ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾದಿ ಹಾಡಿದ 10ನೇ ಚಾಮರಾಜ ಒಡೆಯರ್ : ಸಂಸದ ಯದುವೀರ್ ಬಣ್ಣನೆ : ಒಕ್ಕಲಿಗರ ವಿಕಾಸ ವೇದಿಕೆಯಿಂದ 10ನೇ ಚಾಮರಾಜ ಒಡೆಯರ್ ಜನ್ಮದಿನ ಆಚರಣೆ

 ವರದಿ : ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಮೈಸೂರಿಗೆ ರೈಲುಮಾರ್ಗ, ಪ್ರಜಾಪ್ರತಿನಿಧಿ ಸಭೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ ಮೈಸೂರು ಸಂಸ್ಥಾನದ 23ನೇ ಮಹಾರಾಜರಾದ 10ನೇ ಚಾಮರಾಜ ಒಡೆಯರ್ ಅವರ ಕ್ರಾಂತಿಕಾರಕ ನಿರ್ಧಾರಗಳಿಂದ ಮೈಸೂರು ಸಂಸ್ಥಾನ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಮೈಸೂರು ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಭಾನುವಾರ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ರಾಜ್ಯಾಧ್ಯಕ್ಷೆ ಹೆಚ್.ಎಲ್.ಯಮುನ ನೇತೃತ್ವದಲ್ಲಿ ಮೈಸೂರು ಅರಮನೆ ಉತ್ತರ ದ್ವಾರದಲ್ಲಿರುವ 10ನೇ ಚಾಮರಾಜ ಒಡೆಯರ್ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ನುಡಿ ನಮನ, ಪುಷ್ಪ ನಮನ ಕಾರ್ಯಕ್ರಮದಲ್ಲಿ 10ನೇ ಚಾಮರಾಜ ಒಡೆಯರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

10ನೇ ಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ಸಂಸ್ಥಾನದ ಆಧುನಿಕ ಶಿಲ್ಪಿ ಎಂದೇ ಪ್ರಸಿದ್ಧರಾಗಿದ್ದರು, ಅವರು ದೂರದರ್ಶಿ ಆಡಳಿತಗಾರ. 1881-1894 ರವರೆಗೆ ಆಳ್ವಿಕೆ ನಡೆಸಿದ ಅವರು, 1881ರಲ್ಲಿ ‘ಪ್ರತಿನಿಧಿ ಸಭೆ' ಸ್ಥಾಪಿಸಿ, ಭಾರತದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದರು. 

ಶಿಕ್ಷಣ, ರೈಲು ಸಾರಿಗೆ, ಕೈಗಾರಿಕೆ, ಮತ್ತು ಕೃಷಿ ಬ್ಯಾಂಕ್‌ಗಳ ಸ್ಥಾಪನೆಯೊಂದಿಗೆ ಮೈಸೂರನ್ನು ಅಭಿವೃದ್ಧಿಪಡಿಸಿದ ಅವರು, ಸ್ವಾಮಿ ವಿವೇಕಾನಂದರ ಚಿಕಾಗೋ ಪ್ರಯಾಣಕ್ಕೂ ನೆರವಾಗಿದ್ದರು ಎಂದು ಸ್ಮರಿಸಿದರು.

ಸಮಾಜ ಸೇವಕಿ ಕಮಲಾ ನಟರಾಜ್ ಮಾತನಾಡಿ, 10ನೇ ಚಾಮರಾಜ ಒಡೆಯರ್ ಅವರು ಸಂಗೀತ ಮತ್ತು ಕಲೆಗಳ ಆಶ್ರಯದಾತರಾಗಿದ್ದರು. ವೀಣೆ ಸುಬ್ಬಣ್ಣ, ವೀಣೆ ಶೇಷಣ್ಣ ಮುಂತಾದವರು ಇವರ ಆಸ್ಥಾನದಲ್ಲಿದ್ದರು. ಅವರ ದೂರದೃಷ್ಟಿಯ ಆಳ್ವಿಕೆಯು ಆಧುನಿಕ ಮೈಸೂರಿನ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿತು. 

ಇವರ ಆಳ್ವಿಕೆಯಲ್ಲಿ ಸಿ.ವಿ. ರಂಗಚಾರ್ಲು, ಕೆ.ಶೇಷಾದ್ರಿ ಅಯ್ಯರ್ ದಿವಾನರುಗಳಾಗಿ ಸಮರ್ಥ ಆಡಳಿತಕ್ಕೆ ನೇರವಾದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕರಾಮುವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ.ಕೆ.ಬಿ.ಲಿಂಗರಾಜು ಅವರನ್ನು ಒಕ್ಕಲಿಗರ ವಿಕಾಸ ವೇದಿಕೆಯಿಂದ ಗೌರವಿಸಲಾಯಿತು.

ಬಿಜೆಪಿ ಮುಖಂಡರಾದ ರಘು ಆರ್.ಕೌಟಿಲ್ಯ, ಸಂಸ್ಕೃತಿ ಚಿಂತಕರಾದ ಡಾ.ರಘುರಾಂ ವಾಜಪೇಯಿ, ಎಂ.ಎ.ಶ್ರೀಕಾAತರಾಜೇ ಅರಸ್, ಸಮಾಜ ಸೇವಕರಾದ ಕಮಲಾ ನಟರಾಜು, ಪ್ರದೀಪ್ ಕೃಷ್ಣೇಗೌಡ, ಕನ್ನಡಪರ ಹೋರಾಟಗಾರ ಶಿವಶಂಕರ್, ಆರ್‌ಟಿಐ ಕಾರ್ಯಕರ್ತ ಅರವಿಂದ್ ಶರ್ಮಾ, ಉದ್ಯಮಿ ಮೈತ್ರಿರಾಜ್. ಮಹಿಳಾ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಸುಶೀಲ ನಂಜಪ್ಪ, ಸಮಾಜ ಸೇವಕರಾದ ಎಸ್.ಆರ್. ರವಿ ಕುಮಾರ್, ಗಾಯಕರಾದ ಗಾನ ಸುಮಾ, ಸತ್ಯವತಿ, ಪತ್ರಕರ್ತರಾದ ರಾಜೇಶ್, ಜಿ. ಪ್ರಕಾಶ್, ಶಿವಶಂಕರ್ ಕಾರ್ಯಕ್ರಮದಲ್ಲಿ ಇದ್ದರು.

1868 ರಿಂದ 1894 ರವರೆಗೆ ಮೈಸೂರು ಸಂಸ್ಥಾನವನ್ನು ಆಳಿದ 10ನೇ ಚಾಮರಾಜ ಒಡೆಯರ್ ಅವರು, ಭಾರತದ ರಾಜಪ್ರಭುತ್ವ ರಾಜ್ಯಗಳಲ್ಲಿ  ಮೊದಲ ಆಧುನಿಕ ಶಾಸಕಾಂಗ ಸಂಸ್ಥೆಗಳನ್ನು ಸ್ಥಾಪಿಸಿದವರು.

ಮಹಿಳಾ ಶಿಕ್ಷಣಕ್ಕೆ ವಿಶೇಷ ಆದ್ಯತೆ, ಕನ್ನಡ ಬಾಶೋಜ್ಜೀವಿನಿ ಶಾಲೆ ಸ್ಥಾಪನೆ. ರೈತರಿಗಾಗಿ ಕೃಷಿ ಬ್ಯಾಂಕ್‌ಗಳು ಮತ್ತು ನೌಕರರಿಗೆ ಜೀವ ವಿಮೆ. ಕೈಗಾರಿಕಾ ಶಾಲೆಗಳ ಸ್ಥಾಪನೆ ಮತ್ತು ದಸರಾ ಕೈಗಾರಿಕಾ ಪ್ರದರ್ಶನವನ್ನು ಪ್ರಾರಂಭಿಸಿದರು ಎಂದು ಹೇಳಿದರು. 1881 ರಲ್ಲಿ ಮೈಸೂರು ಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು. ಭಾರತದ ಮೊದಲ ಆಧುನಿಕ ಪ್ರಜಾಪ್ರಭುತ್ವದ ಶಾಸಕಾಂಗ ಸಂಸ್ಥೆಯಾಗಿತ್ತು.

ಹೆಚ್.ಎಲ್.ಯಮುನ, ರಾಜ್ಯಾಧ್ಯಕ್ಷೆ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ