ವರದಿ : ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 16ನೇ ಘಟಿಕೋತ್ಸವ ನ.9ರಂದು ನಡೆಯಲಿದ್ದು, 2925 ವಿದ್ಯಾರ್ಥಿಗಳು ವಿವಿಧ ಪದವಿ ಪಡೆದುಕೊಳ್ಳಲಿದ್ದಾರೆ.
ಶಿವರಾತ್ರೀಶ್ವರ ನಗರದ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಡಾ.ಹೆಚ್.ಬಸವನಗೌಡಪ್ಪ, ನವೆಂಬರ್ 9 ರಂದು ಭಾನುವಾರ ಮಧ್ಯಾಹ್ನ 1.25ಕ್ಕೆ ಸಂಸ್ಥೆಯ ಆವರಣದಲ್ಲಿ ಕುಲಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ಸಾನಿಧ್ಯದಲ್ಲಿ ಘಟಿಕೋತ್ಸವ ನಡೆಯಲಿದೆ.
ಉಪರಾಷ್ಟçಪತಿ ಸಿ.ಪಿ.ರಾಧಾಕೃಷ್ಣನ್ ಘಟಿಕೋತ್ಸವ ಭಾಷಣ ಮಾಡಿ, ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪದವಿ ವಿತರಿಸುವರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ, ವಿವಿಯ ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಸಚಿವ ಡಾ.ಬಿ.ಮಂಜುನಾಥ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಸುಧೀಂದ್ರ ಭಟ್, ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
2925 ವಿದ್ಯಾರ್ಥಿಗಳಿಗೆ ಪದವಿ:
ವಿವಿಧ ವಿಷಯಗಳಲ್ಲಿ 1187 ಪುರುಷರು, 1738 ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2925 ವಿದ್ಯಾರ್ಥಿಗಳು ವಿವಿಧ ಪದವಿ ಸ್ವೀಕರಿಸುವರು. 80 ವಿದ್ಯಾರ್ಥಿಗಳಿಗೆ ಪಿಎಚ್‌ಡಿ, 68 ವಿದ್ಯಾರ್ಥಿಗಳಿಗೆ 100 ಚಿನ್ನದ ಪದಕ ಪ್ರದಾನ ಮಾಡಲಾಗುವುದು. ಎಂದು ತಿಳಿಸಿದರು.
ಶೈಕ್ಷಣಿಕ ಸಾಧನೆ:
ಜೆಎಸ್‌ಎಸ್ ಎಹೆಚ್‌ಎಆರ್ ಶೈಕ್ಷಣಿಕ ಮತ್ತು ಸಂಶೋಧನಾ ವಲಯದಲ್ಲಿ ಉತ್ತಮ ಸಾಧನೆಗೆ ನ್ಯಾಕ್ ಎ+ ಗ್ರೇಡ್‌ನೊಂದಿಗೆ ಮಾನ್ಯತೆ ಪಡೆದಿದ್ದು, ಭಾರತದ ಅತ್ತುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಎನ್‌ಐಆರ್‌ಎಫ್ 2025 ಶ್ರೇಯಾಂಕದಲ್ಲಿ 24ನೇ ಸ್ಥಾನ ಪಡೆದುಕೊಂಡಿದ್ದು, ಭಾರತೀಯ ವಿವಿಗಳಲ್ಲಿ 21ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ದ ಇಂಪ್ಯಾಕ್ಟ್ ಶ್ರೇಯಾಂಕದಲ್ಲಿ 56ನೇ ಸ್ಥಾನ ಪಡೆಯುವ ಮೂಲಕ ಅಗ್ರ 100ರೊಳಗೆ ಸ್ಥಾನ ಪಡೆದ ಹೆಗ್ಗಳಿಕೆ ಹೊಂದಿದೆ ಎಂದು ಮಾಹಿತಿ ನೀಡಿದರು.
23 ಕೋರ್ಸ್ ಪರಿಚಯ: ಜೆಎಸ್‌ಎಸ್ ಎಹೆಚ್‌ಎಆರ್‌ನಲ್ಲಿ ಪ್ರಸ್ತುತ 9000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 800 ಅಧ್ಯಾಪಕರು, 600 ಬೋಧಕೇತರ ಸಿಬ್ಬಂದಿ ಇದ್ದಾರೆ. 2024-25ರಲ್ಲಿ ವಿವಿಧ ವಿಭಾಗಗಳಿಂದ 23 ಹೊಸ ಕೋರ್ಸ್ಗಳನ್ನು ಪರಿಚಯಿಸಲಾಗಿದ್ದು, 2 ಪದವಿ ಕೋರ್ಸ್, 14 ಸ್ನಾತಕೋತ್ತರ ಕೋರ್ಸ್, 4 ಫೆಶೋಶಿಪ್, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ, ಆರೋಗ್ಯ ಅರ್ಥಶಾಸ್ತç, ಏರೋ-ವೈದ್ಯಕೀಯ ವಿಜ್ಞಾನಗಳು ಮತ್ತು ಹೃದ್ರೋಗ ಔಷಧ ಶಾಸ್ತçದಂತಹ ಅತ್ಯಾಧುನಿಕ ಕ್ಷೇತ್ರಗಳನ್ನು ಒಳಗೊಂಡ 3 ರೆಸಿಡೆನ್ಸಿ ಕೋರ್ಸ್ಗಳು ಸೇರಿವೆ. ಈ ಮೂಲಕ ಕೋರ್ಸ್ಗಳ ಜೆಎಸ್‌ಎಸ್ ಎಹೆಚ್‌ಎಆರ್‌ನಲ್ಲಿನ ಕೋರ್ಸ್ಗಳ ಸಂಖ್ಯೆ 193ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
53.65 ಕೋಟಿ ಅನುದಾನ:
ಸಂಶೋಧನಾ ಶ್ರೇಷ್ಠತೆಯಲ್ಲಿ ವಿಶ್ವವಿದ್ಯಾನಿಲಯ 2024-25ರಲ್ಲಿ ವಿವಿಧ ಸರ್ಕಾರಿ ಹಣಕಾಸು ಸಂಸ್ಥೆಗಳಿAದ 53.65 ಕೋಟಿ ಅನುದಾನ ಪಡೆದಿದ್ದು, 133 ಸಂಶೋಧನಾ ಯೋಜನೆಗಳನ್ನು ಮಂಜೂರು ಮಾಡುವುದರ ಜತೆಗೆ, ಪ್ರಕಟಣೆಗಳು ಮತ್ತು ಪೇಟೆಂಟ್‌ಗಳಿಗೆ ಗಮನಾರ್ಹ ಕೊಡುಗೆ ನೀಡಿದೆ. ಇದುವರೆಗೆ 15,181 ಪ್ರಕಟಣೆಗಳನ್ನು ಹೊರಡಿಸಿದ್ದು, 2025ರಲ್ಲಿ ಜನವರಿಯಿಂದ ಸೆಪ್ಟೆಂಬರ್‌ವರೆಗೆ 1000ಕ್ಕೂ ಹೆಚ್ಚು ಪ್ರಕಟಣೆಗಳನ್ನು ಹೊರ ತಂದಿದೆ. ಜತೆಗೆ ಜಾಗತಿಕವಾಗಿ 165 ಸಹಯೋಗಗಳನ್ನು ಹೊಂದಿದ್ದು, ಅಂತರಾಷ್ಟಿçÃಯ ಮಟ್ಟದಲ್ಲಿ ವಿಶಿಷ್ಟ ಹೆಜ್ಜೆ ಗುರುತು ಮೂಡಿಸಿದೆ ಎಂದರು.
ವರುಣಾ ಬಳಿ ನಿರ್ಮಾಣವಾಗುತ್ತಿರುವ ಕ್ಯಾಂಪಸ್ ಅತ್ಯಾಧುನಿಕವಾಗಿದೆ. ಭಾರತೀಯ ಜ್ಞಾನ ವ್ಯವಸ್ಥೆ ವಿಭಾಗ, ಜಾಗತಿಕ ಕಾನೂನು ವಿದ್ಯಾಲಯ, ನರ್ಸಿಂಗ್ ಕಾಲೇಜು ನೂತನ ಕ್ಯಾಂಪಸ್‌ನಲ್ಲಿರಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಸಚಿವ ಡಾ.ಬಿ.ಮಂಜುನಾಥ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಸುಧೀಂದ್ರ ಭಟ್, ವಿವಿಧ ವಿಭಾಗಗಳ ಡೀನ್‌ಗಳಾದ ಡಾ.ಹೆಚ್.ಕೆ.ಮಮತಾ, ಡಾ.ವಿಶಾಲಕುಮಾರ್ ಗುಪ್ತ, ಡಾ.ರವೀಶ್, ಡಾ.ದಾಕ್ಷಾಯಿಣಿ, ಪ್ರೊ.ರವೀಶ್, ಪ್ರಾಂಶುಪಾಲ ಪ್ರೊ.ಡಿ.ನಾರಾಯಣಪ್ಪ ಇದ್ದರು. ಇದ್ದರು.

