ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ಶುಕ್ರವಾರ ನಿಧನರಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ ಹತ್ತಾರು ಗಿಡಗಳನ್ನು ನೆಡುವ ಮೂಲಕ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಅರ್ಥಪೂರ್ಣವಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಹಳೆಯ ಕೋರ್ಟ್ ಮುಂಭಾಗದ ಉದ್ಯಾನವನದಲ್ಲಿ ಶನಿವಾರ ಸಂಜೆ ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ವಿವಿಧ ಮಾದರಿಯ ಗಿಡಗಳನ್ನು ನೆಟ್ಟು ವೃಕ್ಷಮಾತೆಗೆ ಭಾವಪೂರ್ಣವಾಗಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ಮಾತನಾಡಿ, 114 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿದ ಸಾಲುಮರದ ತಿಮ್ಮಕ್ಕನವರು ಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ ಮನುಕುಲಕ್ಕೆ ನಿಸರ್ಗದ ಮಹತ್ವವನ್ನು ತಿಳಿಸಿಕೊಟ್ಟರು.
ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರು ನೆಟ್ಟಿರುವ ಸಾವಿರಾರು ಗಿಡಗಳು ಹೆಮ್ಮರವಾಗಿ ಬೆಳೆದು ನಮಗೆ ಉಸಿರು ನೀಡುತ್ತಿವೆ. ಇಂತಹ ಮಹಾನ್ ಚೇತನದ ಅಗಲಿಕೆ ಪರಿಸರ ಪ್ರೇಮಿಗಳಿಗೆ ತುಂಬಲಾರದ ನಷ್ಟ ಎಂದರು.
ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ಖಚಾಂಜಿ ನಂಜುAಡ, ಸಿಂಧುವಳ್ಳಿ ಶಿವಕುಮಾರ್, ಹೊನ್ನೇಗೌಡ, ನಾಗರಾಜ್, ಇವಿ ಗೌತಮ್ , ಮನುಗೌಡ, ಶಿವು ಈರಪ್ಪನ ಕೊಪ್ಪಲು, ಕಿರಣ್, ಮಹದೇವಸ್ವಾಮಿ, ಕರುನಾಡು ಲಾರಿ ಚಾಲಕರ ಸಂಘದ ಅಧ್ಯಕ್ಷರಾದ ಲೋಕೇಶ್, ಶ್ರೀನಿವಾಸ್, ಭಾಗ್ಯ, ಲಕ್ಷಿ÷್ಮ, ನಾಗಮ್ಮ ಮತ್ತಿತ್ತರು ಉಪಸ್ಥಿತರಿದ್ದರು.
ಪ್ರತೀ ವರ್ಷ ಗಿಡನೆಟ್ಟು ಸ್ಮರಣೆ
ಪದ್ಮಶ್ರೀ ಪುರಸ್ಕöÈತರಾದ ಸಾಲು ಮರದ ತಿಮ್ಮಕ್ಕ ತಮಗೆ ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಮಕ್ಕಳಂತೆ ಬೆಳೆಸಿ, 385 ಆಲದ ಮರಗಳು ಸೇರಿದಂತೆ 8,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದರು. ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಇವರ ಪರಿಸರ ಪ್ರೇಮ ಎಲ್ಲರಿಗೂ ಮಾದರಿಯಾಗಿದೆ. ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿವರ್ಷ ಮರಗಳನ್ನು ನೆಡುವ ಮೂಲಕ ಅವರ ಸಾಲುಮರದ ತಿಮ್ಮಕ್ಕನ ಸ್ಮರಣೆ ಮಾಡಲಾಗುವುದು.
• ಬಿ.ಬಿ.ರಾಜಶೇಖರ್, ರಾಜ್ಯಾಧ್ಯಕ್ಷರು




