ಜೆಇಇ ಮೇನ್ ಪರೀಕ್ಷೆ-2026, ಕರ್ನಾಟಕದಲ್ಲಿ ಆಕಾಶ್ ಸಂಸ್ಥೆಯ ವಿದ್ಯಾರ್ಥಿಗಳ ಅದ್ಭುತವಾದ ಸಾಧನೆ

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ಜೆಇಇ ಮೇನ್ ಪರೀಕ್ಷೆಯಲ್ಲಿ ಮೈಸೂರಿನ ಆಕಾಶ್ ಸಂಸ್ಥೆಯ ವಿಧ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಆದರ್ಶ್ ಕುಮಾರ್ ಬೆಹೆರಾಗೆ ಆಲ್ ಇಂಡಿಯಾ ಮಟ್ಟದಲ್ಲಿ 43ನೇ ರ‍್ಯಾಂಕ್ ಪಡೆದು ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಸಹಾಯಕ ನಿರ್ದೇಶಕರಾದ ಬಾಲ ಶ್ರೀನಿವಾಸ್ ತಿಳಿಸಿದರು.

ಕುವೆಂಪುನಗರದ ಆಕಾಶ್ ಸಂಸ್ಥೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪೋಷಕರ ಸಹಕಾರ, ವಿದ್ಯಾರ್ಥಿಗಳ ನಿರಂತರ ಅಭ್ಯಾಸ, ಶಿಸ್ತುಬದ್ಧ ಸಿದ್ಧತೆ ಹಾಗೂ ಅಧ್ಯಾಪಕರ ಸಮರ್ಪಕ ಮಾರ್ಗದರ್ಶನದಿಂದ ಆಕಾಶ್ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಜೆಇಇ ಮೇನ್ 2026ರ ಫಲಿತಾಂಶದಲ್ಲಿ ಆಕಾಶ್ ಸಂಸ್ಥೆಯ ಕರ್ನಾಟಕದ ವಿದ್ಯಾರ್ಥಿಗಳು ಅತ್ಯುನ್ನತ ರ‍್ಯಾಂಕ್‌ಗಳನ್ನು ಗಳಿಸಿದ್ದು, ಆಕಾಶ್ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಈ ಸಾಧಕರ ಪೈಕಿ ಆದರ್ಶ್ ಕುಮಾರ್ ಬೆಹೆರಾ ಮುಂಚೂಣಿಯಲ್ಲಿದ್ದಾರೆ. ಇವರು ಆಲ್ ಇಂಡಿಯಾ ರ‍್ಯಾಂಕಿAಗ್‌ನಲ್ಲಿ 43ನೇ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ 2ನೇ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕದ ಟಾಪ್ ಸಾಧಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. 

ವಿಶೇಷವಾಗಿ ಗಣಿತ ಮತ್ತು ರಸಾಯನಶಾಸ್ತç ವಿಷಯಗಳಲ್ಲಿ ಶೇ. 100ರಷ್ಟು ಅಂಕ ಗಳಿಸಿರುವುದು ವಿಷಯದ ಮೇಲಿನ ಅವರ ಪ್ರಭುತ್ವವನ್ನು ಎತ್ತಿತೋರಿಸುತ್ತದೆ.

ಜೆಇಇ ಮೇನ್ 2026ರ ಸೆಷನ್ 2 ಪರೀಕ್ಷೆಯಲ್ಲಿ ಕರ್ನಾಟಕದ ಆಕಾಶ್ ಸಂಸ್ಥೆಯ ಹಲವು ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ. ಪ್ರಣಿಲ್ ಸಿಂಗ್ಲಾ (211), ಆಯುಷ್ ಎಸ್. ಕೋಲೇಕರ್ (276) ಹಾಗೂ ನಮನ್ ಅಗರ್ವಾಲ್ (785) ಅತ್ಯುನ್ನತ ರ‍್ಯಾಂಕ್ ಪಡೆಯುವ ಮೂಲಕ ರಾಷ್ಟçಮಟ್ಟದ ಟಾಪ್ 1000 ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇವರೊAದಿಗೆ ಆದಿತ್ಯ, ಟಿ.ಆರ್.ಎಸ್. ಸಂಜೀತ್, ಜೋಹಾನ್ ಜಾಬ್, ಗುಡಾಲ ಸತ್ಯ ಯಶಸ್ವ್, ಪ್ರಚೇತ್ ಜಲಶಂಕರ್ ಎಂ. ಸೇರಿದಂತೆ ಹಲವು ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇದು ಕರ್ನಾಟಕದಾದ್ಯಂತ ಇರುವ ಆಕಾಶ್ ವಿದ್ಯಾರ್ಥಿಗಳು ಎಷ್ಟೊಂದು ಅಚ್ಚುಕಟ್ಟಾದ ತಯಾರಿಯೊಂದಿಗೆ ಪರೀಕ್ಷೆಯನ್ನು ಎದುರಿಸಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದರು.

ರಾಷ್ಟಿçÃಯ ಪರೀಕ್ಷಾ ಪ್ರಾಧಿಕಾರವು (ಓಖಿಂ) ಏಪ್ರಿಲ್ 20, 2026ರಂದು ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಕರ್ನಾಟಕದ ಆಕಾಶ್ ಇನ್‌ಸ್ಟಿಟ್ಯೂಟ್‌ನ 15 ವಿದ್ಯಾರ್ಥಿಗಳು ಜೆಇಇ ಮೇನ್ 2026ರ ಸೆಷನ್ 2ರಲ್ಲಿ ಗಮನಾರ್ಹ ಸಾಧನೆಗೈದಿದ್ದಾರೆ. ಈ ಪೈಕಿ ಬಹುತೇಕ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್÷್ಡ ಪರೀಕ್ಷೆಗೂ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅನಿಲ್, ಸಂಜೀವ್, ಸೂರಜ್ ಇತರರು ಇದ್ದರು.