ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಅದ್ದೂರಿಯಾಗಿ ನಡೆದ ಕನ್ನಡಾಂಬೆ ಹಬ್ಬ : ಸಾಧಕರಿಗೆ ಕನ್ನಡಾಂಬೆ ರತ್ನ ಪ್ರಶಸ್ತಿ


 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಹೂಟಗಳ್ಳಿಯಲ್ಲಿ ಭಾನುವಾರ ಸಂಜೆ ಕನ್ನಡಾಂಬೆ ಹಬ್ಬ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಹೂಟಗಳ್ಳಿ ಸಂತೆ ಮೈದಾನದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ನಡೆದ ಕನ್ನಡಾಂಬೆ ಹಬ್ಬ ಕಾರ್ಯಕ್ರಮವನ್ನು ಕೆ.ಜಿ.ದೇವಪಟ್ಟಣದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಮಠದ ಶ್ರೀ ಬಾಲಮಂಜುನಾಥ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಬಿಜೆಪಿ ಮುಖಂಡರಾದ ಕವೀಶ್‍ಗೌಡ ಸೇರಿದಂತೆ ವೇದಿಕೆಯಲ್ಲಿದ್ದ ವಿವಿಧ ಮಠಾಧೀಶರು ಉದ್ಘಾಟಿಸಿದರು.

ಕಾರ್ಯಕ್ರಮ ಕುರಿತು ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕನ್ನಡ ಭಾಷೆ, ನಾಡು, ನುಡಿಯ ರಕ್ಷಣೆಯನ್ನು ನಿರ್ವಹಿಸುತ್ತಿರುವ ಕನ್ನಡ ಪರ ಸಂಘಟನೆಗಳ ಕಾರ್ಯ ಪ್ರಶಂಸಾರ್ಹವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡಬೇಕಿದೆ. ಕನ್ನಡಾಂಬೆ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅವರು ತಮ್ಮ ನಿರಂತರ ಹೋರಾಟದ ಮೂಲಕ ನಾಡು ನುಡಿಯ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ ಎಂದರು.

ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸಾಮೀಜಿ ಮಾತನಾಡಿ, ಸಂಘಟಕರಾದ ರಾಜಶೇಖರ್ ಅವರು ಉತ್ತಮ ಸಂಘಟಕರು, ಗುರು ಹಿರಿಯರ ಬಗ್ಗೆ ಅಪಾರ ಭಕ್ತಿ, ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಅಲ್ಲದೇ ಕನ್ನಡ ಭಾಷೆಯ ಬಗ್ಗೆ, ಬಡವರು, ದೀನ ದಲಿರ ಬಗೆ ಅವರಿಗೆ ಅಪಾರ ಕಾಳಜಿ ಇದೆ. ಪೌರಕಾರ್ಮಿಕರಿಗೆ ಸನ್ಮಾನ ಮಾಡುವುದು, ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ಸೇರಿದಂತೆ ವಿವಿಧ ಲೇಖನ ಸಾಮಾಗ್ರಿ ನೀಡುವುದು ಅವರ ಜನಪರ ಕಾಳಜಿಯನ್ನು ತೋರುತ್ತದೆ. ಮೈಸೂರಿನಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ಸಂಘಟನೆಯು ಜನಪರವಾಗಿ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕಸಾಪ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷರಾದ ಎಂ.ಚಂದ್ರಶೇಖರ್, ತುಮಕೂರು ಜಿಲ್ಲೆಯ ಕರ್ನಾಟಕ ರಾಜ್ಯ ರೈತಸಂಘ, ಹಸಿರು ಸೇನೆಯ ಅಧ್ಯಕ್ಷರಾದ ಯೋಗೇಶ್(ಕರೀಗೌಡ್ರು), ಕರ್ನಾಟಕ ನ್ಯಾಯಪರ ವೇದಿಕೆ ರಾಜ್ಯಾಧ್ಯಕ್ಷರಾದ ಡಾ.ಸವಿತಾ, ಶಿರಸ್ತೆದಾರ್ ಕೆ.ಎಸ್.ಕುಬೇರ, ಇಲವಾಲ ಪೊಲೀಸ್ ಠಾಣೆಯ ಪಿಎಸ್‍ಐ ಮಹೇಂದ್ರ ಪಿ., ಕುಣಿಗಲ್ ವಿಧಾನಸಭಾ ಕ್ಷೇತ್ರದ ಜಿಪಂ ಮಾಜಿ ಸದಸ್ಯ ಹೆಚ್.ಎ.ಜಯರಾಮಯ್ಯ ಅವರಿಗೆ ಕನ್ನಡಾಂಬೆ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ಮತ್ತು ವೇದಿಕೆಯ ಪದಾಧಿಕಾರಿಗಳನ್ನು ಹೂಟಗಳ್ಳಿಯ ಪ್ರಮುಖ ಬೀದಿಗಳಲ್ಲಿ ವಿಶೇಷ ಡೊಳ್ಳು ಕುಣಿತದ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಹೂಟಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆ.ಹೆಚ್.ಬಿ.ಕಾಲೂನಿ ರೋಟರಿ ಶಾಲೆ, ಬೆಳವಾಡಿ ಸರ್ಕಾರಿ ಪ್ರೌಢಶಾಲೆ, ಇಲವಾಲ ಸರ್ಕಾರಿ ಪ್ರೌಢಶಾಲೆ, ಕೂರ್ಗಳ್ಳಿ ವಾಸವಿ ವಿದ್ಯಾಸಂಸ್ಥೆ ಮಕ್ಕಳಿಂದ ವಿವಿಧ ಸಾಂಸ್ಸಕೃತಿಕ ಕಾರ್ಯಕ್ರಮಗಳು ನಡೆದವು.

ಮಹಿಳಾ ಜಾದುಗಾರ್ತಿ ಬಿಗ್‍ಬಾಸ್ ಖ್ಯಾತಿಯ ಸುಮಾರಾಜ್‍ಕುಮಾರ್ ಅವರು ನಿರೂಪಣೆ ಮಾಡಿದರು. ಬೆಮೆಲ್ ಕಂಪಲಪ್ಪ ಅವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರವಿ ಎಸ್., ಕೂರ್ಗಳ್ಳಿ ಮಹದೇವಣ್ಣ, ಕುಮಾರ್ ಮೈದನಹಳ್ಳಿ, ಗೋಪಾಲಸ್ವಾಮಿ, ಕುಮಾರ್ ಎಸ್., ರಾಜಚೇತನ್, ಡಾ.ಸತೀಶ್, ಚಿಕ್ಕಣ್ನ, ರವೀಂದ್ರ ಸಿ., ಮಂಜುನಾಥ್, ದೇವರಾಜು, ಮಹದೇವು, ಅಶೋಕ, ಡಿ.ಎಂ.ಲೋಕೇಶ್, ಕಾವಿ ಬಸಪ್ಪ, ಕುಮಾರ್ ಎಸ್., ಯೋಗಮೂರ್ತಿ, ಲೋಕೇಶ್ ಬೊಮ್ಮೇನಹಳ್ಳಿ ಹಾಗೂ ಕನ್ನಡಾಂಬೆ ರಕ್ಷಣಾ ವೇದಿಕೆಯ ನಂಜುಂಡ, ಸಂತೋಷ್, ಹೊನ್ನೆಗೌಡ, ಸಿಂಧುವಳ್ಳಿ ಶಿವಕುಮಾರ್, ಮಹದೇವಸ್ವಾಮಿ, ಲೋಕೇಶ್, ಇ.ವಿ. ನಾಗರಾಜ್, ಗೌತಮ್, ಶ್ರೀನಿವಾಸ್, ಕಿಕ್ಕೇರಿ ಕುಮಾರ್, ಕಿರಣ್ ಉಪಸ್ಥಿತರಿದ್ದರು.

ಗೋಮಾತೆ ರಾಷ್ಟ್ರಪ್ರಾಣಿಯಾಗಿ ಘೋಷಿಸಲಿ 

ರೈತರು ಮತ್ತು ಯೋಧರು ಈ ದೇಶದ ಆಧಾರ ಸ್ಥಂಭಗಳು, ಗೋಮಾತೆ ರೈತರ ಬದುಕಿಗೆ ಆಧಾರವಾಗಿದೆ. ಗೋವುಗಳನ್ನು ಸಂರಕ್ಷಣೆ ಮಾಡಬೇಕು. ಗೋಮಾತೆಯ ರಕ್ಷಣೆಗೆ ಅಭಿಯಾನ ಮಾಡಬೇಕು. ಗೋ ಹತ್ಯೆ ನಿಷೇಧ ಮಾಡಬೇಕು. ರಾಷ್ಟ್ರಪ್ರಾಣಿ ಎಂಬುದು ಹುಲಿಯಾದರೂ ಎರಡನೇ ಪ್ರಾಣಿಯಾಗಿ ಗೋಮಾತೆಯೂ ರಾಷ್ಟ್ರಪ್ರಾಣಿ ಎಂದು ಘೋಷಣೆ ಮಾಡಬೇಕು.

ಶ್ರೀ ಬಾಲಮಂಜುನಾಥ ಸ್ವಾಮೀಜಿ