ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ಮೈಸೂರು ನಗರ ಕಾಂಗ್ರೆಸ್ ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಎಂ.ರಸೂಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳು, ನಗರದ ರೈಲ್ವೆ ನಿಲ್ದಾಣದ ಮುಂಭಾಗ, ಕೆ.ಆರ್.ಆಸ್ಪತ್ರೆ ಎದುರು ಮತ್ತು ವಿವಿಧ ರಸ್ತೆಗಳ ಫುಟ್‌ಪಾತ್‌ಗಳಲ್ಲಿ ಮಲಗಿರುವ ಸುಮಾರು ೫೦೦ಕ್ಕೂ ಹೆಚ್ಚು ನಿರ್ಗತಿಕರಿಗೆ ಬೆಡ್‌ಶೀಟ್‌ಗಳನ್ನು ವಿತರಣೆ ಮಾಡಿದರು.
ಮೈಸೂರು ನಗರ ಕಾಂಗ್ರೆಸ್ ಬೀದಿಬದಿ ವ್ಯಾಪಾರಿಗಳ ವಿಭಾಗದ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ಮಾತನಾಡಿ, ಫೆ.೫ ರಂದು ನಮ್ಮ ನೆಚ್ಚಿನ ನಾಯಕರಾದ ಎಂ.ರಸೂಲ್ ಅವರ ಹುಟ್ಟು ಹಬ್ಬದ ಪ್ರಯುಕ್ತ
ಇಂದು ರಾತ್ರಿ ಮೈಸೂರಿನ ವಿವಿಧ ರಸ್ತೆಗಳ ಫುಟ್‌ಪಾತ್‌ಗಳಲ್ಲಿ ಮಲಗಿರುವ ಸುಮಾರು ಐನೂರಕ್ಕೂ ಹೆಚ್ಚು ನಿರ್ಗತಿಕರಿಗೆ ಚಳಿಯ ರಕ್ಷಣೆಗಾಗಿ ಬೆಡ್‌ಶೀಟ್ ವಿತರಣೆ ಮಾಡುತ್ತಿದ್ದೇವೆ.
ಫೆ.೫ ರಂದು ಕೆ.ಆರ್. ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣ ಹಂಪಲು ವಿತರಣೆ ಮತ್ತು ಅನ್ನ ಸಂತರ್ಪಣೆಯನ್ನೂ ಸಹ ಏರ್ಪಾಡು ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮೊಹಮ್ಮದ್ ಆರಿಫ್, ಮೊಹಮ್ಮದ್ ಝಾಕೀರ್, ಮೊಹಮ್ಮದ್ ಸಾದಿಖ್, ನಾಸೀರ್ ಖಾನ್, ಎಂ.ಡಿ. ಮುಜು, ಆರಿಫ್, ನಯಾಜ್ ಖಾನ್, ಇಬ್ರಾಹಿಂ, ಜುನೈದ್, ಅಲೀಮ್, ಇರ್ಫಾನ್, ಆಸೀಫ್, ಮಣಿ, ಸಯೀದ್ ಷಾರಿಕ್, ಅನಿಲ್ ಕುಮಾರ್, ಶಶಿ ಕುಮಾರ್, ಯಾಸೀನ್, ಇಮ್ರಾನ್, ಷಾರೂಖ್, ಬಖಷ್, ಮುಂತಾದವರು ಇದ್ದರು.





