ರಾಜೀವನಗರದಲ್ಲಿ ಯಶಸ್ವಿಯಾಗಿ ನಡೆದ ರಾಯಲ್ ಮೈಸೂರ್ ಹೆರಿಟೇಜ್ ಡ್ರೈ ಫ್ರೂಟ್ಸ್ ಶಾಪ್ ಪ್ರಾಯೋಜಿತ ಉಚಿತ ಆರೋಗ್ಯ ತಪಾಸಣಾ ಶಿಬಿರ


ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು : ರಾಜೀವ್ ನಗರದ ನಿಮ್ರಾ ಮಸೀದಿ ಹತ್ತಿರ ರಾಯಲ್ ಮೈಸೂರ್ ಹೆರಿಟೇಜ್ ಡ್ರೈ ಫ್ರೂಟ್ಸ್ ಶಾಪ್ ಸಹಯೋಗದೊಂದಿಗೆ ಮೈಸೂರು ಹಾಸ್ಪಿಟಲ್ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ಜರುಗಿತು.

ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಜತೆಗೆ ಹಲವು ಯುವಕರು ರಕ್ತದಾನವನ್ನೂ ಸಹ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಫ್ರೋಜ್ ಖಾನ್ ಭಾಗವಹಿಸಿ ಮಾತನಾಡಿ, ವಾಣಿಜ್ಯ ಉದ್ಯಮಿಗಳು ಕೇವಲ ತಮ್ಮ ವ್ಯಾಪಾರದಲ್ಲಿ ಲಾಭವನ್ನು ನಿರೀಕ್ಷಿಸುವ ಈ ದಿನಗಳಲ್ಲಿ ರಾಯಲ್ ಮೈಸೂರು ಹೆರಿಟೇಜ್ ಡ್ರೈಫ್ರೂಟ್ಸ್ ಅಂಗಡಿ ಮಾಲಿಕರು ತಮ್ಮ ಗ್ರಾಹಕರಿಗೆ ಮತ್ತು ನಾಗರಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುವುದರ ಮೂಲಕ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಹಿರಿಯ ಹೋರಾಟಗಾರ ಮಂಜುನಾಥ್ ಮಾತನಾಡಿ, ರಾಯಲ್ ಮೈಸೂರು ಹೆರಿಟೇಜ್ ಡ್ರೈಫ್ರೂಟ್ಸ್ ಅಂಗಡಿಯ ಮಾಲಿಕರು ಸಮಾಜದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿರುವುದು ಸ್ವಾಗತಾರ್ಹ, ಇಂತಹ ಸೇವೆ ಎಲ್ಲರೂ ಮಾಡಿದಾಗ ಸಮಾಜದ ಸ್ವಾಸ್ಥ್ಯವನ್ನು ನಾವು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಶಿಬಿರದಲ್ಲಿ ನೂರಾರು ನಾಗರಿಕರು ರಕ್ತ, ಬಿಪಿ ತಪಾಸಣೆ, ದಂತ ತಪಾಸಣೆ, ಕಣ್ಣು ತಪಾಸಣೆ ಮಾಡಿಸಿಕೊಂಡರು. ಹತ್ತಾರು ಯುವಕರು ರಕ್ತದಾನವನ್ನು ಮಾಡಿದರು. ಈ ಸಂದರ್ಭದಲ್ಲಿ ಆಯೋಜಕರಿಂದ ಅತಿಥಿಗಳನ್ನು ಗೌರವಿಸಲಾಯಿತು.

ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ರಕ್ತನಿಧಿ ಕೇಂದ್ರ, ಸ್ವಾಸ್ಥ್ಯ ಫೌಂಡೇಷನ್, ಡಿಸಿಎಸ್ ಹೆಲ್ತ್ ಕೇರ್, ಎಎಸ್‌ಜಿ, ಮೈಸೂರು ಹಾಸ್ಪಿಟಲ್‌ನ ವೈದ್ಯರು ಮತ್ತು ಸಿಬ್ಬಂದಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಿಬಿರದ ಆಯೋಜಕರಾದ ಝಯಾನ್, ಮೊಹಮ್ಮದ್ ಯಾಸೀರ್, ಏಜಾಸ್, ಸುಹೇಬ್, ಅಯಾನ್, ತೈಯಬ್ ಫರಾಜ್ ಅಹಮದ್, ತೌಫಿಖ್, ನವೀದ್ ಇತರರು ಇದ್ದರು.