ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರವರಿ 26 ರಂದು ಮೈಸೂರು ಆಟೋ ಚಾಲಕರಿಂದ ಬೆಂಗಳೂರಿಗೆ ಪಾದಯಾತ್ರೆ : ಮುಖ್ಯಮಂತ್ರಿಗಳಿಗೆ ಮರು ಮನವಿ


 ಮೈಸೂರು : ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಫೆ.26ರಂದು ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಸಂಯುಕ್ತ ಕರ್ನಾಟಕ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ದಿ ಸಂಘ ನಿರ್ಧರಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ಸಂಯುಕ್ತ ಕರ್ನಾಟಕ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಎಂ.ವಿ.ಶ್ರೀನಿವಾಸ ಮಿತ್ರ ಮಾತನಾಡಿ, ಫೆ.26ರಂದು ಬೆಳಗ್ಗೆ 10 ಗಂಟೆಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿAದ 200ಕ್ಕೂ ಹೆಚ್ಚು ಆಟೋ ಚಾಲಕರು ಮತ್ತು ಮಾಲೀಕರು ಬೆಂಗಳೂರಿಗೆ ಪಾದಯಾತ್ರೆ ಮೂಲಕ ತೆರಳಿ ಮುಖ್ಯಮಂತ್ರಿಗಳಿಗೆ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸುತ್ತೇವೆ ಎಂದರು.

ಈ ಹಿಂದೆಯೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ, ಆದಾಗ್ಯೂ ನಮ್ಮ ಬೇಡಿಕೆ ಈಡೇರದ ಕಾರಣ ಮರು ಮನವಿ ಸಲ್ಲಿಸುತ್ತಿದ್ದೇವೆ. ಪ್ರಸ್ತುತ ಎಫ್‌ಸಿ ಶುಲ್ಕ ಹೆಚ್ಚಿಸಿರುವುದನ್ನು ಕೂಡಲೇ ರದ್ದುಪಡಿಸಿ. ಮೈಸೂರು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಹಾಗೂ ಉಪ ಪ್ರಾದೇಶಿಕ ಸಾರಿಗೆ ಹುಣಸೂರು ಕಚೇರಿಯಲ್ಲಿ ಕೂಡ ಸುಮಾರು ಮೂರು ನಾಲ್ಕು ತಿಂಗಳಿAದ ಎಫ್‌ಸಿ ರಸೀದಿಗಳು ಬರುತ್ತಿಲ್ಲ. ಎಫ್‌ಸಿ ಆಗದೆ ರಸ್ತೆಗಳಲ್ಲಿ ಅಧಿಕಾರಿಗಳು ಸಿಬ್ಬಂದಿ ವರ್ಗದವರು ತಪಾಸಣೆ ಮಾಡುವ ಸಂದರ್ಭದಲ್ಲಿ ದಂಡ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಆಟೋಗಳಿಗೆ ಅಪಘಾತ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಮೈಸೂರು ನಗರದಲ್ಲಿ ಜನಸಂಖ್ಯೆ, ವಾಹನ ಸಂಖ್ಯೆಗಳು ಹೆಚ್ಚುತ್ತಿರುವುದರಿಂದ ಆಟೋರಿಕ್ಷಾ ರಹದಾರಿಯನ್ನು ಕೂಡಲೇ ತಡೆಹಿಡಿಯಬೇಕು. ನಗರದಲ್ಲಿ ಹಾಲಿ ವಾಹನಗಳ ಸಂಖ್ಯೆ ಹೆಚ್ಚು ಇರುವುದರಿಂದ ಸಾರ್ವಜನಿಕರ ಸುರಕ್ಷತೆಗಾಗಿ ವಾಹನಗಳನ್ನು ನಿಲ್ಲಿಸಲು ಸರಿಯಾದ ನಿಲ್ದಾಣಗಳು ಕೂಡಲೇ  ಮಾರ್ಪಡು ಮಾಡಿ   ಸಂಬAಧಪಟ್ಟ ಇಲಾಖೆಗಳು ರಸ್ತೆಯನ್ನು ಅಗಲೀಕರಣ ಬಹುಮುಖ್ಯವಾಗಿ ಮಾಡುವಂತೆ ಆಗ್ರಹಿಸಿದರು.

 ಆಟೋರಿಕ್ಷಾ ಚಾಲಕರಿಗೆ ತಮ್ಮ ದುಡಿಮೆಯಲ್ಲಿ ಮನೆ ಬಾಡಿಗೆ ಕಟ್ಟಲು ಅಸಾಧ್ಯವಾದುದರಿಂದ ಉಚಿತ ಸೂರು ನೀಡಬೇಕು. ಪ್ರಸ್ತುತ ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿರುವಂತೆ ಆಟೋರಿಕ್ಷಾ ಚಾಲಕರಿಗೆ ಸೇವಾ ಯೋಜನೆಯಲ್ಲಿ ಗೌರವ ವಾರ್ಷಿಕ ಭತ್ಯೆಯಾಗಿ 15 ಸಾವಿರ ರೂ. ನೀಡುವಂತೆ. ಆಟೋರಿಕ್ಷಾ ಚಾಲಕರ ಕುಟುಂಬ ಸದಸ್ಯರಿಗೆ  ಉಚಿತ ವೈದ್ಯಕೀಯ ಹಾಗೂ ಉಚಿತ ಶಿಕ್ಷಣ ಒದಗಿಸಬೇಕು. ಅನಾರೋಗ್ಯದಿಂದ ಸ್ವಾಧೀನ ಕಳೆದುಕೊಂಡ ಚಾಲಕರನ್ನು  ಸರ್ಕಾರ ಅನುಕಂಪದಿAದ  ಸ್ಪಂದಿಸುವAತೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಅಹಿಂದ ಒಕ್ಕೂಟದ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಮಾತನಾಡಿ, ಆಟೋ ಚಾಲಕರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಸರ್ಕಾರ ಸೂರು ಒದಗಿಸಬೇಕು ಮತ್ತು ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದರು.

ಪಿ.ಸುನಿಲ್ ಕುಮಾರ್, ಆರ್.ಸುರೇಶ್, ಎಂ.ಹೆಚ್.ಕಿರಣ್, ಜಗದೀಶ್ ಪಂಚಮುಖಿ, ಪ್ರಭುಲಿಂಗು, ಮಂಜುನಾಥ, ಮೀನಾಕ್ಷಿ, ನದೀಮ್, ರವಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.