ಹರ್ಬ್‍ಲೈಫ್ ಇಂಡಿಯಾ, ಶಿಶು ಮಂದಿರ, ಸಾವಿಯೋ ಟ್ರಸ್ಟ್ ಸಹಯೋಗದಲ್ಲಿ 75 ಮಹಿಳೆಯರಿಗೆ ಎಲೆಕ್ಟ್ರಿಕ್ ಆಟೋ ವಿತರಣೆ ಮಾಡಿದ ಶಾಸಕ ಟಿ.ಎಸ್.ಶ್ರೀವತ್ಸ


 ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು: ಜಾಗತಿಕ ಆರೋಗ್ಯ ಮತ್ತು ಕ್ಷೇಮ ಸಂಸ್ಥೆಯಾದ ಹರ್ಬಲೈಫ್, ಬೆಂಗಳೂರಿನ ಶಿಶು ಮಂದಿರ ಮತ್ತು ಸಾವಿಯೋ ಟ್ರಸ್ಟ್ ಸಹಯೋಗದೊಂದಿಗೆ ಮೈಸೂರಿನಲ್ಲಿ ಚಾಲನಾ ತರಬೇತಿ ಪಡೆದ 75 ಮಹಿಳೆಯರಿಗೆ ಸ್ವಯಂ ವೃತ್ತಿ ಕೈಗೊಳ್ಳಲು ಎಲೆಕ್ಟ್ರಿಕ್ ಆಟೋಗಳನ್ನು ವಿತರಣೆ ಮಾಡಲಾಯಿತು.

ನಗರದ ಪೈ ವಿಸ್ತಾ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಹಾಗೂ ವಿವಿಧ ಸೇವಾ ಸಂಸ್ಥಗಳ ಗಣ್ಯರು ಫಲಾನುಭವಿ ಮಹಿಳೆಯರಿಗೆ ಆಟೋ ಕೀ ವಿತರಿಸಿ ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮೈಸೂರು ನಗರದ 75 ನಿರುದ್ಯೋಗಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹರ್ಬ್‍ಲೈಫ್, ಶಿಶುಮಂದಿರ ಮತ್ತು ಸಾವಿಯೋ ಟ್ರಸ್ಟ್ ಅವರ ಸಾಮಾಜಿಕ ಸೇವೆ ಶ್ಲಾಘನೀಯ ಇದರಿಂದ 75 ಕುಟುಂಬಗಳು ಆರ್ಥಿಕವಾಗಿ ಸಬಲರಾಗುತ್ತವೆ. ಮಹಿಳೆಯರು ಸಹ ಆರ್ಥಿಕ ಸ್ವಾತಂತ್ರ್ಯ ಪಡೆದು ತಮ್ಮ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ ಹೊಂದಲು ಈ ಸೇವೆ ಸಹಕಾರಿಯಾಗಿದೆ ಎಂದು ಹೇಳಿದರು. 

ಕಳೆದ ಮೂರು ದಶಕಗಳಿಂದ ಸಮಾಜದ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸುತಿರುವ ಬೆಂಗಳೂರಿನ `ಶಿಶು ಮಂದಿರ' ಹಾಗೂ ಮೈಸೂರಿನ `ಸಾವಿಯೋ ಟ್ರಸ್ಟ್' ಸಹಯೋಗದೊಂದಿಗೆ ಹರ್ಬ್ ಲೈಫ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ `ಇಕೋ-ವೀಲ್ಸ್ `ಮಹಿಳಾ ಸಬಲೀಕರಣ’ ಯೋಜನೆಗೆ ಚಾಲನೆ ನೀಡಿದೆ. 

ಈ ಮಹತ್ವದ ಯೋಜನೆಯಡಿ ಮೈಸೂರಿನ 75 ಮಹಿಳೆಯರಿಗೆ ಎಲೆಕ್ನಿಕ್ ಆಟೋಗಳನ್ನು ವಿತರಿಸುವ ಮೂಲಕ ಅವರಿಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸಲಾಗಿದೆ.

ಇದು ಮಹಿಳೆಯರನ್ನು ಹಸಿರು ಸಾರಿಗೆಯ ರಾಯಭಾರಿಗಳನ್ನಾಗಿ ಬಿಂಬಿಸುವ ವರ್ಷಪೂರ್ತಿ ನಡೆಯಲಿರುವ ``ಹಸಿರು ಮೈಸೂರು, ಸ್ವಚ್ಛ ಮೈಸೂರು'' ಅಭಿಯಾನಕ್ಕೆ ಪೂರಕವಾಗಿದೆ ಎಂದು 

ಹರ್ಬಲೈಫ್ ಇಂಡಿಯಾ ಉಪಾಧ್ಯಕ್ಷ ಉದಯ್ ಪ್ರಕಾಶ್ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಹರ್ಬ್ ಲೈಫ್ ಉಪಾಧ್ಯಕ್ಷ ಉದಯ ಪ್ರಕಾಶ್, ಶಿಶು ಮಂದಿರದ ನಿರ್ದೇಶಕ ಆನಂದ್ ಸಿ., ಸಾವಿಯೋ ಟ್ರಸ್ಟ್ ಸಂಸ್ಥಾಪಕ ವಿಜಯ್ ಇನ್ನಿತರರು ಇದ್ದರು.

``ಮಹಿಳೆಯರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಮತ್ತು ನಗರದ ಹಸಿರು ನಾರಿಗೆ ವ್ಯವಸ್ಥೆಗೆ ಕೊಡುಗೆ ನೀಡಲು ಇಕೋ-ವೀಲ್ಸ್ ಯೋಜನೆ ಉತ್ತಮ ವೇದಿಕೆ ಸಮಾನತೆ ಮತ್ತು ಸಾಮಾಜಿಕ ಪ್ರಗತಿ ಪ್ರತಿಪಾದಿಸುವ ಇಂತಹ ಕಾರ್ಯಗಳಿಗೆ ಮೈಸೂರು ಸದಾ ಬೆಂಬಲ ನೀಡುತ್ತದೆ.'' 

ಟಿ.ಎಸ್.ಶ್ರೀವತ್ಸ, ಶಾಸಕ, ಕೆ.ಆರ್.ಕ್ಷೇತ್ರ


ಯೋಜನೆಯ ಹಿನ್ನೆಲೆ ಮತ್ತು ಉದ್ದೇಶ

ಫಲಾನುಭವಿಗಳ ಬದುಕಿನಲ್ಲಿ ಆಶಾಕಿರಣವಾಗಿದ್ದ `ಇಕೋ-ವೀಲ್ಸ್' ಯೋಜನೆಯನ್ನು 2024ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆರಂಭಿಸಲಾಗಿತ್ತು. ಅಲ್ಲಿ 115ಕ್ಕೂ ಹೆಚ್ಚು ಹಿಂದುಳಿದ ವರ್ಗದ ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಇ-ಆಟೋ, ಕೌಶಲ್ಯ ತರಬೇತಿ ಮತ್ತು ಲೈಸೆನ್ಸ್ ಪಡೆಯಲು ನೆರವು ನೀಡಲಾಗಿತ್ತು. ಇದರ ಪರಿಣಾಮವಾಗಿ, ಫಲಾನುಭವಿಗಳ ಮಾಸಿಕ ಆದಾಯ 10,000 ರೂ.ನಿಂದ 30,000 ರೂ.ಗಿಂತಲೂ ಹೆಚ್ಚಾಗಿದೆ. ಬೆಂಗಳೂರಿನ ಈ ಯಶಸ್ಸಿನಿಂದ ಪ್ರೇರಿತಗೊಂಡು, ಈಗ ಮೈಸೂರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ಮೈಸೂರಿನಲ್ಲಿ ಒಂಟಿ ಪೆÇೀಷಕರು, ವಿಧವೆಯರು, ದೌರ್ಜನ್ಯ ಸಂತ್ರಸ್ತರು ಮತ್ತು ತೃತೀಯ ಲಿಂಗಿಗಳು ಸೇರಿದಂತೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಇ-ಆಟೋಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ವ್ಯವಸ್ಥಿತ ವಾಹನ ಚಾಲನಾ ತರಬೇತಿ, ಲೈಸೆನ್ಸ್ ಮಾಡಿಸಿಕೊಡುವುದು, ವಾಹನ ನಿರ್ವಹಣೆ ಮತ್ತು ಮೂಲಭೂತ ಉದ್ಯಮಶೀಲತಾ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತಿದೆ.