ವಿದ್ಯಾರಣ್ಯಪುರಂನಲ್ಲಿ ನೂತನವಾಗಿ ಪ್ರಾರಂಭಿಸಲಾದ ವೈಎಲ್‌ಜಿ ಸಲೂನ್ ಉದ್ಘಾಟಿಸಿದ ಖ್ಯಾತ ಮನಃಶಾಸ್ತ್ರಜ್ಞೆ ಡಾ.ರೇಖಾ ಮನಃಶಾಂತಿ

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ನಗರದ ವಿದ್ಯಾರಣ್ಯಪುರಂನಲ್ಲಿ ನೂತನವಾಗಿ ಪ್ರಾರಂಭಿಸಲಾದ ವೈಎಲ್‌ಜಿ ಸಲೂನ್ ಅನ್ನು ಖ್ಯಾತ ಮನಃಶಾಸ್ತ್ರಜ್ಞೆ ಡಾ.ರೇಖಾ ಮನಃಶಾಂತಿ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ನನ್ನ ಗೆಳತಿ ನೇಹಾ ಅವರು ಈ ಸಲೂನ್ ಪ್ರಾರಂಭಿಸುವ ಮೂಲಕ ಹೊಸ ಉದ್ದಿಮೆಯನ್ನು ಪ್ರಾರಂಭಿಸಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹೇಳಿದರು.

ಯಾವುದೇ ಒಬ್ಬ ವ್ಯಕ್ತಿಗೆ ಕ್ರಿಯಾಶೀಲತೆ ಮುಖ್ಯವಾಗಿದೆ. ಜೀವನದಲ್ಲಿ ಮುಂದೆ ಬರಲು ಧೈರ್ಯ ಬೇಕು. ಎಲ್ಲರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇದ್ದು, ಅದನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳಬೇಕು. ನಮ್ಮನ್ನು ನಾವು ಪ್ರೀತಿಸಿದಾಗ ಮಾತ್ರ ಈ ಧೈರ್ಯ ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಲೂನ್ ಮಾಲಿಕರಾದ ನೇಹ, ಪೊಲೀಸ್ ಅಧಿಕಾರಿಗಳು, ಇತರರು ಇದ್ದರು.