ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು : ಎಸಿಪಿ ಶಿವಶಂಕರ್ ಸಲಹೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಂಚಾರ ಜಾಗೃತಿ ಕಾರ್ಯಕ್ರಮ

 ವರದಿ : ನಿಷ್ಕಲ ಎಸ್., ಮೈಸೂರು-9886978568

ಮೈಸೂರು : ಯಾವುದೇ ವಾಹನಗಳನ್ನು ಚಾಲನೆ ಮಾಡುವಾಗ ಸಂಚಾರ ನಿಯಮ ಪಾಲನೆ ಅತ್ಯಗತ್ಯವಾಗಿದೆ. ಇದರಿಂದ ನಿಮ್ಮ ಮತ್ತು ಇತರರ ಜೀವ ಕಾಪಾಡಬಹುದು ಎಂದು ಉಪ ಪೊಲೀಸ್ ಆಯುಕ್ತರಾದ ಶಿವಶಂಕರ್ ಹೇಳಿದರು.

ನಗರದ ಸಂತ ಫಿಲೋಮಿನಾ ಕಾಲೇಜಿನ ಒಳಾಂಗಣ ಸಭಾಂಗಣದಲ್ಲಿ  ಮೈಸೂರು ನಗರ ಸಂಚಾರ ಪೆÇಲೀಸರ ವತಿಯಿಂದ ಏರ್ಪಡಿಸಿದ್ದ ಸಂಚಾರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪ್ರಾಪ್ತರು ವಾಹನ ಚಾಲನೆ ಮಾಡಬಾರದು ಇದರಿಂದ ಪೋಷಕರಿಗೆ ದಂಡ ಬೀಳುತ್ತದೆ, ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ, ಜತೆಗೆ ಕಾರು ಚಾಲನೆ ಮಾಡುವಾಗ ಸೀಟ್‍ಬೆಲ್ಟ್ ಧರಿಸಬೇಕು, ಕುಡಿದು ವಾಹನ ಚಾಲನೆ ಮಾಡಬಾರದು. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು. ಯುವಕರು ರೀಲ್ಸ್‍ಗಳನ್ನು ನೋಡುವುದು ಬೇಡ, ತಮ್ಮ ಮನಃಸ್ಥಿತಿಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎನ್‍ಆರ್ ಸಂಚಾರ ವಿಭಾಗದ ಇನ್ಸ್‍ಪೆಕ್ಟರ್ ರೇಖಾಬಾಯಿ ಮಾತನಾಡಿ, ವಾಹನ ಚಾಲನೆ ಮಾಡುವ ಮುನ್ನ ಇನ್ಸುರೆನ್ಸ್ ಸೇರಿದಂತೆ ವಾಹನಗಳ ಸೂಕ್ತ ದಾಖಲಾತಿ ಇಟ್ಟುಕೊಳ್ಳಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಯಾವುದೇ ಅಪಘಾತವಾದಾದ 112 ಅಥವಾ 108ಗೆ ಕರೆ ಮಾಡಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಯಾವುದೇ ವ್ಯಕ್ತಿಗೆ  ಹೃದಯಾಘಾತ ಆದಾಗ ಅಥವಾ ಅಪಘಾತವಾದಾಗ ಸಾರ್ವಜನಿಕರು ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಕುರಿತು ಸುದೀರ್ಘ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆಕ್ಟರ್ ರೆವರೆಂಡ್ ಫಾದರ್ ಲೂರ್ದು ಪ್ರಸಾದ್ ಜೋಸೆಫ್ ವಹಿಸಿದ್ದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಪಿಎಸ್‍ಐಗಳಾದ ಸಿದ್ದೇಶ್ ಎಂ.ಎಲ್., ಮಹಾವೀರ್, ಪ್ರಾಂಶುಪಾಲರಾದ ಡಾ. ರವಿ ಜೆ.ಡಿ. ಸಲ್ಡಾನಾ, ರೆವರೆಂಡ್ ಫಾದರ್ ಜ್ಞಾನ ಪ್ರಾಗಸಂ, ರೆವರೆಂಡ್ ಫಾದರ್ ಡೇವಿಡ್ ಸಗಯರಾಜ್ ಎಸ್., ಉಪ ಪ್ರಾಂಶುಪಾಲರಾದ ರೊನಾಲ್ಡ್ ಪ್ರಕಾಶ್ ಕುಟಿನ್ಹಾ, ಐಕ್ಯೂಎಸಿ ಸಂಯೋಜಕರಾದ ಎ. ಥಾಮಸ್ ಗುಣಶೀಲನ್, ಡಾ. ದೀಪಾ ವಿ.,  ಇತರರು ಇದ್ದರು.