ಕ್ಯಾರೆಟ್ ದೇವು ನಟನೆ, ಹೊನ್ನುಶ್ರೀ ನಿರ್ಮಾಣದ ಊಟಿ ಕ್ಯಾರೆಟ್ ಚಿತ್ರದ ಹಾಡುಗಳ ಲೋಕಾರ್ಪಣೆ

ವರದಿ: ನಿಷ್ಕಲ ಎಸ್., ಮೈಸೂರು

ಮೈಸೂರು : ಇದುವರೆಗೂ ನಾವು ಹುಲಿ, ನಾಯಿ, ಹಾವು, ಬೆಕ್ಕುಗಳು ಇಟ್ಟುಕೊಂಡು ಸಿನಿಮಾ ಮಾಡಿದ್ದನ್ನು ನೋಡಿದ್ದೇವೆ. ಇದೀಗ ಎರಡು ಇಲಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಸಾಹಸಕ್ಕೆ ಹೊನ್ನುಶ್ರೀ ಮತ್ತು ಕ್ಯಾರೆಟ್ ದೇವು ಕೈ ಹಾಕಿದ್ದಾರೆ. 

ಚಾರ್ಲಿ ಬಾಬಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ “ಊಟ ಕ್ಯಾರೆಟ್’ ಚಲನಚಿತ್ರವನ್ನು ಪ್ರೇಕ್ಷಕರು ಬೆಂಬಲಿಸಿ ಆಶೀರ್ವಾದ ಮಾಡಬೇಕೆಂದು ಚಿತ್ರನಟ ಕ್ಯಾರೆಟ್ ದೇವು ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಊಟಿಯಿಂದ ಮೈಸೂರಿಗೆ ಬರುವ ಕ್ಯಾರೆಟ್ ಲೋಡಿನಲ್ಲಿ ಎರಡು ಇಲಿಗಳು ಬರುತ್ತವೆ. ಅದನ್ನು ಕ್ಯಾರೆಟ್ ಮಾರಾಟಗಾರ ಸಾಕಿ ಸಲಹುವುದು ಮತ್ತು ಮನುಷ್ಯ ಹಾಗೂ ಇಲಿಗಳ ನಡುವಿನ ಬಾಂಧವ್ಯ ಕುರಿತು ವಿಭಿನ್ನ ಕಥಾ ಹಂದರವುಳ್ಳ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು.

ವಿಲ್ಸನ್ ಗೋನ್ಸಾಲ್ವೆನ್ಸ್ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು, 

ಸಿನಿಮಾದ ನಿರ್ಮಾಣವನ್ನು ಹೊನ್ನು ಶ್ರೀ ಅವರು ವಹಿಸಿಕೊಂಡಿದ್ದಾರೆ. ಅವರೇ ಚಿತ್ರದ ನಾಯಕಿಯಾಗಿಯೂ ನಟಿಸಿದ್ದಾರೆ. ಚಿತ್ರವು ಅದ್ಭುತವಾಗಿ ಮೂಡಿಬಂದಿದೆ. ಚಾಮುಂಡಿಬೆಟ್ಟದ ಪಾದದಲ್ಲಿರುವ ಅವಧೂತ ನಂಜುಡ್ಡಪ್ಪ ಅವರ ಸಾನಿಧ್ಯದಲ್ಲಿ ಶ್ರೀ ದತ್ತಾತ್ರೆಯ ಮಂದಿರದಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

ನಾಗೇಂದ್ರ ಅವರು ಚಿತ್ರದ ಛಾಯಾಗ್ರಹಣ ನಿರ್ದೇಶಕರಾಗಿದ್ದು, ನಿಚಲ್ ಭಗವತ್ ಸಂಕಲನ ಮಾಡಿದ್ದಾರೆ ಎಂದು ದೇವು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ಗೋಲ್ಡ್ ಸುರೇಶ್ ಇತರರು ಇದ್ದರು.