ಡಾ.ರೇಖಾ ಮನಶಾಂತಿ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ; ಪುಷ್ಪಾರ್ಚನೆ ಮೂಲಕ ಸಾಧಕ ಮಹಿಳೆಯರಿಗೆ ಸನ್ಮಾನ, ಮಹಿಳೆಯರಿಂದ ಕರೋಕೆ ಗಾಯನ

ನಿಷ್ಕಲ ಎಸ್., ಮೈಸೂರು

ಮೈಸೂರು : ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆಯ ಮಹತ್ವ ಕೇವಲ ಒಂದು ದಿನದ ಆಚರಣೆಯಲ್ಲ; ಇದು ಮಹಿಳೆಯ ಮಹತ್ವವನ್ನು ಸ್ಮರಿಸುವ, ಅವಳ ತ್ಯಾಗವನ್ನು ಗೌರವಿಸುವ, ಅವಳ ಸಾಧನೆಯನ್ನು ಕೊಂಡಾಡುವ ದಿನ ಎಂದು ಕವಿ ಆದಿಲ್ ಪಾಷ ಹೇಳಿದರು.

ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ಹೆಸರಾಂತ ಮನೋ ವಿಜ್ಞಾನಿ ಡಾ.ರೇಖಾ ಮನಶಾಂತಿ ಅಧ್ಯಕ್ಷತೆಯಲ್ಲಿ ನಗರದ ರೋಟರಿ ಭವನದಲ್ಲಿ ಏರ್ಪಡಿಸಿದ್ದ ಮಹಿಳಾ ಸಾಧಕರಿಗೆ ಸನ್ಮಾನ ಮತ್ತು ಕರೋಕೆ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆ ಎಂದರೆ ಕೇವಲ ಒಂದು ವ್ಯಕ್ತಿಯಲ್ಲ, ಅವಳು ಒಂದು ಸ್ನೇಹದ ಸಾಗರ, ಒಂದು ಸಹನೆಯ ಪರ್ವತ, ಒಂದು ಪ್ರೀತಿಯ ದೀಪ. ಒಂದು ಮನೆಯ ಅಸ್ತಿತ್ವವೇ ಮಹಿಳೆಯಿಂದ ಆರಂಭವಾಗುತ್ತದೆ. ಮನೆಯೊಳಗಿನ ಸಣ್ಣ ಸಣ್ಣ ಸಂಬAಧಗಳನ್ನು ಒಗ್ಗೂಡಿಸಿ, ಅವುಗಳಿಗೆ ಮಮತೆಯ ಸೂತ್ರ ಹಚ್ಚಿ, ಸಂಸಾರವೆAಬ ರಥವನ್ನು ಸಾಗಿಸುವ ಶಕ್ತಿ ಮಹಿಳೆಯದು. ಒಬ್ಬ ಮಹಿಳೆ ತನ್ನ ಕುಟುಂಬದ ಮೇಲೆ ಇಡುವ ಪ್ರೀತಿ ಅಳತೆಯಿಲ್ಲದದ್ದು. ಅವಳು ತನ್ನ ಗಂಡನ ಮೇಲೆ ಇಡುವ ಪ್ರೀತಿ ಕೇವಲ ಸಂಬAಧದ ಪ್ರೀತಿಯಲ್ಲ; ಅದು ನಂಬಿಕೆಯ, ಬದ್ಧತೆಯ ಮತ್ತು ಜೀವನ ಸಂಗಾತಿತ್ಯದ ಪ್ರೀತಿ, ಗಂಡ ಹೆಂಡತಿಯ ಸಂಬAಧವು ಕೇವಲ ಎರಡು ವ್ಯಕ್ತಿಗಳ ಸಂಗಮವಲ್ಲ; ಅದು ಎರಡು ಹೃದಯಗಳ ನಂಬಿಕೆಯ ಒಪ್ಪಂದ. ಆ ಸಂಬAಧದಲ್ಲಿ ನಿಷ್ಠೆ ಎಂಬುದು ಅತ್ಯಂತ ಪವಿತ್ರವಾದ ಮೌಲ್ಯ. ಮಹಿಳೆಯ ನಿಷ್ಠೆ, ಅವಳ ಪ್ರಾಮಾಣಿಕತೆ ಮತ್ತು ಅವಳ ಕುಟುಂಬದ ಮೇಲಿನ ಬದ್ಧತೆ, ಇವು ಸಂಸಾರದ ನೆಲೆಯನ್ನು ಬಲಪಡಿಸುವ ಅಸ್ತಿವಾರಗಳಾಗಿವೆ. 

ಇಂದಿನ ವೇಗದ ಜಗತ್ತಿನಲ್ಲಿ ಕೆಲವೊಮ್ಮೆ ಹೊರಗಿನ ಆಕರ್ಷಣೆಗಳು, ಲಾಲಸೆಗಳು, ಮಿಥ್ಯಾ ಮಿಂಚುಗಳು ನಮ್ಮ ಮನಸ್ಸನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ. ಆದರೆ ಜೀವನದ ನಿಜವಾದ ಸಂತೋಷವು ಹೊರಗಿನ ಮೃಗಮರೀಚಿಕೆಯಲ್ಲ; ಅದು ನಮ್ಮ ಮನೆಯೊಳಗಿನ ಪ್ರೀತಿಯಲ್ಲಿ, ನಂಬಿಕೆಯಲ್ಲಿ ಮತ್ತು ಸಾಮರಸ್ಯದಲ್ಲಿ ಅಡಗಿದೆ. ಮಹಿಳೆ ತನ್ನ ಮನಸ್ಸಿನ ಶುದ್ಧತೆಯನ್ನು ಕಾಪಾಡಿಕೊಂಡು, ತನ್ನ ಕುಟುಂಬದ ಮೇಲೆ ಇರುವ ಪ್ರೀತಿ ಮತ್ತು ನಿಷ್ಠೆಯನ್ನು ಉಳಿಸಿಕೊಂಡರೆ ಆ ಸಂಸಾರವೇ ಒಂದು ಪವಿತ್ರ ಮಂದಿರವಾಗುತ್ತದೆ ಎಂದು ಮಹಿಳೆಯ ತ್ಯಾಗವನ್ನು ಕುರಿತು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50ಕ್ಕೂ ಹೆಚ್ಚು ಮಹಿಳೆಯರನ್ನು ಗೌರವಿಸಲಾಯಿತು. ಯುವತಿಯರು, ವೃದ್ಧರಾದಿಯಾಗಿ ಕರೋಕೆ ಗಾಯನ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಕೆವಿಸಿ ಆಸ್ಪತ್ರೆಯ ಯೂರಾಲಜಿಸ್ಟ್ ಡಾ.ದಯನಂದ ಜಿ.ಎಸ್., ಉದ್ಘಾಟಿಸಿದರು.

ವಿಶೇಷ ಅತಿಥಿಗಳಾಗಿ ಕಸ್ತೂರಿ ಚಂದ್ರು, ಪೊಲೀಸ್ ಸಮಾಲೋಚಕರಾದ ನಳಿನಿ ತಮ್ಮಯ್ಯ, ಪೊಲೀಸ್ ಎಎಸ್‌ಐ ಎಂ.ಬಿ.ಗೀತಾ, ಕುಹೂ ಕುಹೂ ಕಾರ್ಯಕ್ರಮದ ನಿರ್ದೇಶಕರಾದ ಸುರೇಶ್ ಬಾಬು, ಮೈಸುರು ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಸಂಧ್ಯಾ ಟಿ., ಆದಿತ್ಯ ಬಿರ್ಲಾ ಮೈಸೂರು ಶಾಖೆಯ ಶಿವಣ್ಣ ಎಂ., ಇತರರು ಇದ್ದರು.  ಹೆಸರಾಂತ ಮನೋ ವಿಜ್ಞಾನಿ ಡಾ.ರೇಖಾ ಮನಶಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರಿಗೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯಿತು.

ಒಂದು ಮನೆಯಲ್ಲಿನ ಶಾಂತಿ, ಸಮಾಧಾನ ಮತ್ತು ಸಂತೋಷ ಬಹುಪಾಲು ಮಹಿಳೆಯ ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಅವಳು ತನ್ನ ಮನಸ್ಸಿನಲ್ಲಿ ಬೆಳಗುವ ಪ್ರೀತಿಯ ದೀಪದಿಂದ ಮನೆಮಂದಿಯ ಜೀವನವನ್ನೇ ಬೆಳಗಿಸುತ್ತಾಳೆ. ಇದ್ದದ್ದರಲ್ಲಿ ನೆಮ್ಮದಿ ಕಂಡುಕೊಳ್ಳುವ ಮನಸ್ಸು ಮಹಿಳೆಯ ವಿಶೇಷ ಗುಣ. ಸಣ್ಣ ಸಂತೋಷಗಳನ್ನು ದೊಡ್ಡ ಹಬ್ಬಗಳಾಗಿ ರೂಪಿಸುವ ಸಾಮರ್ಥ್ಯ ಅವಳದು. ಆ ಕಾರಣದಿಂದಲೇ ನಮ್ಮ ಸಂಸ್ಕöÈತಿಯಲ್ಲಿ ಮಹಿಳೆಯನ್ನು ``ಮನೆಯ ಲಕ್ಷಿ÷್ಮ'' ಎಂದು ಕರೆಯುತ್ತಾರೆ.

ಆದಿಲ್ ಪಾಷ, ಕವಿ