ಶಬರಿಮಲೆಯಲ್ಲಿ ಅಯ್ಯಪ್ಪನ ಭಕ್ತರ ಅನುಕೂಲಕ್ಕಾಗಿ ಪುನೀತ್ ರಾಜಕುಮಾರ್ ಅಭಿಮಾನಿ ಚಿಕ್ಕಕೊಪ್ಪಲು ಡಿ.ಪುನೀತ್ ನೀಡಿರುವ ಉಚಿತ ಅಂಬುಲೆನ್ಸ್ ಸೇವೆಗೆ ಸಂಸದ ಯುದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ


 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ದೇಶದ ವಿವಿಧ ಮೂಲೆಗಳಿಂದ ಕೇರಳದ ವಿಶ್ವ ವಿಖ್ಯಾತ ಶಬರಿಮಲೆ ದೇವಾಲಯಕ್ಕೆ ಹೋಗುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದ ಡಿ.ಪುನೀತ್ ನೀಡಿರುವ 

ಡಾ. ಪುನೀತ್ ರಾಜ್ ಕುಮಾರ್ ಸಂಸ್ಮರಣಾ ಸೇವಾ ರಥ ಉಚಿತ ಅಂಬುಲೆನ್ಸ್ ಸೇವೆಗೆ ಸಂಸದ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಿದರು.

ಶನಿವಾರ ಬೆಳಗ್ಗೆ ಮೈಸೂರಿನ ಅರಮನೆ ಬಳಿಯ ಕೋಟೆ ಆಂಜನೇಯ ದೇವಾಲಯದ ಮುಂಭಾಗ ಈ ಉಚಿತ ಆಂಬುಲೆನ್ಸ್ ಸೇವೆಗೆ ಸಂಸದರು ಹೆಸರಾಂತ ನಟ ಪುನಿತ್ ರಾಜಕುಮಾರ್ ಅವರ ಭಾವಚಿತ್ರವಿರುವ ಕನ್ನಡದ ಬಾವುಟವನ್ನು ಬೀಸಿ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ಶಬರಿಮೆಲೆಗೆ ಲಕ್ಷಾಂತರ ಭಕ್ತರು ಭೇಟಿ ನಿಡಿ ಅಯ್ಯಪ್ಪನ ದರ್ಶನ ಮಾಡುತ್ತಾರೆ. ಇಲ್ಲಿ ಹಲವು ಮೈಲಿಗಳ ದೂರ ಕಾಲ್ನಡಿಗೆಯಲ್ಲಿ ಹೋಗಬೇಕಿದೆ, ಇಂತಹ ಸಂದರ್ಭದಲ್ಲಿ ಭಕ್ತರಿಗೆ ಅನಾರೋಗ್ಯ ಕಾಡುವ ಸಮಸ್ಯೆ ಇದೆ. ಇಂತಹ ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ಅಗತ್ಯವಿದ್ದು, ಇಂತಹ ಮಹಾನ್ ಸೇವಾ ಕಾರ್ಯಕ್ಕೆ ನಟ ಪುನಿತ್ ರಾಜಕುಮಾರ್ ಅವರ ಅಭಿಮಾನಿಯೂ ಆದ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದ ಡಿ. ಪುನೀತ್ ಮತ್ತು ಅಭಿಮಾನಿ ಬಳಗದವರು ಒಳ್ಳೆಯ ಕೆಲಸ ಮಾಡಿರುವುದು ಶ್ಲಾಘನೀಯ ಎಂದರು.

ಆAಬುಲೆನ್ಸ್ ಸೇವೆಯು ಶಬರಿಮಲೆಯಲ್ಲಿ ಕಾಣೆಯಾದವರು, ಅನಾರೋಗ್ಯಕ್ಕೆ ತುತ್ತಾದವರು ಹಾಗೂ ವಾಹನ ತೊಂದರೆಗೀಡಾದವರ ಸಹಾಯಕ್ಕಾಗಿ ಬಳಸಲಾಗುವುದು. ಇಂತಹ ಸೇವೆಗಳು ಇನ್ನಷ್ಟು ಹೆಚ್ಚಾಗಲಿ ಎಂದು ಹೇಳಿದರು. 

ಇದಕ್ಕೂ ಮುನ್ನ ಆಂಬುಲೆನ್ಸ್ಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ವಿಶೇಷ ಪೂಜೆ ಸಲ್ಲಿಸಲಾಯಿತು, 

ಈ ಸಂದರ್ಭದಲ್ಲಿ ಕೆಆರ್ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಮಾಜಿ ಶಾಸಕ ನಾಗೇಂದ್ರ, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ,  ಕಿರಣ್ ಗೌಡ, ಬಿ.ಎಂ. ರಘು, ಡಿ. ಪುನೀತ್ ಅಭಿಮಾನಿ ಬಳಗದ ಸದಸ್ಯರಾದ ಪುಟ್ಟುಬುದ್ಧಿ, ರವಿ ಬೆಳ್ಳಯ್ಯ, ಗಜೇಂದ್ರ, ರಾಮು, ಮಂಜುನಾಥ್,  ಅನಿಲ್, ಅರ್ಜುನ್, ಕಿರಣ್, ಪವನ್, ಶರತ್, ರಾಮಣ್ಣ, 

ಸೋಮು, ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದೇಶದ ಅಗಗಣ್ಯ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಯಲ್ಲಿ ದಿನನಿತ್ಯ ಲಕ್ಷಾಂತರ ಭಕ್ತರು ದೇಶದ ಮೂಲೆ ಮೂಲೆಗಳಿಂದ ಆಗಮಿಸುತ್ತಾರೆ. ಮುಂದಿನ ಎರಡು ತಿಂಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಉಚಿತವಾಗಿ ಆಂಬುಲೆನ್ಸ್ ಸೇವೆ ನೀಡಲಾಗಿದೆ. ಭಕ್ತರು ಇದರ ಸದುಪಯೋಗ ಪಡಿಸಿಕೊಂಡರೆ ನಮ್ಮ ಸೇವೆ ಸಾರ್ಥಕ

ಡಿ.ಪುನೀತ್, ಚಿಕ್ಕಕೊಪ್ಪಲು ಸೇವಾರ್ಥದಾರರು