ವರದಿ: ನಿಷ್ಕಲ ಎಸ್., ಮೈಸೂರು
ಮೈಸೂರು: 93 ವರ್ಷದ ವೃದ್ಧೆಯೊಬ್ಬರಿಗೆ ದೊಡ್ಡ ಗಾತ್ರದ ಫೈಬ್ರಾಯ್ಡ್ ಗರ್ಭಕೋಶದ ಸಮಸ್ಯೆಗೆ ಯಶಸ್ವಿಯಾಗಿ ಶಸ್ತçಚಿಕಿತ್ಸೆ ನಡೆಸುವ ಮೂಲಕ ಮಣಿಪಾಲ್ ಆಸ್ಪತ್ರೆ, ತನ್ನ ಪ್ರಸೂತಿ ಮತ್ತು ಸ್ತಿçà ರೋಗ ಶಾಸ್ತç ವಿಭಾಗದ ಸಾಮರ್ಥ್ಯವನ್ನು ಮತ್ತೊಮ್ಮೆ ಬಲಪಡಿಸಿದ್ದು, ವೃದ್ಧ ಮಹಿಳೆಯ ಜೀವನ ಶೈಲಿಯಲ್ಲಿ ಸುಧಾರಣೆ ಮಾಡಲಾಗಿದೆ.
ರೋಗಿಯ ಹಿನ್ನೆಲೆ ಮತ್ತು ಚಿಕಿತ್ಸೆಯ ಸವಾಲುಗಳು:
ಶ್ರೀಮತಿ ಆಲಿಸ್ ಜೋಸೆಫ್ (93) ಅವರು ಕಳೆದ ಕೆಲವು ದಿನಗಳಿಂದ ನಿರಂತರ ಹೊಟ್ಟೆ ನೋವು ಮತ್ತು ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಅವರ ದೈನಂದಿನ ಜೀವನಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಅವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದರು. ಅವರನ್ನು ತಪಾಸಣೆ ಮಾಡಿದ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಸತೀಶ್ ಕುಮಾರ್ ಎಂ.ಜಿ ಅವರು, ಇವರ ಗರ್ಭಾಶಯದಲ್ಲಿ ಗಡ್ಡೆ ಇರುವುದನ್ನು ಪತ್ತೆ ಹಚ್ಚಿ, ಹೆಚ್ಚಿನ ಚಿಕಿತ್ಸೆಗಾಗಿ ಸ್ತಿçÃರೋಗ ತಜ್ಞರಾದ ಡಾ. ಅಮೂಲ್ಯ ಕೆ.ಜಿ. ಅವರನ್ನು ಭೇಟಿಯಾಗಲು ಸೂಚಿಸಿದರು.
ಪರೀಕ್ಷೆಯ ನಂತರ, ಒಂದು ದೊಡ್ಡ ಗರ್ಭಾಶಯದ ಗಡ್ಡೆ (ಫೈಬ್ರಾಯ್ಡ್) ಕಂಡುಬAದಿದ್ದು, ಅದು ಸೊಂಟದ ಭಾಗವನ್ನೂ ಮೀರಿ ಬೆಳೆದಿರುವುದು ದೃಢಪಟ್ಟಿತು. ಈ ವೃದ್ಧಾಪ್ಯದಲ್ಲಿ ಇಂತಹ ಪ್ರಕರಣಗಳು ಅಪರೂಪವಾಗಿದ್ದು, ಚಿಕಿತ್ಸೆ ನೀಡುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಅದಲ್ಲದೆ, ಇವರಿಗೆ ಈಗಾಗಲೇ ಹೃದಯ ಸಂಬAಧಿ ಚಿಕಿತ್ಸೆ (ಆಂಜಿಯೋಪ್ಲಾಸ್ಟಿ) ಆಗಿದ್ದರಿಂದ ರಕ್ತ ತೆಳುವಾಗುವ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ವಯಸ್ಸಾದವರಲ್ಲಿ ದೇಹದ ಅಂಗಾAಶಗಳು ತುಂಬಾ ಮೃದುವಾಗಿರುವುದರಿಂದ ಅಕ್ಕಪಕ್ಕದ ಪ್ರಮುಖ ಅಂಗಗಳಿಗೆ ಹಾನಿಯಾಗುವ ಸಾಧ್ಯತೆಗಳೂ ಇರುತ್ತವೆ. ಹೀಗಾಗಿ, ಶಸ್ತçಚಿಕಿತ್ಸೆಗೆ ಮುನ್ನ, ಹೃದಯ, ಶ್ವಾಸಕೋಶ, ಮೂತ್ರಪಿಂಡ ಮತ್ತು ಅರಿವಳಿಕೆ ತಜ್ಞರು ರೋಗಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ತಂಡದ ಸಮನ್ವಯದೊಂದಿಗೆ ಸಂಪೂರ್ಣ ಸಿದ್ಧತೆಗಳನ್ನು ನಡೆಸಿದರು. ಅಂತಿಮವಾಗಿ, ಅತ್ಯಂತ ಎಚ್ಚರಿಕೆಯಿಂದ `ಕಿಬ್ಬೊಟ್ಟೆಯ ಗರ್ಭಕೋಶ ತೆಗೆಯುವಿಕೆ' ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಗರ್ಭಾಶಯವನ್ನು ತೆಗೆದುಹಾಕಲಾಯಿತು.
ಶಸ್ತçಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವವಾಗದಂತೆ ಮತ್ತು ಅಕ್ಕಪಕ್ಕದ ಅಂಗಗಳಿಗೆ ತೊಂದರೆಯಾಗದAತೆ ವೈದ್ಯರು ಎಚ್ಚರಿಕೆ ವಹಿಸಿದರು. ಶಸ್ತçಚಿಕಿತ್ಸೆಯ ನಂತರ ಮಹಿಳೆ ವೇಗವಾಗಿ ಚೇತರಿಸಿಕೊಂಡಿದ್ದು, ಅವರಿಗೆ ಸೂಕ್ತ ಆರೈಕೆ ಮತ್ತು ಪೋಷಣೆ ನೀಡಲಾಯಿತು. ಕೇವಲ ಮೂರೇ ದಿನಗಳಲ್ಲಿ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದರು ಎಂದು ವೈದ್ಯರು ಹೇಳಿದರು.
ವೈದ್ಯರ ಅಭಿಪ್ರಾಯ:
ಈ ಬಗ್ಗೆ ಮಾತನಾಡಿದ ಡಾ. ಅಮೂಲ್ಯ ಕೆ.ಜಿ., ‘90ರ ವಯಸ್ಸಿನಲ್ಲಿ ಇಷ್ಟು ದೊಡ್ಡ ಗರ್ಭಾಶಯದ ಗಡ್ಡೆ ಕಾಣಿಸಿಕೊಳ್ಳುವುದು ಅಪರೂಪ. ವಯಸ್ಸಾದ ಕಾರಣ ಶಸ್ತçಚಿಕಿತ್ಸೆಯು ಕಷ್ಟಕರವಾಗಿತ್ತು. ಆದರೆ, ನಮ್ಮ ತಜ್ಞ ವೈದ್ಯಕೀಯ ತಂಡದ ಅನುಭವ, ಶಸ್ತçಚಿಕಿತ್ಸೆಯ ಪರಿಣಿತಿ ಮತ್ತು ಬಹು-ಶಿಸ್ತಿನ ಸಮನ್ವಯತೆಯಿಂದ ಈ ಕಾರ್ಯ ಯಶಸ್ವಿಯಾಗಿದೆ,' ಎಂದು ಹೇಳಿದರು.
ಆಸ್ಪತ್ರೆಯ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, "ನಮ್ಮಲ್ಲಿರುವ ನುರಿತ ವೈದ್ಯರು ಮತ್ತು ಆಧುನಿಕ ಸೌಲಭ್ಯಗಳಿಂದ ಇಂತಹ ಸಂಕೀರ್ಣ ಶಸ್ತçಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಮತ್ತು ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿದೆ," ಎಂದರು.
ಕುಟುAಬಸ್ಥರ ಸಂತಸ:
ರೋಗಿಯ ಮಗಳು ಶ್ರೀಮತಿ ಲಿಝಿ ಸಿರಿಯಾಕ್ ಅವರು ಮಾತನಾಡಿ, "ನಮ್ಮ ತಾಯಿಯ ವಯಸ್ಸಿನ ಕಾರಣ ನಮಗೆ ಭಯವಿತ್ತು. ಆದರೆ, ವೈದ್ಯರು ನಮಗೆ ಧೈರ್ಯ ತುಂಬಿ, ಪ್ರತಿಯೊಂದು ಹಂತದಲ್ಲೂ ಮಾಹಿತಿ ನೀಡಿದರು. ಅವರ ಕಾಳಜಿಯಿಂದಾಗಿ ಅಮ್ಮ ಈಗ ಚೇತರಿಸಿಕೊಂಡು ಮತ್ತೆ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿ ನಮಗೆ ಸಂತೋಷವಾಗಿದೆ," ಎಂದು ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.
