2026-27ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ವಕೀಲರ ಕಲ್ಯಾಣಕ್ಕೆ 200 ಕೋಟಿ ಹಣ ಮೀಸಲಿಡಬೇಕೆಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಭ್ಯರ್ಥಿ, ಹಿರಿಯ ವಕೀಲರಾದ ಪುಟ್ಟಸಿದ್ದೇಗೌಡ ಮನವಿ


ವರದಿ : ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ವಕೀಲರ ಕಲ್ಯಾಣ ನಿಧಿಗೆ 100 ಕೋಟಿ ರೂ ಮತ್ತು ಆರೋಗ್ಯ ನಿಧಿಗೆ 100 ಕೋಟಿ ರೂ. ಹಣವನ್ನು ಮೀಸಲಿಡಬೇಕೆಂದು ಮೈಸೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಭ್ಯರ್ಥಿö ಪುಟ್ಟಸಿದ್ದೇಗೌಡ ಮನವಿ ಮಾಡಿದರು. 

ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1 ಲಕ್ಷದ 40 ಸಾವಿರ ವಕೀಲರು ನ್ಯಾಯಾಂಗ ಕ್ಷೆöÃತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರುಗಳಿಗೆ ಸರ್ಕಾರದಿಂದ ಯಾವುದೇ ಸೌಲಭ್ಯವಿರುವುದಿಲ್ಲ. ಇದರಿಂದ ಸರ್ಕಾರ 2026-27ನೇ ಸಾಲಿನ ಬಜೆಟ್‌ನಲ್ಲಿ 100 ಕೋಟಿ ರೂ.ಗಳ ಅನುದಾನವನ್ನು ಮೀಸಲಿಟ್ಟು ವಕೀಲರು ನಿವೃತ್ತಿಯಾದಾಗ, ಅಪಘಾತದಿಂದ ಮರಣ ಹೊಂದಿದಾಗ ಪರಿಹಾರ ಹಣ ನೀಡುವ ಮೂಲಕ ನೊಂದ ಕುಟುಂಬಕ್ಕೆ ನೆರವಾಗಬೇಕೆಂದು ಒತ್ತಾಯಿಸಿದರು. 

ಜತೆಗೆ ವಕೀಲರ ಆರೋಗ್ಯ ನಿಧಿ ಸ್ಥಾಪಿಸಿ ಅದಕ್ಕೂ 100 ಕೋಟಿ ಅನುದಾನ ಮೀಸಲಿಡಬೇಕು, ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಕುರಿತು ಮಾತನಾಡಬೇಕೆಂದು ಪುಟ್ಟಸಿದ್ದೇಗೌಡ ಒತ್ತಾಯಪೂರ್ವಕ ಮನವಿ ಸಲ್ಲಿಸಿದರು.

ರಾಜ್ಯದ ಅನೇಕ ವಕೀಲರ ಸಂಘಗಳಿಗೆ ಸ್ವಂತ ಕಟ್ಟಡವಿರುವುದಿಲ್ಲ. ಅನೇಕ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಬೇಕು. ವಿಶ್ರಾಂತಿ ಕೊಠಡಿಗಳ ನಿರ್ಮಾಣ ಹಾಗೂ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಕೋರಿದರು. 

ಸಮಾಜದ ಬಗ್ಗೆ ಕಳಕಳಿಯಿರುವ ವಕೀಲರೂ ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾಯವಾದಿಗಳ ಕಷ್ಟಸುಖದ ಅರಿವಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ವಕೀಲರಾದ ಲೋಕೇಶ್ ಕೆ.ನಂಜುAಡನಾಯಕ, ಕಾರ್ತಿಕ್, ಕೃಷ್ಣ, ಚಂದನ್ ಇದ್ದರು.

ಮುಖ್ಯಮಂತ್ರಿಗಳ ಖುದ್ದು ಭೇಟಿ

ನಿಖರ ಅದಾಯದ ಮೂಲವಿಲ್ಲದೇ ಕರ್ತವ್ಯ ನಿರ್ವಹಿಸುವ ಯುವ ವಕೀಲರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಫೆಬ್ರವರಿ 25 ರಂದು ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಭೇಟಿ ನೀಡಲಿದ್ದು, ಈ ವೇಳೆ ವಕೀಲರ ಜತೆಗೂಡಿ ಸಿಎಂ ಅವರನ್ನು ಭೇಟಿ ಮಾಡಿ ವಕೀಲರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಮನವರಿಕೆ ಮಾಡಿ ಬಜೆಟ್‌ನಲ್ಲಿ 200 ಕೋಟಿ ಹಣ ವಕೀಲರ ಕಲ್ಯಾಣಕ್ಕೆ ಮೀಸಲಿಡುವಂತೆ ಮನವಿ ಸಲ್ಲಿಸಲಾಗುವುದು.

ಪುಟ್ಟಸಿದ್ದೇಗೌಡ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಭ್ಯರ್ಥಿö