ಮೈಸೂರಿನಲ್ಲಿ ಫೆ.16ರಿಂದ 20ರವರೆಗೆ ಐದು ದಿನಗಳ 38ನೇ ಅಖಿಲ ಭಾರತ ಅಂಚೆ ಸಾಂಸ್ಕöÈತಿಕ ಸಮಾರಂಭ

ಮೈಸೂರು: ಫೆ.16ರಿಂದ 20ರವರೆಗೆ ಅಂಚೆ ಇಲಾಖೆ ವತಿಯಿಂದ ಮೈಸೂರಿನಲ್ಲಿ 38ನೇ ಅಖಿಲ ಭಾರತ ಅಂಚೆ ಸಾಂಸ್ಕöÈತಿಕ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ವೃತ್ತದ ಸ್ಥಾನಿಕ ನಿರ್ದೇಶಕ ಸಂದೇಶ್ ಮಹದೇವಪ್ಪ ಹೇಳಿದರು.

ನಗರದ ಅಂಚೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ 3ನೇ ಬಾರಿಗೆ, ಕರ್ನಾಟಕದಲ್ಲಿ ನಾಲ್ಕನೇ ಬಾರಿಗೆ ಅಖಿಲ ಭಾರತ ಅಂಚೆ ಸಾಂಸ್ಕöÈತಿಕ ಸಮಾರಂಭ ಆಯೋಜಿಸಲಾಗಿದೆ. 

ಫೆ.16ರಿಂದ 20ರವರೆಗೆ 5 ದಿನಗಳ ಕಾಲ ನಡೆಯುವ ಈ ಸಾಂಸ್ಕöÈತಿಕ ಮೇಳದ ಉದ್ಘಾಟನಾ ಸಮಾರಂಭ ಫೆ.16ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ. ವಿದ್ವಾನ್ ಮೈಸೂರು ಎಂ.ನಾಗರಾಜ್ ಹಾಗೂ ವಿದ್ವಾನ್ ಡಾ.ಮೈಸೂರು ಎಂ.ಮAಜುನಾಥ್, ಅಂಚೆ ಸೇವೆಗಳ ಮಹಾನಿರ್ದೇಶಕ ಜಿತೇಂದ್ರ ಗುಪ್ತಾ ಭಾಗವಹಿಸುವರು ಎಂದು ತಿಳಿಸಿದರು.

ಮೊದಲ ಎರಡು ದಿನಗಳ ಕಾರ್ಯಕ್ರಮಗಳು ಮುಕ್ತ ವಿವಿಯ ನಳ-1, ನಳ-2 ರಲ್ಲಿ ನಡೆಯಲಿವೆ. 3 ಮತ್ತು 4ನೇ ದಿನಗ ಕಾರ್ಯಕ್ರಮಗಳು ಪಿಟಿಸಿ ಸಭಾಂಗಣದಲ್ಲಿ ನಡೆಯಲಿವೆ. ಸಮಾರೋಪ ಸಮಾರಂಭ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ನಡೆಯಲಿದ್ದು, ಪಂಡಿತ ವೆಂಕಟೇಶ್ ಕುಮಾರ್ ಅವರು ಪಾಲ್ಗೊಂಡು ಬಹುಮಾನ ವಿತರಿಸುವರು.

350 ಸಿಬ್ಬಂದಿ ಭಾಗಿ: ದೇಶದಾದ್ಯಂತ 1.65 ಲಕ್ಷ ಅಂಚೆ ಕಚೇರಿಗಳಿಗೆ, 4 ಲಕ್ಷಕ್ಕೂ ಹೆಚ್ಚು ನೌರರರಿದ್ದಾರೆ. ದೇಶಾದ್ಯಂತ ಕಡಿಮೆ ದರದಲ್ಲಿ ವಿವಿಧ ಸೇವೆಗಳನ್ನು ಅಂಚೆ ಇಲಾಖೆ ನೀಡುತ್ತಿದೆ. ಇಲಾಖೆಯ ನೌಕರರಿಗೆ ಏಕತಾನತೆ ಕಾಡಬಾರದು ಎಂಬ ಉದ್ದೇಶದಿಂದ ಪ್ರತಿವರ್ಷ ಈ ಸಮ್ಮೇಳನ ಆಯೋಜಿಸಲಾಗುತ್ತಿದೆ. ಸಮಾರಂಭದಲ್ಲಿ 21 ರಾಜ್ಯಗಳ 350ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿರುವರು. 33 ವಿಭಾಗಳಲ್ಲಿ ವಿವಿಧ ಸ್ಪರ್ಧೆಗಳು ಇರಲಿದ್ದು, 15ಕ್ಕೂ ಹೆಚ್ಚು ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಪ್ರತಿಷ್ಠಿತ ರಾಷ್ಟಿçÃಯ ಮಟ್ಟದ ಸಾಂಸ್ಕöÈತಿಕ ಕಾರ್ಯಕ್ರಮ ದೇಶದಾದ್ಯಂತ ಅಂಚೆ ನೌಕರರ ನಡುವೆ ಸಾಂಸ್ಕöÈತಿಕ ಸ್ಪರ್ಧೆ, ಸ್ನೇಹಭಾವ, ಏಕತೆ ಹಾಗೂ ಒಗ್ಗಟ್ಟಿನ ಮನೋಭಾವನೆ ಬೆಳೆಸುವ ಗುರಿ ಹೊಂದಿದೆ. ವಿವಿಧ ರೀತಿಯ ಪ್ರದರ್ಶನಗಳ ಮೂಲಕ ದೇಶದ ಶ್ರೀಮಂತ ಸಾಂಸ್ಕöÈತಿಕ ಪರಂಪರೆ ಪ್ರದರ್ಶಿಸಲಾಗುತ್ತಿದ್ದು, ಅಂಚೆ ಇಲಾಖೆಯೊಳಗಿನ ಸೃಜನಶೀಲತೆ, ಪರಂಪರೆ ಮತ್ತು ಒಗ್ಗಟ್ಟಿನ ಮನೋಭಾವವನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಶಾಸ್ತಿçÃಯ ಸಂಗೀತ, ಭರತನಾಟ್ಯ, ಕೂಚಿಪುಡಿ, ಸೋಲೊ ಗಾನ, ಕಿರುನಾಟಕ ಕಾರ್ಯಕ್ರಮಗಳು ಜರುಗಲಿದ್ದು ಪುರುಷ ಮತ್ತು ಮಹಿಳೆಯರು, ಹಿರಿಯರು, ಕಿರಿಯರು, ಮಕ್ಕಳ ವಿಭಾಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

1987, 1995 ಮತ್ತು 2008ರಲ್ಲಿ ಮೈಸೂರಿನಲ್ಲಿ ಭಾರತೀಯ ಅಂಚೆ ಸಾಂಸ್ಕöÈತಿಕ ಸಮ್ಮೇಳನ ನಡೆದಿತ್ತು. ಇದೀಗ 18 ವರ್ಷದ ನಂತರ ಮೈಸೂರಿನಲ್ಲಿ ನಡೆಯುತ್ತಿದೆ. 37ನೇ ಅಖಿಲ ಭಾರತ ಅಂಚೆ ಸಾಂಸ್ಕöÈತಿಕ ಸಮಾರಂಭ ಮಾರ್ಚ್ 2025ರಲ್ಲಿ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿತ್ತು. ಕರ್ನಾಟಕ ವೃತ್ತ ಉತ್ತಮ ಪ್ರದರ್ಶನ ನೀಡಿ 2ನೇ ಸ್ಥಾನ ಪಡೆದುಕೊಂಡಿತ್ತು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಕೇಂದ್ರದ ನಿರ್ದೇಶಕಿ ವಿ.ತಾರಾ, ಮೈಸೂರು ತರಬೇತಿ ಕೇಂದ್ರದ ನಿರ್ದೇಶಕ ಆಶಿಸ್ ಸಿಂಗ್ ಠಾಕೂರ್ ಇದ್ದರು.