ಮೈಸೂರು : ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಮುಖಂಡರಾದ ಎಂ.ರಸೂಲ್ ಅವರು, ಯಾವುದೇ ಜಾತಿ ಧರ್ಮಗಳ ಬೇಧವಿಲ್ಲದೆ ಸುಮಾರು 3ಸಾವಿರಕ್ಕೂ ಅಧಿಕ ಬಡಜನರಿಗೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿದರು.
ಕೆಸರೆ ಬಡಾವಣೆಯ ಕುರಿಮಂಡಿ ಎ ಬ್ಲಾಕ್ 15ನೇ ವಾರ್ಡಿನಲ್ಲಿರುವ ತಮ್ಮ ಸ್ವಗೃಹದ ಎದುರು ನಡೆದ ಸಮಾರಂಭದಲ್ಲಿ ಮೈಸೂರಿನ ಸರ್‌ಖಾಝಿ ಸೈಯದ್ ಉಸ್ಮಾನ್ ಸಾಹೇಬ್ ಅವರು ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷö್ಮಣ್ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿ ಮಾತನಾಡಿ, ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಸ್ಲಾಂ ಧರ್ಮದಲ್ಲಿರುವ ಪ್ರಮುಖ ಐದು ಕರ್ತವ್ಯಗಳಲ್ಲಿ ಝಕಾತ್ ಮತ್ತು ಫಿತ್ರಾ ಎಂಬ ಪರಿಪಾಲನೆಯನ್ನು ದಾನ ಧರ್ಮದ ಮೂಲಕ ಎಂ.ರಸೂಲ್ ಅವರು ಯಾವುದೇ ಜಾತಿ ಧರ್ಮಗಳ ಬೇಧವಿಲ್ಲದೆ ಹಿಂದೂ ಮತ್ತು ಮುಸಲ್ಮಾನ ಬಂಧುಗಳಿಗೆ ಸರಿಸಮನಾಗಿ ಸಮರ್ಥವಾಗಿ 3 ಸಾವಿರಕ್ಕೂ ಅಧಿಕ ಜನರಿಗೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡುವ ಮೂಲಕ ಬಡವರೂ ಸಹ ಹಬ್ಬಗಳನ್ನು ಆನಂದದಾಯಕವಾಗಿ ಮಾಡಲು ನೆರವಾಗಿದ್ದಾರೆ ಎಂದರು.
ಕೆಲವರು ವಿನಾಕಾರನ ಇಸ್ಲಾಂ ಧರ್ಮದ ಮೇಲೆ ಮತ್ತು ಮುಸಲ್ಮಾನರ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಹೊರಿಸಿ ಅವರನ್ನು ತಪ್ಪಿತಸ್ಥರನ್ನಾಗಿ ಮಾಡುತ್ತಿದ್ದಾರೆ. ಇದು ಅಮೆರಿಕಾ ಮತ್ತು ಇಸ್ರೇಲ್ ದೇಶದ ಕುತಂತ್ರವಾಗಿದೆ, ಕೆಲವು ನಮ್ಮ ದೇಶದಲ್ಲೂ ಕೆಲವರು ಇದನ್ನು ಪ್ರಚಾರ ಮಾಡಿ ಮುಸಲ್ಮಾನರನ್ನು ಎಲ್ಲರೂ ದ್ವೇಷಿಸುವಂತೆ ಮಾಡುತ್ತಿದ್ದಾರೆ. ಇದು ತಪ್ಪು, ಹಿಂದೂ ಮುಸ್ಲಿಂ ಎಲ್ಲರೂ ಒಂದೇ ತಾಯಿಯ ಮಕ್ಕಳು ನಾವೆಲ್ಲರೂ ಒಂದೇ ದೇಶದ ಮಕ್ಕಳು, ನಾವು ಭಾರತೀಯರು, ಯಾವುದೇ ಧರ್ಮಗಳ ವಿರುದ್ಧ ಅಪಪ್ರಚಾರ ಮಾಡಬಾರದು, ಜನಾಂಗೀಯ ದ್ವೇಷ ಮಾಡಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೋರೇಟರ್ ಸುಹೇಲ್ ಬೇಗ್, ಮುಖಂಡರಾದ ನಾಸೀರ್ ಖಾನ್, ಮುಜಾಹಿದ್(ಮುಜ್ಜು) ಮೊಹಮ್ಮದ್ ಸಾದೀಖ್, ನಯಾಜ್ ಖಾನ್, ಆರೀಫ್, ನಯಾಜ್ ಪಾಷ ಮತ್ತಿತರರು ಇದ್ದರು.
3000 ಜನರಿಗೆ ದಿನಸಿ ಕಿಟ್ ವಿತರಣೆ
ಕಳೆದ ಹಲವಾರು ವರ್ಷಗಳಿಂದ ನಾನು ರಂಜಾನ್ ಹಬ್ಬದ ಪ್ರಯುಕ್ತ ದಿನಸಿ ಕಿಟ್‌ಗಳನ್ನು ನಮ್ಮ ವಾರ್ಡಿನ ಬಡಜನರಿಗೆ ಹಂಚುತ್ತಾ ಬಂದಿದ್ದೇನೆ. ಈ ವರ್ಷ ರಂಜಾನ್ ಮತ್ತು ಯುಗಾದಿ ಹಬ್ಬ ಒಟ್ಟಾಗಿ ಬಂದಿರುವ ಕಾರಣ ನಾನು 3000 ಹಿಂದೂ ಮತ್ತು ಮುಸಲ್ಮಾನ ಬಂಧುಗಳಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದೇನೆ.
• ಎಂ.ರಸೂಲ್, ಕಾಂಗ್ರೆಸ್ ಮುಖಂಡರು
ರಸೂಲ್‌ಗೆ ಉತ್ತಮ ರಾಜಕೀಯ ಭವಿಷ್ಯ
ಕಾಂಗ್ರೆಸ್ ಪಕ್ಷದಲ್ಲಿ ಅತ್ಯುತ್ತಮ ಸಂಘಟನೆ ಮಾಡುತ್ತಿರುವ ಎಂ.ರಸೂಲ್ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯ ಇದೆ. ಅವರಿಗೆ ಕಾರ್ಪೋರೇಷನ್ ಚುನಾವಣೆಯಲ್ಲಿ ಮತದಾರರು ಗೆಲ್ಲಿಸಬೇಕು. ನಾನು ಸದಾಕಾಲ ಅವರ ಬೆನ್ನಿಗೆ ನಿಂತು ಸಹಾಯ ಮಾಡುತ್ತಾನೆ. ಅವರು ಖಂಡಿತಾ ಪಾಲಿಕೆ ಸದಸ್ಯರಾಗುತ್ತಾರೆ.
• ಎಂ.ಲಕ್ಷö್ಮಣ್, ಕೆಪಿಸಿಸಿ ವಕ್ತಾರರು



