ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ನಗರದ ಬಿಬಿ ಕೇರಿಯಲ್ಲಿರುವ ಶ್ರೀ ಧರೆಗೆ ದೊಡ್ಡವರು ದೇವಸ್ಥಾನದಲ್ಲಿ ೨೬೩ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾರಿ ಅನ್ನಸಂತರ್ಪಣೆ ನಡೆಯಿತು.
ಇದಕ್ಕೂ ಮುನ್ನ ಮಂಟೇಸ್ವಾಮಿ ಮಠದಿಂದ ಮತ್ತು ನೀಲಗಾರರ ಮನೆಗಳಿಂದ ಕಂಡಾಯಗಳನ್ನು ತರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಯಲ್ಲಿ ಕೊಂಬು, ಕಹಳೆ, ತಮಟೆ, ನಗಾರಿ, ಮತ್ತು ವಿವಿಧ ವಾದ್ಯಗಳು ಮೆರವಣಿಯಲ್ಲಿ ಭಾಗುಯಾಗಿದ್ದವು.
ಈ ಸಂದರ್ಭದಲ್ಲಿ ದೇವಾಲಯದ ಗುಡ್ಡಪ್ಪ ರಾಚಪ್ಪ ಪಿ., ಅವರು ಮಾತನಾಡಿ, ಇಂದು ೨೬೩ನೇ ವರ್ಷದ ವಾರ್ಷಿಕೋತ್ಸವ ನಡೆಯುತ್ತಿದೆ. ನಾವು ಮೂರು ತಲೆಮಾರುಗಳಿಂದ ಶ್ರೀ ಧರೆಗೆ ದೊಡ್ಡವರು ದೇವಾಲಯದಲ್ಲಿ ಕಂಡಾಯಗಳ ಉತ್ಸವವನ್ನು ನಡೆಸುತ್ತಿದ್ದೇವೆ. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮಗೆ ಇಲ್ಲಿ ಶಾಶ್ವತ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ. ಸೋಮವಾರ ಕಂಡಾಯಗಳ ಮೆರವಣಿಗೆ ನಡೆಯಿತು. ಮಂಗಳವಾರ ದಾಳ ಸಮರ್ಪಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಈ ಪೂಜಾ ಕಾರ್ಯಗಳಿಗೆ ಮೊಹಲ್ಲಾದ ಜನರು, ಹಲವು ಭಕ್ತರು ಮತ್ತು ದಾನಿಗಳು ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮೊಹಲ್ಲಾದ ಹಿರಿಯರನ್ನು, ದಾನಿಗಳನ್ನು ಮತ್ತು ಗಣ್ಯರನ್ನು ಪಿ.ರಾಚಪ್ಪ ಅವರು ಆತ್ಮೀಯವಾಗಿ ಗೌರವಿಸಿದರು.
ಈ ಸಂದರ್ಭದಲ್ಲಿ ಯುವ(ಸಂಪತ್), ರಾಜೇಶ್ ಎಸ್.ಆರ್., ಮಹೇಶ್, ಆರ್.ಪುಟ್ಟಬುದ್ದಿ, ರಂಗಸ್ವಾಮಿ, ಎಸ್.ರಾಚಯ್ಯ, ಸಿದ್ದಪ್ಪಾಜಿ, ಪಿ.ಸಿದ್ದರಾಜು, ದಾನಿಗಳು, ಮೊಹಲ್ಲಾದ ಮುಖಂಡರು, ಮುಂತಾದವರು ಇದ್ದರು.



