ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಸಿದ್ಧಾರ್ಥನಗರದ ಕನಕಭವನದಲ್ಲಿ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಕಾಂತರಾಜು ಅವರ ಸಮೀಕ್ಷೆಯಲ್ಲಿ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಕುರುಬ ಸಮುದಾಯದ ಸಂಖ್ಯೆಯನ್ನು ವಿವಿಧ ಕಾರಣಗಳಿಂದ ಕಡಿಮೆ ತೋರಿಸಲಾಗಿತ್ತು. ಈ ಬಗ್ಗೆ ನಮ್ಮ ಸಂಘಟನೆ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮಮಟ್ಟದಲ್ಲಿ ನಮ್ಮ ಕುರುಬ ಸಮುದಾಯದವರಿಗೆ ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ವಿದ್ಯಾವಂತ ಯುವಕರು, ಜನ ಪ್ರತಿನಿಧಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದೆವೆ, ಅಲ್ಲದೇ ಸಮೀಕ್ಷೆ ಸಂದರ್ಭದಲ್ಲಿ ಅರ್ಜಿಯಲ್ಲಿರುವ 60 ಪ್ರಶ್ನಾವಳಿಗಳ ಪೈಕಿ ಪ್ರಮುಖವಾಗಿ ಜಾತಿ ಕಾಲಂನಲ್ಲಿ ಕುರುಬ ಎಂದು ಬರೆಸಬೇಕು. ಉಳಿದಂತೆ ತಮ್ಮಲ್ಲಿರುವ ಇತರೆ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನು ತಿಳಿಸಬೇಕು ಎಂದು ಅವರು ಹೇಳಿದರು.
ಸಮೀಕ್ಷೆಗೆ ಬರುವ ಅಧಿಕಾರಿಗಳು ಕೇಳುವ 60 ಪ್ರಶ್ನಾವಳಿಯಲ್ಲಿ ಪ್ರಮುಖವಾಗಿ ಜಾತಿ ಕಾಲಂನಲ್ಲಿ ಕುರುಬ ಎಂದು ಬರೆಸಬೇಕು. ನಗರ ಪ್ರದೇಶದಲ್ಲಿರುವ ನಮ್ಮ ಸಮುದಾಯದವರನ್ನು ಗುರುತಿಸಿ ಅವರಿಗೆ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಸಭೆಗೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಮುಖಂಡರು ಬಂದಿದ್ದಾರೆ. ಬೆಂಗಳೂರಿನಿಂದ ನಮ್ಮ ಸಮುದಾಯದ ನಾಯಕರು ಸಹ ಬಂದಿದ್ದಾರೆ. ಅವರೆಲ್ಲರಿಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಜನ ಸಾಮಾನ್ಯರು ಯಾವ ರೀತಿ ಬರೆಸಬೇಕು ಎಂಬ ಮಾಹಿತಿಯನ್ನು ನೀಡಿದ್ದೇವೆ ಎಂದು ಸುಬ್ರಹ್ಮಣ್ಯ ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್,
ಶೋಷಿತ ಸಮುದಾಯದ ಸಂಚಾಲಕ ರಾಮಚಂದ್ರಪ್ಪ,
ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಣ್ಣ, ಖಜಾಂಜಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ ಸಮಾಜದ ಮುಖಂಡರುಗಳಾದ ಅಮಿತ್, ಚಿಕ್ಕಣ್ಣ, ದೊಳ್ಳೇಗೌಡ, ರಂಗರಾಜು, ಬಸವರಾಜು, ರವಿ, ರಾಮಕೃಷ್ಣಪ್ಪ, ಮುಂತಾದವರು ಸಮುದಾಯದ ಜನರು ಸಮೀಕ್ಷೆಯಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸಭಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದ್ರ್ಭದಲ್ಲಿ ಕುರುಬ ಸಮುದಾಯದ ಮುಖಂಡರಾದ ರೇಖಾ, ಛಾಯ, ರಾಜೇಶ್ವರಿ, ತಾಲೂಕು ಅಧ್ಯಕ್ಷರುಗಳಾದ ಕುನ್ನೆಗೌಡ, ಆನಂದ್, ಕೆಂಪಣ್ಣ, ಅಹಿಂದ ಕೃಷ್ಣಪ್ಪ ಮುಂತಾದವರು ಇದ್ದರು.
ಮಹೇಶ್, ಸುನಿಲ್, ಬಸವರಾಜ್, ಮಾಲೇಗೌಡ, ಸೇರಿದಂತೆ ಮೈಸೂರು ಜಿಲ್ಲಾ ಮತ್ತು ತಾಲ್ಲೂಕು ಕುರುಬ ಸಂಘದ ಪದಾಧಿಕಾರಿಗಳು ಮತ್ತು ಸಮಾಜದ ಯುವಕರು ಕನಕದಾಸ ಮತ್ತು ರಾಯಣ್ಣ ಸಂಘದ ಸದಸ್ಯರುಗಳು ಮತ್ತು ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು