ನಂಜನಗೂಡು ತಾಲ್ಲೂಕು ಕೋಚನಹಳ್ಳಿಯಲ್ಲಿ ಇಎಂಸಿ ಕ್ಲಸ್ಟರ್ ಸ್ಥಾಪನೆ : ಎಸ್.ಸೆಲ್ವಕುಮಾರ್

ಇನ್ಫೊಸಿಸ್ ಕ್ಯಾಂಪಸ್‌ನಲ್ಲಿ `ಮೈಸೂರು ಬಿಗ್ ಟೆಕ್ ಷೊ-2026' ಕಾರ್ಯಕ್ರಮ

ಮೈಸೂರು : ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕೋಚನಹಳ್ಳಿಯಲ್ಲಿ 252 ಎಕರೆ ಜಮೀನಿನಲ್ಲಿ ಇಎಂಸಿ (ಎಲೆಕ್ಟಾçನಿಕ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್) ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಮೈಸೂರಿಗೆ ಮತ್ತಷ್ಟು ಹೂಡಿಕೆ ಹರಿದುಬರಲಿದೆ ಎಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಹೇಳಿದರು.

ನಗರದ ಇನ್ಫೊಸಿಸ್ ಕ್ಯಾಂಪಸ್‌ನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡೆಮ್) ಹಾಗೂ ರಾಜ್ಯ ಐಟಿ ಮತ್ತು ಬಿಟಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ `ಮೈಸೂರು ಬಿಗ್ ಟೆಕ್ ಷೊ-2026' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಬೆಂಗಳೂರು ನಂತರದ ಪ್ರಮುಖ ನಗರವಾಗಿ ಮೈಸೂರು ಬೆಳೆಯುತ್ತಿದೆ. ಇಲ್ಲಿ ಕೈಗಾರಿಕೆ, ಉದ್ಯಮಗಳ ಬೆಳವಣಿಗೆಗೆ ಪೂರಕ ವಾತಾವರಣವಿದೆ. ಅದಕ್ಕೆ ತಕ್ಕಂತೆ ಸರ್ಕಾರದಿಂದಲೂ ಉತ್ತೇಜನ ನೀಡಲಾಗುತ್ತಿದೆ. ಭೂಮಿಗೆ ಬಹಳ ಬೇಡಿಕೆ ಬಂದಿದ್ದು, ಭೂಸ್ವಾಧೀನಕ್ಕಾಗಿ ನಾವು ನಂಜನಗೂಡು ದಾಟಿ ಹೋಗುತ್ತಿದ್ದೇವೆ' ಎಂದು ತಿಳಿಸಿದರು.

`ದೇಶದಲ್ಲಿ ಕರ್ನಾಟಕವು ರಫುö್ತ ವಿಷಯದಲ್ಲಿ ನಂ.1 ಸ್ಥಾನದಲ್ಲಿದೆ. (ಶೇ 24ರಷ್ಟು ಪಾಲು). ಸೇವಾ ರಫುö್ತ ವಲಯದಲ್ಲೂ ನಮ್ಮದು ಶೇ 40ರಷ್ಟು ಪಾಲು ಗಳಿಸಿದೆ. ಎಫ್‌ಡಿಐ ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯವು 2ನೇ ಸ್ಥಾನದಲ್ಲಿದೆ. ಎಐ ಅಥವಾ ಐಟಿ ಸಿಟಿ ರೂಪಿಸಲು ಮೈಸೂರು ಪ್ರಶಸ್ತವಾಗಿದೆ' ಎಂದು ಹೇಳಿದರು.

ಪ್ರಕ್ರಿಯೆ ಸರಳ: 

`ಕಳೆದ ಎರಡು ವರ್ಷಗಳಲ್ಲಿ, ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಲ್ಲಿ 110 ಸೇವೆಗಳನ್ನು ಜೋಡಿಸಲಾಗಿದೆ. ಅಫಿಡವಿಟ್ ಆಧಾರಿತ ಕ್ಲಿಯರೆನ್ಸ್ ಸಿಸ್ಟಂ ಪರಿಚಯಿಸಿದ್ದೇವೆ. ಇದರಡಿ, ನಾವು ನೀಡುವ ಸರ್ಟಿಫಿಕೆಟ್ ಆಧರಿಸಿ, ಕಟ್ಟಡ ನಿರ್ಮಾಣಕ್ಕೆ ಮುನ್ನವೇ ಕಾರ್ಯಾಚರಣೆ ಆರಂಭಿಸಬಹುದಾಗಿದೆ. ಮುಂದೆಯೂ ಮೈಸೂರಿನಲ್ಲಿ ಉದ್ಯಮದ ಬೆಳವಣಿಗೆಗೆ ಉದ್ಯಮಿಗಳ ಪಾತ್ರ ದೊಡ್ಡದಾಗಿದೆ' ಎಂದು ತಿಳಿಸಿದರು.

ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ, `ಕೌಶಲಯುತ ಪ್ರತಿಭೆಗಳು ಅರಳುತ್ತಿರುವ ನಗರವಾಗಿ ಮೈಸೂರು ಗುರುತಿಸಿಕೊಂಡಿದ್ದು, ಬೆಂಗಳೂರಿನಿAದಾಚೆಗೆ ಉದ್ಯಮ ವಿಸ್ತರಣೆ ಎನ್ನುವುದು ಕೇವಲ ಪರಿಕಲ್ಪನೆಯಾಗಿ ಉಳಿದಿಲ್ಲ, ಅದೀಗ ವಾಸ್ತವವಾಗಿ ಸಾಕಾರಗೊಳ್ಳುತ್ತಿದೆ. ಇನ್ನೂ ಅವಕಾಶಗಳಿವೆ. ಇದಕ್ಕೆ ತಕ್ಕಂತೆ ಸರ್ಕಾರದಿಂದಲೂ ಉತ್ತೇಜನ ನೀಡಲಾಗುತ್ತಿದೆ' ಎಂದರು.

`ಎಲ್‌ಇಎಪಿ (ಲೋಕಲ್ ಎಕಾನಮಿ ಅಕ್ಸೆಲರೇಟರ್ ಪ್ರೋಗ್ರಾಂ) ಮೂಲಕ ಮೈಸೂರು, ಮಂಗಳೂರು ಸೇರಿ 2ನೇ ಹಂತದ ನಗರಗಳಿಗೆ ಆದ್ಯತೆ ಕೊಡುತ್ತಿದ್ದೇವೆ. ಪ್ರತ್ಯೇಕವಾಗಿ ಕ್ಲಸ್ಟರ್ ಫಂಡ್ ನೀಡುತ್ತಿದ್ದೇವೆ. ಎಲ್‌ಇಎಪಿ ಕ್ಲಬ್ ರಚಿಸಲಾಗುತ್ತಿದೆ' ಎಂದು ಹೇಳಿದರು.

ನಿಪುಣ ಕಾರ್ಯಕ್ರಮದಲ್ಲಿ ತರಬೇತಿ: 

`ಎಲ್‌ಎಎಚ್‌ಎಆರ್‌ಐ’ ಅಡ್ವಾನ್ಡ್ ಎಲೆಕ್ಟಾçನಿಕ್ಸ್ ಟೆಸ್ಟ್ ಫೆಸಿಲಿಟಿ ಬರಲಿದ್ದು, ಇದಕ್ಕಾಗಿ ರೂ. 100 ಕೋಟಿ ಬಂಡವಾಳ ಹೂಡಿಕೆ ಆಗುತ್ತಿದೆ. ಕೌಶಲ ವೃದ್ಧಿಗಾಗಿ `ನಿಪುಣ' ಕಾರ್ಯಕ್ರಮದಲ್ಲಿ ತರಬೇತಿ ಕೊಡಲಾಗುತ್ತಿದ್ದು, ಈವರೆಗೆ 6ಸಾವಿರ ಮಂದಿ ಪಡೆದುಕೊಂಡಿದ್ದಾರೆ. ಶೈಕ್ಷಣಿಕ ಸಂಸ್ಥೆಗಳೊAದಿಗೆ ಇಂಟರ್ನ್ಶಿಪ್ ಮೊದಲಾದವುಗಳಿಗೆ ಸಹಭಾಗಿತ್ವ ನೀಡಲಾಗುತ್ತಿದೆ' ಎಂದು ತಿಳಿಸಿದರು.

`ಡಿಜಿಟಲ್ ಎಕಾನಮಿಗೆ ಸಂಬAಧಿಸಿದAತೆ, ದೇಶದಲ್ಲೇ ಮೊದಲನೇ ಬಾರಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮಿತಿ ರಚಿಸಲಾಗಿದೆ. ಮೈಸೂರಿನಲ್ಲಿ ಹೆದ್ದಾರಿಗೆ ಹೊಂದಿಕೊAಡAತೆ 50 ಎಕೆರೆ ಜಾಗ ನೀಡುವಂತೆ ಮೈಸೂರು ಜಿಲ್ಲಾಧಿಕಾರಿಯನ್ನು ಕೋರಲಾಗಿದೆ' ಎಂದು ತಿಳಿಸಿದರು.

`ಮೈಸೂರಿನ ಕೆಎಸ್‌ಒಯುನಲ್ಲಿ ಜಿಟಿಸಿ (ಗ್ಲೋಬಲ್ ಟೆಸ್ಟಿಂಗ್ ಸೆಂಟರ್) ಸಿದ್ಧವಿದೆ. ಒಂದು ಲಕ್ಷ ಚ.ಅಡಿಯ ಆ ಕಟ್ಟಡದಲ್ಲಿ 80ಸಾವಿರ ಚ.ಅಡಿಯನ್ನು ಉದ್ಯಮಿಗಳ ಅಗತ್ಯಕ್ಕೆ ತಕ್ಕಂತೆ ಬಾಡಿಗೆ ಕೊಡಲಾಗುವುದು. ಮೈಸೂರಿಗೆ ರೂ. 25 ಕೋಟಿ ಕ್ಲಸ್ಟರ್ ಸೀಡ್ ಫಂಡ್ ಕೂಡ ದೊರೆತಿದೆ' ಎಂದರು.

2ನೇ ಐಟಿ ಸಿಟಿ: 

`ಇಲ್ಲಿನ ವಾತಾವರಣವನ್ನು ಗಮನಿಸಿಯೇ ಕಳೆದ ಬಜೆಟ್‌ನಲ್ಲಿ, ಮೈಸೂರು ರಾಜ್ಯದ 2ನೇ ಐಟಿ ಸಿಟಿ ಎಂದು ಘೋಷಿಸಲಾಗಿದೆ. ಮೈಸೂರಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಗೆ ತಕ್ಕಂತೆ ಉದ್ಯಮಿಗಳು ಮುಂದೆ ಬಂದರೆ ಸಹಕಾರ ನೀಡಲಾಗುವುದು' ಎಂದು ಹೇಳಿದರು. 


ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್‌ಕುಮಾರ್ ಗುಪ್ತ, `ಮೈಸೂರಿನಲ್ಲಿ ಐಟಿ ರಫುö್ತ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಸಾವಿರಕ್ಕೂ ಹೆಚ್ಚು ನವೋದ್ಯಮಗಳಿದ್ದು, 650ಕ್ಕೂ ಹೆಚ್ಚು ನೋಂದಾಯಿಸಿವೆ. ಮೈಸೂರು ಡಿಜಿಟಲ್ ಎಕಾನಮಿಯ ಮೌಲ್ಯ 1.3 ಬಿಲಿಯನ್ ಡಾಲರ್ ಆಗಿದ್ದು, ಬಯೋಟೆಕ್ ಸೇರಿ ಒಟ್ಟು ಮೌಲ್ಯ 5.4 ಬಿಲಿಯನ್ ಡಾಲರ್ ತಲುಪಿದೆ. ಮುಂದಿನ ದಿನಗಳಲ್ಲಿ ಇದನ್ನು 10 ಬಿಲಿಯನ್ ಡಾಲರ್‌ಗೆ ಏರಿಸುವ ಗುರಿ ಹೊಂದಲಾಗಿದೆ' ತಿಳಿಸಿದರು.

`ಪ್ರಸ್ತುತ ಮೈಸೂರು ಕ್ಲಸ್ಟರ್‌ನಲ್ಲಿ 25ಸಾವಿರಕ್ಕೂ ಹೆಚ್ಚು ಐಟಿ-ಐಟಿಇಎಸ್ ಉದ್ಯೋಗಿಗಳು, 14ಸಾವಿರ ಎಲೆಕ್ಟಾçನಿಕ್ಸ್ ಉತ್ಪಾದನಾ ವಲಯದ ಸಿಬ್ಬಂದಿ, 5ಸಾವಿರಕ್ಕೂ ಹೆಚ್ಚು ಬಿಎಫ್‌ಎಸ್‌ಐ ಉದ್ಯೋಗಿಗಳು ಹಾಗೂ 4ಸಾವಿರ ಆರೋಗ್ಯ ಕ್ಷೇತ್ರದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸ ಕಂಪನಿಗಳು ಮೈಸೂರಿನಲ್ಲಿ ಹೂಡಿಕೆ ಮಾಡುತ್ತಿವೆ' ಎಂದು ಮಾಹಿತಿ ನೀಡಿದರು. 

ಉದ್ಯಮಿ ಸುಧನ್ವ ಧನಂಜಯ ಮಾತನಾಡಿ, `ಆರು ವರ್ಷಗಳಲ್ಲಿ ಬಿಗ್‌ಟೆಕ್ ಷೊ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದು ತಂತ್ರಜ್ಞಾನದ ಉದ್ಯಮಕ್ಕೆ ಸಂಬAಧಿಸಿದAತೆ ಇಲ್ಲಿನವರಲ್ಲಿರುವ ಆಸಕ್ತಿಯನ್ನು ತೋರಿಸುತ್ತದೆ' ಎಂದರು.

`ಪಿAಚಣಿದಾರರ ಸ್ವರ್ಗ, ಅರಮನೆಗಳ ನಗರಿ ಎಂದೆಲ್ಲಾ ಹಿಂದೆ ಗುರುತಿಸಿಕೊಳ್ಳುತ್ತಿದ್ದ ಮೈಸೂರು ಈಗ ವ್ಯಾಪಾರಕ್ಕೆ ಉತ್ತಮ ತಾಣವಾಗಿ ಮಾರ್ಪಾಡಾಗಿದೆ. ಹಲವು ನವೋದ್ಯಮಗಳು ಬರುತ್ತಿವೆ. ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಬೆಳವಣಿಗೆಗೆ ಬಹಳಷ್ಟು ಅವಕಾಶವಿದೆ. ಮೈಸೂರಿನ ಬೆಳವಣಿಗೆಗೆ ಡಿಜಿಟಲ್ ಎಕಾನಮಿ ಮಿಷನ್ ಸಹಕಾರಿಯಾಗಿದೆ' ಎಂದು ಹೇಳಿದರು. ಶಂಕರ್‌ಪ್ರಕಾಶ್ ನಿರೂಪಿಸಿದರು.