ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ವಿಧ್ಯಾರ್ಥಿಗಳು ಯಾವುದೇ ಪದವಿ ಪಡೆದರೂ ತಮ್ಮ ತಮ್ಮ ಪದವಿಗೆ ತಕ್ಕಂತೆ ವೃತ್ತಿ ಕೌಶಲ್ಯವನ್ನು ಕಲಿತರೆ ಮಾತ್ರ ಯಾವುದೇ ಉದ್ಯೋಗ ಅಥವಾ ಉದ್ಯಮವನ್ನು ನಿರ್ವಹಿಸಲು ಸಾಧ್ಯ ಮತ್ತು ಸುಲಭ ಎಂದು ಇನ್ಫೋಸಿಸ್ ಸಂಸ್ಥೆಯ ಅಸೋಸಿಯೇಟ್ ಉಪಾಧ್ಯಕ್ಷರು ಮತ್ತು ಐಐಆರ್ ಬಿಸಿನೆಸ್ ಲೀಡರ್ ಪೀತ್ ಕುಶಲಪ್ಪ ಕೂಡಿರಾ ಹೇಳಿದರು.
ನಗರದ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ಎಂ.ಬಿ.ಎ ಮತ್ತು ಎಂಸಿಎ ಮೊದಲ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಂತ ಫಿಲೋಮಿನಾ ಕಾಲೇಜು ಉನ್ನತ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರಾಗಿದೆ ಇಲ್ಲಿ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಸಾಕಷ್ಟು ಅವಕಾಶಗಳಿವೆ, ಪೋಷಕರು ನಿಮ್ಮ ಮೆಲೆ ನಂಬಿಕೆ ಇಟ್ಟು ವಿದ್ಯಾರ್ಜನೆ ಮಾಡಲು ಕಳಿಸಿದ್ದಾರೆ. ನೀವು ಪದವಿ ಪಡೆದು ಉನ್ನತ ಉದ್ಯೋಗ ಪಡೆಯುವಿರಿ ಎಂಬ ಕನಸು ಕಂಡಿದ್ದಾರೆ. ಅವರ ಕನಸನ್ನು ನನಸು ಮಾಡುವುದು ನಿಮ್ಮಗಳ ಕರ್ತವ್ಯ ಎಂದರು.
ಮುಂದಿವರಿದು ಅವರು ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಸಿಗಬಹುದಾದ ಉದ್ದಯೋಗ ಅವಕಾಶಗಳು, ನಾಯಕತ್ವ ಹಾಗೂ ಭವಿಷ್ಯದ ವೃತ್ತಿ ಮಾರ್ಗಗಳ ಕುರಿತು ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ಎಂಸಿಎ ಮತ್ತು ಎಂಬಿಎ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಮತ್ತು ಎಂಡಿಇಎಸ್ ಅಧ್ಯಕ್ಷರಾದ ರೆ. ಡಾ. ಫ್ರಾನ್ಸಿಸ್ ಸೆರ್ರಾವೋ ಅವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪದವಿ ಮೆರವಣಿಗೆ, ಕಾಲೇಜು ಪ್ರಾರ್ಥನಾ ಗೀತೆ, ಪ್ರಮಾಣವಚನ ಸ್ವೀಕಾರ, ಪದವಿ ಪ್ರಧಾನ ಮತ್ತು ಶ್ರೇಷ್ಠ ಪದವೀಧರರ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಈ ವೇಳೆ ಪೋಷಕರು, ಉಪನ್ಯಾಸಕ ವೃಂದದವರು ಹಾಗೂ ಅತಿಥಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ರೆಕ್ಟರ್ ಡಾ. ಲೂರ್ದ್ ಪುಸಾದ್ ಜೋಸೆಫ್, ಕ್ಯಾಂಪಸ್ ಆಡಳಿತಾಧಿಕಾರಿ ರೆ. ಫಾ. ಜ್ಞಾನಪಗಾಸಂ, ಪ್ರಾಂಶುಪಾಲರಾದ ಡಾ. ರವಿ ಜೆ.ಡಿ. ಸಲ್ಮಾನ್ಯಾ, ವಿಭಾಗಾಧ್ಯಕ್ಷರು (ಎಂ.ಸಿಎ) ಮತ್ತು ಸಹಾಯಕ ಪ್ರಾಧ್ಯಾಪಕಿ ರೀನಾ ವಿ.ಯು.,ವಿಭಾಗಾಧ್ಯಕ್ಷರು (ಎಂ.ಬಿ.ಎ) ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಐಸಾಕ್ ಜಾರ್ಜ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.




