ನವೆಂಬರ್ 21 ರಿಂದ ದೇಶಾದ್ಯಂತ ಜಮಾತೆ ಇಸ್ಲಾಮಿ ಹಿಂದ್‌ನಿAದ ‘ಮಾದರಿ ನೆರೆಹೊರೆ, ಮಾದರಿ ಸಮಾಜ’ ಅಭಿಯಾನ

 

ವರದಿ : ನಿಷ್ಕಲ ಎಸ್., ಗೌಡ ಮೈಸೂರು

ಮೈಸೂರು: ಮಾನವ ಸಂಘಜೀವಿ, ಇತರೆ ಜೀವಿಗಳಿಂತ ಭಿನ್ನವಾಗಿರುವ ಕಾರಣ ಮನುಷ್ಯ ಸಾಮೂಹಿಕವಾಗಿ ಜೀವಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಪರಸ್ಪರ ನೆರೆ ಹೊರೆಯವರೊಂದಿಗೆ ಉತ್ತಮ ಸಂಬAಧ ಹೊಂದುವ ಮೂಲಕ ನಮ್ಮ ಸುತ್ತಮುತ್ತಲಿನ ಸಾಮಾಜಿಕ ಪರಿಸರವನ್ನು ಉತ್ತಮವಾಗಿಸಿಕೊಂಡು, ಸಾಮಾಜಿಕ ಪ್ರಜ್ಞೆಯನ್ನು ಕಾಪಾಡಿಕೊಳ್ಳುವಂತೆ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಜಮಾತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರು ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಪತ್ರಕರ್ತರೊಂದಿಗೆ ವಿಚಾರ ವಿನಿಮಯ ಮತ್ತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ವಾಸಿಸುತ್ತಿರುವ ನಾವು, ಮೊದಲು ನಮ್ಮ ಜೊತೆಗಿರುವ ಜನರೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಸೌಹಾರ್ದ ಸಂಬAಧ ಬೆಳೆಸಿಕೊಳ್ಳಬೇಕು. ಮನುಷ್ಯನಾದವನಿಗೂ ಇತರೆ ಸಹ ಜೀವಿಗಳೊಂದಿಗೆ ಹಲವಾರು ಹೊಣೆಗಾರಿಕೆಗಳಿವೆ. ಒಟ್ಟಿನಲ್ಲಿ ಎಲ್ಲಾ ಮಾನವರ ಬದುಕಿನ ಅಡಿಪಾಯವೇ ‘ಸಂಬAಧ’. ಸAಬAಧಗಳಲ್ಲಿ ಅತ್ಯಂತ ಮಹತ್ವದ ಸಂಬAಧ ನೆರೆಹೊರೆಯವರ ಇದೊಂದು ಅಪೂರ್ವ ಮತ್ತು ಪ್ರಭಲವಾದ

ಸಂಬAಧವಾಗಿದೆ. ಮಾನವನು ಒಂಟಿ ಮನೆಯಲ್ಲಿ ಇರುವುದರ ಬದಲು ಮಾನವರು ನೆಲೆಸಿರುವ ಗ್ರಾಮ ಅಥವಾ ಪಟ್ಟಣಗಳಲ್ಲಿ ನೆಲೆಸುವುದನ್ನು ಇಷ್ಟಪಡುತ್ತಾನೆ. ನೆರೆಕರೆಯವರ ಕುಟುಂಬ ಬೇರೆಯಾಗಿರಬಹುದು, ಅವರ ಭಾಷೆ, ಕುಲ, ಗೋತ್ರ ಮತ್ತು ಧರ್ಮಎಲ್ಲವೂ ಪರಸ್ಪರ ಭಿನ್ನವಾಗಿರಬಹುದು; ಆದಾಗಿಯೂ ಕೇವಲ ನೆರೆಕರೆಯ ಸಂಬAಧವೆನ್ನುವುದು ಬಹಳ ನಿಕಟ ಸಂಬAಧವಾಗಿ ಬಿಡುತ್ತದೆ. ಈ ಸಂಬAಧದಲ್ಲಿ ಬಹಳ ಅನ್ನೋನ್ಯತೆ ಮತ್ತು ಪರಸ್ಪರ ವಿಶ್ವಾಸ ಕಂಡು ಬರುತ್ತದೆ. ನೆರೆಹೊರೆಯ ಸಂಬAಧ ಆರೋಗ್ಯಕರವಾಗಿದ್ದರೆ ಮಾತ್ರ ನಮ್ಮ ಸಮಾಜವು ಕೂಡ ಆರೋಗ್ಯಕರವಾಗಿರುತ್ತದೆ. ನೆರೆಹೊರೆಯವರು ಪ್ರೀತಿ-ವಿಶ್ವಾಸ, ಸಹಕಾರ, ಸೌಹಾರ್ಧ ಮನೋಭಾವದಿಂದ ವರ್ತಿಸಿದರೆ ಸಮಾಜದಲ್ಲಿ ಸೌಹಾರ್ದ, ಸಹಕಾರಗಳು ನೆಲೆಗೊಳ್ಳುತ್ತವೆ. ನೆರೆಹೊರೆಯವರೊಂದಿಗೆ ಕೋಪ ದ್ವೇಷದಿಂದ ಇರುವುದೆಂದರೆ ಆ ಸಮಾಜದಲ್ಲಿ ಎಂದೂ ಶಾಂತಿ, ಸೌಹಾರ್ದವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಅಭಿವೃದ್ಧಿಯೂ ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ಖಾಸಗೀತನಕ್ಕೆ ಸಿಕ್ಕಿರುವ ಅತಿಯಾದ ಮಹತ್ವದ ಕಾರಣದಿಂದಾಗಿ ನೆರೆಹೊರೆಯವರು ಮತ್ತು ಅವರ ಹಕ್ಕುಗಳ ಬಗ್ಗೆ ತೀವ್ರ ನಿರ್ಲಕ್ಷವನ್ನು ತೋರಲಾಗುತ್ತಿದೆ. ಇದರಿಂದ ಈ ವಿಷಯದಲ್ಲಿ ಜನರ ಮಧ್ಯೆ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ. ಮನುಷ್ಯ ಸಂಬAಧಗಳು ಬಲಿಷ್ಠವಾಗಬೇಕಾದರೆ ನಮ್ಮ ಮಧ್ಯೆ ಇರುವ ಅಡ್ಡ ಗೋಡೆಗಳನ್ನು ಒಡೆದರೆ ಮಾತ್ರ ಸಾಧ್ಯವಾಗುತ್ತದೆ. ಆದರೆ ಇಂದು ಈ ಮಾನವೀಯ ಸಂಬAಧಗಳು ನಿಧಾನವಾಗಿ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಮನುಷ್ಯ ತಾನು, ತನ್ನದು ಎಂಬ ಸಂಕುಚಿತಭಾವ ಬೆಳಸಿಕೊಂಡು, ತನ್ನಲ್ಲೇ ಕೇಂದ್ರೀಕೃತನಾಗುತ್ತಿದ್ದಾನೆ.

ಸಮಾಜದ ಮುಂದೆ ನೆರೆಹೊರೆಯವರ ಹಕ್ಕುಗಳ ಅತ್ಯುತ್ತಮ ಮಾದರಿಯನ್ನು ಪ್ರಸ್ತುತಪಡಿಸುವುದು, ಪರಸ್ಪರರ ಬಗ್ಗೆ ಕಾಳಜಿ, ಸಹಕಾರ, ಶಿಸ್ತು, ಶುಚಿತ್ವ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಪ್ರೇರೇಪಿಸುವುದು, ನೆರೆಹೊರೆಯವರ ಮಧ್ಯೆ ಇರುವ ಅಂತರವನ್ನು ನೀಗಿಸಿ ಅವರ ಮಧ್ಯೆ ಸೌಹಾರ್ದ ಸಂಬAಧ ಬೆಳೆಯುವಂತೆ ಮಾಡುವುದು ಹಾಗೂ ದಾರಿಹೋಕರು, ಸಹೋದ್ಯೋಗಿಗಳು, ಪ್ರಯಾಣಿಕರು, ರಸ್ತೆಯ ನಿಯಮಗಳು, ವಾಹನ ಸಂಚಾರದ ನಿಯಮಗಳ ಬಗ್ಗೆ ಕಾಳಜಿ ಉಳ್ಳವರಾಗಿ

ಮಾಡುವುದು ಮುಂತಾದ ಮಹೋನ್ನತ ಉದ್ದೇಶಗಳನ್ನು ಮುಂದಿಟ್ಟು ಜಮಾಅತೆ ಇಸ್ಲಾಮೀ ಹಿಂದ್ ``ಮಾದರಿ ನೆರಹೊರೆ,  ಮಾದರಿ ಸಮಾಜ'' ಎಂಬ ಶೀರ್ಷಿಕೆ ಅಡಿಯಲ್ಲಿ ನೆರೆಹೊರೆಯವರ ಹಕ್ಕುಗಳ ರಾಷ್ಟಿçÃಯ ಮಟ್ಟದ ಅಭಿಯಾನವನ್ನು ಈ ತಿಂಗಳು ನವೆAಬರ್ 21, 2025 ರಿಂದ 30ರವರೆಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಅಭಿಯಾನದ ಪ್ರಯುಕ್ತ ಪ್ರವಚನ, ಮೊಹಲ್ಲಾ ಸಭೆಗಳು, ಕರಪತ್ರ ವಿತರಣೆ, ಕೌಟುಂಬಿಕ ಭೇಟಿ, ಸಾಂಸ್ಕöÈತಿಕ ಕಾರ್ಯಕ್ರಮ, ಟ್ರಾಫಿಕ್ ನಿಯಮಗಳ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿ ಯುವಕರ ಕ್ಯಾಲಿ ಮುಂತಾದ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಅವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್‌ನ ಅಬ್ದುಸ್ಸಲಾಮ್ ಯು.,  ಅಬ್ದುಲ್ ಖಾದಿರ್, ಮುಹಮ್ಮದ್ ಅಸ್ಲಮ್, ಖಲೀಲ್ ಉರ್ ರಹಮಾನ್, ಶೇಖ್ ಜಬಿವುಲ್ಲಾ, ವಸೀಮ್ ಇತರರು ಇದ್ದರು.


ಇಸ್ಲಾಮಿನಲ್ಲಿ ನೆರೆಹೊರೆಯವರ ಹಕ್ಕುಗಳಿಗೆ ಬಹಳ ಪ್ರಾಧಾನ್ಯತೆ ಇದೆ. ಪವಿತ್ರ ಕುರ್ ಆನಿನಲ್ಲಿ ಸ್ಪಷ್ಟವಾಗಿ ಹೀಗೆ ಆದೇಶಿಸಲಾಗಿದೆ. ‘ಆಪ್ತರಾದ ನೆರೆಹೊರೆಯವರೊಂದಿಗೂ ಅಪರಿಚಿತ ನೆರೆಹೊರೆಯವರೊಂದಿಗೂ ಉತ್ತಮ ರೀತಿಯಿಂದ ವರ್ತಿಸಿರಿ. (ಅನ್ನಿಸಾ:36) ಪ್ರವಾದಿ ವಚನಗಳಲ್ಲಿ ನೆರೆಹೊರೆ ಯವರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವ್ಯವಹರಿಸುವುದು ವಿಶ್ವಾಸದ ಕಡ್ಡಾಯ ಭಾಗವಾಗಿದೆ ಎನ್ನಲಾಗಿದೆ. ಖಂಡಿತವಾಗಿಯೂ ಅವನು ಸತ್ಯವಿಶ್ವಾಸಿಯಲ್ಲ ಎಂದು ಪ್ರವಾದಿ(ಸ)ರು ಹೇಳಿದರು. ಆಗ ಯಾರು ಪ್ರವಾದಿವರ್ಯರೇ? ಎಂದು ಪ್ರಶ್ನಿಸಲಾಯಿತು. ಯಾರ ಕಾರಣದಿಂದಾಗಿ ನೆರೆಹೊರೆಯ ವ್ಯಕ್ತಿಯು ಸುರಕ್ಷಿತನಲ್ಲವೋ ಅಂತಹ ವ್ಯಕ್ತಿ ಸತ್ಯವಿಶ್ವಾಸಿಯಲ್ಲ ಎಂದು ಅವರು ಉತ್ತರಿಸಿದರು. (ಬುಖಾರಿ)