲಾಗಿ ಅಗೆದು ಗುಂಡಿ ಮುಚ್ಚದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಸಾಕಷ್ಟು ಅನಾಹುತ ಆಗಿದೆ. ಅಲ್ಲದೇ ಯುಜಿಡಿ ಕಾಮಗಾರಿಗಳು ಬಡಾವಣೆಗಳಲ್ಲಿ ಮನೆಗಳು ಇರುವ ಕಡೆ ನಡೆಯುತ್ತಿಲ್ಲ, ಬದಲಾಗಿ ಮನೆಗಳೇ ಇಲ್ಲದ ಕಡೆ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಈ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.

ಮುರಳಿ, ಪುರಸಭೆ ಮಾಜಿ ಸದಸ್ಯರು, ವಕೀಲರು


ಕುಡಿಯುವ ನೀರು ಮತ್ತು ಯುಜಿಡಿ ಕಾಮಗಾರಿ ನಡೆದ ಬಳಿಕ ಗುಂಡಿ ಮುಚ್ಚುವ ಮುನ್ನ ಕಾಮಗಾರಿ ಸರಿಯಾಗಿದೆಯಾ, ನೀರು ಸರಾಗವಾಗಿ ಹರಿಯುತ್ತಿದೆಯಾ ಎಂದು ಗುತ್ತಿಗೆದಾರರು ಅಥವಾ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ, ಇದರಿಂದ ಕಾಮಗಾರಿ ಸರಿಯಾಗಿ ಆಗದೆ ಇದ್ದಲ್ಲಿ ಮತ್ತೊಮ್ಮೆ ಅಗೆದು ರಸ್ತೆಗಳು ಅದ್ವಾನ ಮಾಡುವುದಕ್ಕೂ ಮೊದಲು ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು.

ಹಾರೋಹಳ್ಳಿ ಸೋಮಶೇಖರ್, ದಸಂಸ ಮುಖಂಡ