ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ನಗರದ ವಾರ್ಡ್ ನಂ. ೯ ಮತ್ತು ೧೦ಕ್ಕೆ ಸೇರಿದ ಸುಮಾರು ೨೦ಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ, ಭೂರಿ ಭೋಜನ ಹಾಕಿಸುವ ಮೂಲಕ ಕಾಂಗ್ರೆಸ್ ಮುಖಂಡ ಮುತ್ತಾಹೀರ್ ಪಾಷ ತಮ್ಮ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ನಗರದ ಕೆಸರೆ ಬಡಾವಣೆಯ ತಮ್ಮ ಕಚೇರಿ ಎದುರು ನಡೆದ ಹುಟ್ಟುಹಬ್ಬ ಸಮಾರಂಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಮೂರ್ತಿ ಅವರು ಸೇರಿದಂತೆ ವಿವಿಧ ಗಣ್ಯರು ಮುತ್ತಾಹೀರ್ ಪಾಷ ಅವರಿಗೆ ಶುಭಾಶಯ ಕೋರಿದರು.
ನಗರ ಕಾಂಗ್ರೆಸ್ ಅಧ್ಯಕ್ಷರಾದ ಮೂರ್ತಿ ಮಾತನಾಡಿ, ಮುತ್ತಾಹೀರ್ ಸದಾಕಾಲ ಬಡವರ ಪರವಾಗಿ ಆಲೋಚನೆ ಮಾಡುವ ವ್ಯಕ್ತಿಯಾಗಿದ್ದಾರೆ. ತಮ್ಮ ವಾರ್ಡಿನ ಜನರ ಕಷ್ಟಗಳಿಗೆ ಸದಾ ಸ್ಪಂದಿಸಿ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ಅಧಿಕಾರ ಸಿಕ್ಕಿದ್ದಲ್ಲಿ ಜನರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಅವರ ಸಮಾಜಮುಖಿ ಕೆಲಸಕ್ಕೆ ನಮ್ಮ ಬೆಂಬಲವಿದೆ. ತಾಯಿ ಚಾಮುಂಡೇಶ್ವರಿ ಅವರಿಗೆ ಎಲ್ಲ ಶಕ್ತಿ, ಸೌಭಾಗ್ಯಗಳನ್ನು ಕರುಣಿಸಲಿ ಎಂದರು.
ಕಾರ್ಯಕ್ರಮದಲ್ಲಿ ಮುತ್ತಾಹೀರ್ ಪಾಷ ಮಾತನಾಡಿ, ನನ್ನ ಹುಟ್ಟು ಹಬ್ಬದ ಪ್ರಯುಕ್ತ ಇಂದು ೨೦ಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ. ಜಾತಿ, ಧರ್ಮಗಳನ್ನು ಮೀರಿ ನನ್ನ ಎಲ್ಲ ಸಮುದಾಯದ ಗೆಳೆಯರು ನನ್ನ ಹುಟ್ಟು ಹಬ್ಬಕ್ಕೆ ಆಗಮಿಸಿ ನನಗೆ ಶುಭ ಕೋರಿದ್ದಾರೆ. ವಿಶೇಷವಾಗಿ ಆಟೋ ಚಾಲಕರು ಶ್ರಮ ಜೀವಿಗಳು, ಕನಿಷ್ಠ ಆದಾಯದಲ್ಲಿ ಗರಿಷ್ಠ ಜನಸೇವೆ ಮಾಡುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಟೋ ಚಾಲಕರು ಮಾತನಾಡಿ, ಮುತ್ತಾಹೀರ್ ಪಾಷ ಅವರು ಸ್ನೇಹಜೀವಿಯಾಗಿದ್ದಾರೆ. ಸದಾಕಾಲ ಆಟೋ ಚಾಲಕರ ಎಲ್ಲ ಕಷ್ಟಸುಖಗಳಿಗೆ ಸ್ಪಂದಿಸುತ್ತಾರೆ. ಇವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದರು