ಮೈಸೂರು ಪ್ರಾಂತ್ಯದ ಧರ್ಮಾಧ್ಯಕ್ಷರ ಸ್ಥಾನಕ್ಕೆ ಬಿಷಪ್ ಡಾ.ಕೆ.ಅಂತೋಣಿ ವಿಲಿಯಂ ರಾಜಿನಾಮೆ
ಜನವರಿ 14, 2024
ಯೂನಿವರ್ಸಲ್ ಚರ್ಚ್ ಸೇವೆಗಾಗಿ ಬಿಷಪ್ ಆಗಿ ಮುಂದುವರಿಕೆ
ವರದಿ-ನಜೀರ್ ಅಹಮದ್ ಮೈಸೂರು: ಮೈಸೂರುಪ್ರಾಂತ್ಯದ ಧರ್ಮಾಧ್ಯಕ್ಷರ ಸ್ಥಾನಕ್ಕೆ ತಾವು ರಾಜೀನಾಮೆ
ನೀಡಿದ್ದು ವ್ಯಾಟಿಕನ್ ಸಿಟಿಯ ಪವಿತ್ರ ಪೋಪ್ ಪ್ರಾನ್ಸಿಸ್ ಅವರು ಅಂಗೀಕರಿಸಿದ್ದಾರೆ ಎಂದು ಮೈಸೂರು
ಪ್ರಾಂತ್ಯದ ಬಿಷಪ್ ಡಾ.ಕೆ.ಅಂತೋಣಿ ವಿಲಿಯಂ ತಿಳಿಸಿದರು. ನಗರದ ಸಂತ ಫಿಲೋಮಿನಾ ಚರ್ಚ್‌ನಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ
ಕೃತಜ್ಞತಾ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗೋಷ್ಠಿ ನಡೆಸಿ ತಮ್ಮ ರಾಜಿನಾಮೆ ವಿಚಾರ ಪ್ರಕಟಿಸಿದರು.
ಬಿಷಪ್ ಸ್ಥಾನಕ್ಕೆ ತಾವು ಈ ಹಿಂದೆಯೇ ರಾಜಿನಾಮೆ ಸಲ್ಲಿಸಿದ್ದು,
ಶನಿವಾರ ಅದು ಅಂಗೀಕಾರವಾಗಿದೆ ಎಂದರು. ನನ್ನ ಅಧಿಕಾರದ ಅವಧಿಯಲ್ಲಿ ಸಂಸ್ಥೆಯನ್ನು ಆರ್ಥಿಕವಾಗಿ ಮತ್ತು ಧಾರ್ಮಿಕವಾಗಿ
ಸದೃಢ ಮಾಡಿದ ಹೆಮ್ಮೆ ನನಗಿದೆ. ಕಳೆದ ಮೂರು ವರ್ಷಗಳಿಂದ ನನ್ನ ವಿರುದ್ಧ ಕೆಲವರುಪಿತೂರಿ ನಡೆಸಿದರು. ಧರ್ಮಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು
ಎಂದು ಹಲವು ಷಢ್ಯಂತರ ರೂಪಿಸಿ ನನ್ನ ವಿರುದ್ಧ ಸಲ್ಲದ ಅಪಪ್ರಚಾರ ನಡೆಸಿದರು. ಅದ್ಯಾವುದೂ ಸಫಲವಾಗಿಲ್ಲ.
ನನ್ನ ರಾಜಿನಾಮೆ ಶಿಸ್ತಿನ ಕ್ರಮವಲ್ಲ ಎಂದು ಅಪೋಸ್ಟೋಲಿಕ್ ನನ್ನಿಯೇಚರ್ ಒಪ್ಪಿಕೊಂಡಿರುವ ಬಗ್ಗೆ ಸಿಬಿಸಿಐ ಅಧಿಸೂಚನೆಯಲ್ಲಿ
ತಿಳಿಸಿದೆ. ನನ್ನ ವಿರುದ್ಧ ಪಿತೂರಿ ಮಾಡಿದ ಎಲ್ಲರಿಗೂ ಒಳ್ಳೆಯದಾಗಲಿ. ಈ ವಿಚಾರವನ್ನು
ಮತ್ತಷ್ಟು ಬೆಳೆಸಬಾರದು ಎಂದು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಯಾರಿಗೋ ಹೆದರಿಕೊಂಡು ಹೇಡಿತನದಿಂದ ನಾನು ರಾಜೀನಾಮೆ ನೀಡಿಲ್ಲ. ನನ್ನ
ವಿರುದ್ಧ ಸತತ ಪಿತೂರಿ ನಡೆಸಿದರೂ ನಾನು ಯಾರಿಗೂ ಬೆರಳು ತೋರಿಸಲಿಲ್ಲ. ಅವರು ಮಾಡಿರುವ ತಪ್ಪು ಅವರಿಗೆ
ಅರಿವಾಗಲಿ ಎಂದು ಏಸು ಸ್ವಾಮಿಯಲ್ಲಿ ಪ್ರಾರ್ಥಿಸಿ ಅವರಿಗೂ ಒಳ್ಳೆಯ ಬುದ್ಧಿಕೊಡುವಂತೆ ಬೇಡಿಕೊಂಡಿದ್ದೇನೆ
ಎಂದು ತಿಳಿಸಿದರು. ಕಳೆದ ಒಂದು ವರ್ಷದಿಂದ ಊಟಿ ಯ ಪ್ರಕೃತಿಯ ಮಧ್ಯದಲ್ಲಿರುವ ಎಸ್ಟೇಟ್
ನಲ್ಲಿ ಏಕಾಂಗಿಯಾಗಿ ವಾಸ್ಥವ್ಯ ಹೂಡಿದ್ದೆ. ಅಲ್ಲಿ ಒಂದು ತಿಂಗಳ ಕಾಲ ಧ್ಯಾನಮಾಡಿ ಎಲ್ಲರಿಗೂ ಒಳ್ಳೆಯದಾಗುವಂತೆ
ಆ ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು. ನಾನು ಈ ಮೊದಲು ಮೈಸೂರು ಧರ್ಮ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿದ್ದೆ.
ಈಗ ಸ್ವತಂತ್ರವಾಗಿದ್ದು ಎಲ್ಲಿಗೆ ಬೇಕಾದರೂ ಹೋಗಿ ನಾನು ಸೇವೆ ಸಲ್ಲಿಸಬಹುದಾಗಿದೆ ಎಂದು ಹೇಳಿದರು. ನನ್ನ ಮೇಲೆ ಪಿತೂರಿ ಮಾಡಿರುವವರ ಮೇಲೆ ಕ್ರಮಜರುಗಿಸಲು ಆಡಳಿತಾಧಿಕಾರಿಗಳಿಗೆ
ಜನ ಸಾಮಾನ್ಯರು ದೂರು ಸಲ್ಲಿಸಿದ್ದಾರೆ. ಅವರು ಏನು ಕ್ರಮ ಕೈಗೊಳ್ಳುತ್ತಾರೊ ಅವರಿಗೆ ಬಿಟ್ಟಿದ್ದು
ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಫಾ.ಮದುಲೈ ಮುತ್ತು, ಫಾ.ಸ್ಟ್ಯಾನ್ಲಿ, ಫಾ.ಜಾನ್
ಸಿಕ್ವೇರಾ, ಮ್ಯಾಥ್ಯೂ ಸುರೇಶ್, ಪ್ರೇಮಾನಂದ ಡಿಮೆಲ್ಲೋ, ಜೇಮ್ಸ್ ಕ್ರಿಸ್ಟೋಫರ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು