2026-27ನೇ ಸಾಲಿನ ಬಜೆಟ್‌ನಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡಲು ರೈತಸಂಘ ಒತ್ತಾಯ

ಡ್ರಗ್ಸ್ ಕಿಂಗ್‌ಪಿನ್‌ಗಳ ಬಂಧನ, ಕಂದಾಯ ಇಲಾಖೆ ಭ್ರಷ್ಟಾಚಾರ ತಡೆಗಟ್ಟಲು ಇಂಗಲಗುಪ್ಪೆ ಕೃಷ್ಣೇಗೌಡ ಆಗ್ರಹ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6 ರಂದು ಮಂಡಿಸಲಿರುವ 2026-27ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ರೈತರ ವಿವಿಧ ರಾಷ್ಟಿçÃಕೃತ ಬ್ಯಾಂಕುಗಳು, ಸೊಸೈಟಿ ಮತ್ತಿತರ ಸಹಕಾರಿ ಸಂಸ್ಥೆಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯಿಸಿದರು.

ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಕುರಿತು ಮಾತನಾಡುವಾಗ ತಾವು ರೈತನಾಯಕ ಪ್ರೊ.ನಂಜುAಡಸ್ವಾಮಿ ಅವರ ಶಿಷ್ಯ, ನಾನೂ ರೈತಸಂಘದಲ್ಲಿ ಇದ್ದೆ, ನನಗೂ ರೈತರ ಕಷ್ಟ ಗೊತ್ತು ತಾವು ರೈತಪರ ಎಂದು ಎಲ್ಲಾ ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಿದ್ದು, 2026-27ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವ ಮೂಲಕ ತಾವು ನಿಜವಾಗಿಯೂ ರೈತಪರ ಎಂದು ಸಾಬೀತು ಮಾಡಬೇಕು ಎಂದು ಸವಾಲು ಹಾಕಿದರು.

ಒಂದು ಕಡೆ ಅತೀವೃಷ್ಟಿ, ಮತ್ತೊಂದು ಕಡೆ ಅನಾವೃಷ್ಟಿ, ಜತೆಗೆ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ, ರೈತರು ಸಾಕಷ್ಟು ಸಂಕಷ್ಟದಲ್ಲಿ ಇದ್ದು, ಸರ್ಕಾರ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದರಿಂದ ರೈತರು ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರಣದಿಂದ 2026-27ನೇ ಸಾಲಿನ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಬೇಕು.

ಹೊಸ ಸಾಲಗಳಿಗೆ ಶೂನ್ಯ ಬಡ್ಡಿದರವನ್ನು ಜಾರಿಗೊಳಿಸಬೇಕು. ಇದರಿಂದ ರೈತರ ಆತ್ಮಹತ್ಯೆಗಳನ್ನು ತಡೆಯುವಂತಾಗುತ್ತದೆ. ಮತ್ತು ಆರ್ಥಿಕ ಸ್ಥಿರತೆ ಸಾಧ್ಯವಾಗುತ್ತದೆ.

ಕರ್ನಾಟಕದ ಲಕ್ಷಾಂತರ ಬಡ ರೈತರು ನಮೂನೆ 50, 53 ಮತ್ತು 57ರ ಅಡಿಯಲ್ಲಿ ಬಗರ್ ಹುಕುಂ ಭೂಮಿ ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿದ್ದಾರೆ. ಅನೇಕ

ವರ್ಷಗಳಿಂದ ಅರ್ಹರಿಗೆ ನ್ಯಾಯ ದೊರಕದೇ ಇರುವುದರಿಂದ, ಮುಂದಿನ ಬಜೆಟ್‌ನಲ್ಲಿ ಈ ಅರ್ಜಿಗಳ ಶೀಘ್ರ ವಿಲೇವಾರಿ, ಅರ್ಹ ರೈತರಿಗೆ ಭೂ ಹಕ್ಕು ಮಂಜೂರಾತಿ ಮತ್ತು ಬಗರ್ ಹುಕುಂ ಡಿಜಿಟಲ್ ಪ್ರಕ್ರಿಯೆಗೆ ವಿಶೇಷ ನಿಧಿ ಮತ್ತು ಕಟ್ಟುನಿಟ್ಟಿನ ನಿರ್ದೇಶನಗಳನ್ನು ಒದಗಿಸಬೇಕು. ಇದರಿಂದ ರಾಜ್ಯದ ರೈತರ ಜೀವನೋಪಾಯ ಸುಧಾರಿಸಿ, ರಾಜ್ಯದ ಕೃಷಿ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಗ್ರೇಟರ್ ಮೈಸೂರು ರೈತರಿಗೆ ಮಾರಕವಾಗದಿರಲಿ :

ಮೈಸೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಮೈಸೂರು ಎಂದು ಘೋಷಣೆ ಮಾಡಿದ್ದು,  ಭೂಮಿಗೆ ಬಂಗಾರದ ಬೆಲೆ ಸಿಗುತ್ತಿದೆ. ಈ ನಡುವೆ ಬಡ ರೈತರ ತುಂಡು ಭೂಮಿಯನ್ನು ಬಲಾಢ್ಯರು ಖರೀದಿಸಲು ಮುಂದಾಗಿದ್ದು, ಇದಕ್ಕೆ ರಾಜಕಾರಣಿಗಳೇ ದಲ್ಲಾಳಿಗಳಾಗಿದ್ದಾರೆ. ಒಂದು ಕಡೆ ವೇದಿಕೆಯಲ್ಲಿ ರೈತರಿಗೆ ಭೂಮಿ ಮಾರಬೇಡಿ ಎನ್ನುವುದು, ಮತ್ತೊಂದು ಕಡೆ ಜನಪ್ರತಿನಿಧಿಗಳ ಬೇನಾಮಿ ಲೇ ಔಟ್‌ಗಳ ನಿರ್ಮಾಣಕ್ಕೆ ಪರೋಕ್ಷ ಬೆಂಬಲ ನೀಡುವುದು ಮೈಸೂರು ತಾಲ್ಲೂಕಿನಲ್ಲಿ ನಡೆಯುತ್ತಿದೆ. ರೈತರ ಭೂಮಿ ಪುಢಾರಿಗಳ ಪಾಲಾಗದಂತೆ ಸರ್ಕಾರ ತಡೆಗಟ್ಟಬೇಕು ಎಂದು ಕೃಷ್ಣೇಗೌಡ ಆಗ್ರಹಿಸಿದರು.

ಕಂದಾಯ ಇಲಾಖೆಗಳಲ್ಲಿ ಲಂಚಾವತಾರ :

ರಾಜ್ಯದ ಎಲ್ಲ ತಾಲ್ಲೂಕು ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ, ಸರ್ಕಾರ ಕಂದಾಯ ಇಲಾಖೆಯನ್ನು ಸಾಕಷ್ಟು ಸುಧಾರಣೆ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಲಂಚ ಪಡೆಯುವುದು ನಿಲ್ಲಿಸಿಲ್ಲ, ಇದರಿಂದ ರಾಜ್ಯದ ರೈತರು ಹೈರಾಣರಾಗಿದ್ದಾರೆ. ವಿಎ, ಆರ್‌ಐ, ತಹಸೀಲ್ದಾರ್, ಎಸಿ ಎಲ್ಲ ಕಡೆಯೂ ಭ್ರಷ್ಟಾಚಾರ, ಲಂಚ, ಅಕ್ರಮ ಖಾತಾ ಪ್ರಕರಣಗಳು ನಡೆಯುತ್ತಿವೆ. ಇದನ್ನು ನೋಡುತ್ತಿದ್ದರೆ, ಸರ್ಕಾರ ತಾಲ್ಲೂಕಿಗೆ ಒಂದು ಲೋಕಾಯುಕ್ತ ಕಚೇರಿ ನಿರ್ಮಿಸುವ ಅಗತ್ಯ ಕಾಣುತ್ತಿದೆ. ಕಂದಾಯ ಇಲಾಖೆ ಭ್ರಷ್ಟಾಚಾರ ತಡೆಗೆ ಸರ್ಕಾರ ಸೂಕ್ತ ನಿಯಮಾವಳಿ ರೂಪಿಸಬೇಕು ಎಂದು ಅವರು ಹೇಳಿದರು.

2.5 ಲಕ್ಷ ಹುದ್ದೆ ಭರ್ತಿ ಮಾಡಬೇಕು :

ರಾಜ್ಯದಲ್ಲಿ ಲಕ್ಷಾಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಕಾಲ ಕಾಲಕ್ಕೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ವಿದ್ಯಾವಂತ ಯುವ ಜನಾಂಗಕ್ಕೆ ಉದ್ಯೋಗ ಕೊಡಬೇಕಾದುದು ಸರ್ಕಾರದ ಕರ್ತವ್ಯ, ಆದರೆ ಕಾಂಗ್ರೆಸ್ ಸರ್ಕಾರ ಯಾವುದೇ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡದೆ, ಹಿಂದಿನ ಸರ್ಕಾರದತ್ತ ಬೊಟ್ಟು ತೋರುವುದು ನಾಚಿಕೆಗೇಡಿನ ಸಂಗತಿ, ಧಾರವಾಡದ ಪ್ರತಿಭಟನೆಗೆ ಬೆಚ್ಚಿ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದು, 2.5 ಲಕ್ಷ ಹುದ್ದೆ ಖಾಲಿ ಇದ್ದರೂ ಕೇವಲ 50 ಸಾವಿರ ಭರ್ತಿ ಮಾಡುವುದು ವಿದ್ಯಾವಂತ ಯುವಕರಿಗೆ ನೀವು ಮಾಡುತ್ತಿರುವ ಘೋರ ಅನ್ಯಾಯ. ಸರ್ಕಾರ ಕೂಡಲೇ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಕೃಷ್ಣೇಗೌಡ ಹೇಳಿದರು.

ಮಾದಕ ವಸ್ತುಗಳ ನಿಯಂತ್ರಣ ಅಗತ್ಯ :

ಸಾಂಸ್ಕೃತಿಕ ರಾಜಧಾನಿ, ನಿವೃತ್ತರ ಸ್ವರ್ಗ, ಅರಮನೆಗಳ ತವರು, ಅತ್ಯುತ್ತಮ ಪ್ರವಾಸೋದ್ಯಮ ಕ್ಷೇತ್ರವಾಗಿರುವ ಮೈಸೂರು ಇಂದು ಡ್ರಗ್ಸ್ ಕೇಂದ್ರವಾಗಿದೆ.

ಪೊಲೀಸರು ದಿನನಿತ್ಯ ಹಲವಾರು ಡ್ರಗ್ಸ್ ಮಾರಾಟಗಾರರನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ ಮೌಲ್ಯದ ಡ್ರಗ್ಸ್ ವಶ ಪಡೆಯುತ್ತಿರುವುದೇ ಇಲ್ಲಿನ ಡ್ರಗ್ಸ್ ದಂಧೆ ಎಂತಹದು ಎಂದು ತೋರುತ್ತಿದೆ.

ಮೈಸೂರು ನಗರವು ದೇಶದಲ್ಲೆ ಒಂದು ಅತ್ಯುತ್ತಮ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿದೆ. ಆದರೇ, ಇಲ್ಲಿನ ಡ್ರಗ್ಸ್ ದಂಧೆಗೆ ನೂರಾರು ಅಮಾಯಕ ವಿದ್ಯಾರ್ಥಿಗಳು, ಯುವಕ, ಯುವತಿಯರು ಬಲಿಯಾಗುತ್ತಿದ್ದಾರೆ. ಈ ನಡುವೆ ಮೈಸೂರು ಪೊಲೀಸರು ಡ್ರಗ್ಸ್ ಪೆಡ್ಲರ್‌ಗಳ ಹೆಡೆಮುರಿ ಕಟ್ಟಿ ಬಂಧಿಸುವ ಕೆಲಸ ನಡೆಯುತ್ತಿದ್ದರೂ ಡ್ರಗ್ಸ್ ದಂಧೆಯ ಪ್ರಮುಖ ಕಿಂಗ್‌ಪಿನ್‌ಗಳ ಬಂಧನ ನಡೆಯುತ್ತಿಲ್ಲ, ಸರ್ಕಾರ ಮೈಸೂರು ಪೊಲೀಸರಿಗೆ ಮತ್ತಷ್ಟು ಶಕ್ತಿ ತುಂಬಿ ಟ್ರಗ್ಸ್ ಮಾರಾಟ ಜಾಲವನ್ನು ಹತ್ತಿಕ್ಕುವ ಮೂಲಕ ಮೈಸೂರು ಮತ್ತು ಇಡೀ ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಬೇಕು ಎಂದು ಅವರು ಹೇಳಿದರು.

ಕುರ್ಚಿ ಕಚ್ಚಾಟ ಬಿಡಿ, ರೈತರ ಹಿತ ಕಾಪಾಡಿ:

ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಚ್ಚಾಟದಿಂದ ಅಭಿವೃದ್ಧಿ ಕುಂಠಿತಗೊAಡಿದೆ. 

ಇವರ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಸರ್ಕಾರ ಗ್ಯಾರಂಟಿಗಳ ಹಿಂದೆ ಬಿದ್ದು, ರಸ್ತೆ, ನೀರಾವರಿ, ಕೈಗಾರಿಕೆ ಮುಂತಾದ ಯೋಜನೆಗಳನನ್ನು ಕೈಗೆತ್ತಿಕೊಂಡಿಲ್ಲ, ಇದರಿಂದ ರೈತರು, ಬಡವರ ಅಭಿವೃದ್ಧಿ ಕನಸಾಗಿದೆ. ನಿರುದ್ಯೋಗ ಹೆಚ್ಚಾಗಿದೆ. ಕೂಡಲೇ ಕುರ್ಚಿ ಕಚ್ಚಾಟ ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಕೃಷ್ಣೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದ ಹಿರಿಯ ಮುಖಂಡರು, ರಾಜ್ಯ ಸಂಚಾಲಕರಾದ ಕೆಆರ್‌ಎಸ್ ರಾಮೇಗೌಡ, ರಾಜ್ಯ ಕಾರ್ಯದರ್ಶಿ ಡಾ. ಅರುಣ್ ಕುಮಾರ್, ಪಿರಿಯಾಪಟ್ಟಣ ತಾಲ್ಲೂಕು ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ತಮ್ಮಣ್ಣೇಗೌಡ, ಪ್ರಧಾನ ಕಾರ್ಯದರ್ಶಿ ಯೋಗೇಶ್, ಬೆಟ್ಟದಪುರ ಹೋಬಳಿ ಗೌರವ ಅಧ್ಯಕ್ಷರಾದ ರಾಜೇಗೌಡ, 

ವರುಣ ಹೋಬಳಿ ಅಧ್ಯಕ್ಷ ಪುಟ್ಟಸ್ವಾಮಿ ನಾಯಕ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ನಾಗರಾಜು, ಹಾಸನ ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷರಾದ ತಾರಾ, ಮೈಸೂರು ಜಿಲ್ಲಾ ಮಹಿಳಾ ಅಧ್ಯಕ್ಷರಾದ ದಾಕ್ಷಾ ಶಿವರಾಮ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ವೆಂಕಟೇಶ್, ಅಂಕ್ಕಪ್ಪ  ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷರಾದ ಸಿದ್ದಪ್ಪ, ಮಂಡ್ಯ ಜಿಲ್ಲಾ ರಕ್ಷಣಾ ವೇದಿಕೆ ಅಧ್ಯಕ್ಷರಾದ ಅಶೋಕ್, ಬೆಂಗಳೂರು ನಗರ ಉಪಾಧ್ಯಕ್ಷರಾದ ರಘು, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಕೆಂಪರಾಜು, ಪಾಂಡವಪುರ ತಾಲ್ಲೂಕು ಅಧ್ಯಕ್ಷರಾದ ಸಂತೋಷ್, ಬೆಳಗಾವಿ ಜಿಲ್ಲಾ ಸಂಚಾಲಕರಾದ ಈರಣ್ಣ, ಶ್ರೀರಂಗಪಟ್ಟಣ ತಾಲ್ಲೂಕು ಅಧ್ಯಕ್ಷರಾದ ರವಿಕುಮಾರ್ ಮತ್ತಿತರ ಮುಖಂಡರು ಇದ್ದರು.


ರೇಷ್ಮೇ ಸಚಿವರ ಹೇಳಿಕೆಗೆ ಖಂಡನೆ
ತಂಬಾಕು ಬೆಳೆಗಾರರು ಬೆಲೆ ಇಲ್ಲದೆ, ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿವಿಧ ಕಂಪನಿಗಳು ತಂಬಾಕನ್ನು ಕಡಿಮೆ ಬೆಲೆಗೆ ಕೊಳ್ಳಲು ಸಂಚು ನಡೆಸಿವೆ. ತಂಬಾಕಿಗೆ ಉತ್ತಮ ಬೆಲೆ ಕೊಡಿಸಲು ಮುಂದಾಗದ ಸಚಿವರಾದ ಕೆ.ವೆಂಕಟೇಶ್ ಅವರು ಈ ಭಾಗದ ರೈತರು ಮುಂದಿನ ವರ್ಷ ಯಾರೂ ತಂಬಾಕು ಬೆಳೆಯಬೇಡಿ ಎಂದು ಹೇಳಿರುವುದು ನಾಚಿಕೆ ಗೇಡಿನ ಸಂಗತಿ, ತಂಬಾಕಿಗೆ ಬೆಲೆ ಸಿಗದಿದ್ದರೆ ತಂಬಾಕು ಬೆಳೆಯಬೇಡಿ, ಕಬ್ಬಿಗೆ ಬೆಲೆ ಸಿಗದಿದ್ದರೆ ಕಬ್ಬು ಬೆಳೆಯಬೇಡಿ, ಭತ್ತಕ್ಕೆ ಬೆಲೆ ಸಿಗದಿದ್ದರೆ ಭತ್ತ ಬೆಳೆಯಬೇಡಿ ಎನ್ನುವುದು ಹೇಳುವುದು ಬಾಲಿಷ ಹೇಳಿಕೆ. ಕೂಡಲೇ ಸಚಿವರು ತಮ್ಮ ಹೇಳಿಕೆ ಹಿಂಪಡೆದು ತಂಬಾಕಿಗೆ ಉತ್ತಮ ಬೆಲೆ ಕೊಡಿಸಲು ಮುಂದಾಗಬೇಕು.
ಇಂಗಲಗುಪ್ಪೆ ಕೃಷ್ಣೇಗೌಡ, ರಾಜ್ಯಾಧ್ಯಕ್ಷರು