ವರದಿ : ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ನಗರದ ಪ್ರತಿಷ್ಠಿಯ ಅಪೋಲೋ ಆಸ್ಪತ್ರೆಯಲ್ಲಿ ಹೊಟ್ಟೆಯ ಕ್ಯಾನ್ಸರ್ ರೋಗ ಕುರಿತು ಜಾಗೃತಿ ಕಾರ್ಯಾಗಾರ ನಡೆಯಿತು.
ನಗರದ ಅಪೋಲೋ ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಗ್ಯಾಸ್ಟೊçà ಎಂಟರೋಲಾಜಿಸ್ಟ್ ಡಾ.ರಾಜಕುಮಾರ್ ಪಿ.ವಾದ್ವಾ ಅವರು ಮಾತನಾಡಿ, ಇಂದು ಜಗತ್ತಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಗ್ಯಾಸ್ಟಿçಕ್ ಸಮಸ್ಯೆಗಳಿಂದ ಹೊಟ್ಟೆಯ ಕ್ಯಾನ್ಸರ್ ರೋಗ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಸಾರ್ವಜನಿಕರು ಈ ರೋಗ ಬರುವ ಮುನ್ನ ಸ್ಕಿçÃನಿಂಗ್ ಮಾಡಿಸಿಕೊಂಡರೆ ರೋಗವನ್ನು ಬೇಗನೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಗ್ಯಾಸ್ಟಿçಕ್ ಸಮಸ್ಯೆ ಇಂದು ನಮ್ಮ ದೇಶದ ಸಾರ್ವಜನಿಕರಲ್ಲಿ ವೇಗವಾಗಿ ಹರಡುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯ ಆಹಾರ ಪದ್ದತಿ, ವ್ಯಾಯಾಮವಿಲ್ಲದ ಒತ್ತಡದ ಜೀವನ, ನಿಯಮಿತವಾಗಿ ಆಹಾರ ಸೇವನೆ ಮಾಡದಿರುವುದು, ಧೂಮಪಾನ, ಮಧ್ಯಪಾನ ಹಲವು ಬಾರಿ ಕಾಯಿಸಿದ ಎಣ್ಣೆಯಲ್ಲಿ ಮಾಡಿದ ಕರಿದ ಪದಾರ್ಥಗಳ ಸೇವನೆ ಮುಂತಾದ ಜೀವನ ಕ್ರಮಗಳಿಂದ ಸಾಕಷ್ಟು ಜನರಲ್ಲಿ ಗ್ಯಾಸ್ಟಿçಕ್ ಸಮಸ್ಯೆ ಕಾಡುತ್ತಿದೆ. ಇದರಿಂದ ಹೊರಬರಲು ನಿಯಮಿತವಾದ ವ್ಯಾಯಾಮ, ಉತ್ತಮ ಆಹಾರ ಪದ್ದತಿ, ವ್ಯಸನಮುಕ್ತ ಜೀವನ ನಡೆಸುವುದು ಅತ್ಯಾವಶ್ಯಕವಾಗಿದೆ ಎಂದರು.
ಬಹುತೇಕ 40 ವರ್ಷ ಮೇಲ್ಪಟ್ಟ ವಯೋಮಾನದ ಜನರಲ್ಲಿ ಈ ಸಮಸ್ಯೆ ಕಾಡುತ್ತಿದ್ದು, ಮುಂದೆ ಇದು ಮಾರಣಾಂತಿಕವಾಗಿಯೂ ಪರಿಣಮಿಸುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕರು ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುವ ಸ್ಕಿçÃನಿಂಗ್ ಸೇವೆಯನ್ನು ಪಡೆದುಕೊಂಡು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ಸಲ್ಟೆಂಟ್ ಸರ್ಜಿಕಲ್ ಗ್ಯಾಸ್ಟೊçà ಎಂಟರೋಲಾಜಿಸ್ಟ್ ಡಾ.ನೈರುತ್ಯ ಮಾತನಾಡಿ, ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡ ನಂತರ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂದ ಕಾಯಿಲೆ ಬರುವ ಮುನ್ನ ಸ್ಕಿçÃನಿಂಗ್ ಮಾಡಿಸಿಕೊಳ್ಳವುದು ಉತ್ತಮ, ದೀರ್ಘಕಾಲದ ಅಸಿಡಿಟಿ, ತೂಕ ಕಡಿಮೆಯಾಗುವುದು, ಅಜೀರ್ಣ ಮುಂತಾದವು ಗ್ಯಾಸ್ಟಿçಕ್ ರೋಗದ ಲಕ್ಷಣಗಳಾಗಿವೆ. ಈ ಕಾಯಿಲೆ ಮಾರಾಣಾಂತಿಕವೂ ಹೌದು. ಈ ಕಾರಣದಿಂದ ಸಾರ್ವಜನಿಕರಿಗೆ ಅಪೋಲೋ ಆಸ್ಪತ್ರೆಯಿಂದ ಇದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕನ್ಸಲ್ಟೆಂಟ್ ಸರ್ಜಿಕಲ್ ಆಂಕೋಲಾಜಿಸ್ಟ್ ಡಾ.ರಮ್ಯಾ ಯಥಡ್ಕ, ಕನ್ಸಲ್ಟೆಂಟ್ ಮೆಡಿಕಲ್ ಆಂಕೋಲಾಜಿಸ್ಟ್ ಡಾ.ನವೀನ್ ಜಯರಾಂ ಅನ್ವೇಕರ್, ಡಾ.ರಂಜಿತಾ ಮತ್ತಿತರರು ಇದ್ದರು.

