ಆಗಸ್ಟ್ 13 ರಂದು ಸತ್ಯನಾರಾಯಣ, ಬಿ.ಜಿ.ಕೇಶವ ನೇತೃತ್ವದಲ್ಲಿ ‘ಮನ ಮನೆಗೆ ಮಾಚಿದೇವ’ ಕಾರ್ಯಕ್ರಮ ನಡೆಸಲು ತೀರ್ಮಾನ


 ಮೈಸೂರು : ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ.ಶ್ರೀ ಬಸವ ಮಾಚಿದೇವ ಸ್ವಾಮೀಜಿ ಅವರು ಆಗಸ್ಟ್ ೧೩ ರಂದು ಮೈಸೂರಿನಲ್ಲಿ ಹಮ್ಮಿಕೊಂಡಿರುವ ’ಮನ ಮನೆಗೆ ಮಾಚಿದೇವ’ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಮತ್ತು ಗೌರವಾಧ್ಯಕ್ಷ ಬಿ.ಜಿ.ಕೇಶವ ಅವರ ನೇತೃತ್ವದಲ್ಲಿ ಸಂಭ್ರಮದಿಂದ ನಡೆಸಲು ಜಿಲ್ಲಾ ಮತ್ತು ತಾಲ್ಲೂಕು ಮಡಿವಾಳ ಸಂಘಟನೆಯ ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರು ತೀರ್ಮಾನಿಸಿದರು. 

ಶುಕ್ರವಾರ ಬೆಳಗ್ಗೆ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಡಿವಾಳ ಮುಖಂಡರು ಈ ತೀರ್ಮಾನ ಕೈಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸತ್ಯನಾರಾಯಣ ಅವರು ಮಾತನಾಡಿ, ಕಾರ್ಯಕ್ರಮವು ಆಗಸ್ಟ್ ೧೩ ರಂದು ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಬೆಳಗ್ಗೆ ೧೦.೩೦ಕ್ಕೆ ನಡೆಯಲಿದೆ, ಇದೇ ಮೊದಲ ಬಾರಿಗೆ ಡಾ.ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು 

ಮೈಸೂರಿನಲ್ಲಿ ಸಮುದಾಯದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತದೆ.

ಮೈಸೂರು ಜಿಲ್ಲೆಯಿಂದ ಸುಮಾರು ೫೦೦ ಜನರು ಭಾಗವಹಿಸುತ್ತಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಮೈಸೂರು-ಕೊಡಗು ಜಿಲ್ಲಾ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಚಾಮರಾಜನಗರ ಜಿಲ್ಲಾ ಸಂಸದರಾದ ಸುನೀಲ್ ಬೋಸ್ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲ ಶಾಸಕರುಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಹ ತೀರ್ಮಾನಿಸಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಶ್ರೀಗಳಿಗೆ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ವೈಯುಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಸಹ ಅವರು ಹೇಳಿದರು.

ಪೂರ್ವಭಾವಿ ಸಭೆಯಲ್ಲಿ ಮೈಸೂರು ಜಿಲ್ಲಾ ವೀರ ಮಡಿವಾಲ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಗೌರವಾಧ್ಯಕ್ಷರಾದ ಬಿ.ಜಿ.ಕೇಶವ, ಪ್ರಧಾನ ಕಾರ್ಯದರ್ಶಿ ಕೆಂಪಶೆಟ್ಟಿ, ಜಿಲ್ಲಾ ಖಜಾಂಚಿ ರವಿಚಂದ್ರ, ರಾಜ್ಯಾಧ್ಯಕ್ಷರಾದ ಮಂಜುಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಬೃಂದಾವನ ಮಹೇಶ್, ಹುಣಸೂರು ತಾಲ್ಲೂಕು ಅಧ್ಯಕ್ಷರಾದ ರವಿ ಚಿಲ್ಕುಂದ, ನಂಜನಗೂಡು ತಾಲ್ಲೂಕು ಅಧ್ಯಕ್ಷರಾದ ಪ್ರಸನ್ನ ಮತ್ತು ಚಂದ್ರು, ಮೈಸೂರು ತಾಲ್ಲೂಕು ಅಧ್ಯಕ್ಷರಾದ ಸಂತೋಷ ಕಿರಾಳು, ತಿ.ನರಸೀಪುರ ತಾಲ್ಲೂಕು ಅಧ್ಯಕ್ಷರಾದ ಕುರುಬೂರು ಮಹದೇವಸ್ವಾಮಿ, ಸಾಲಿಗ್ರಾಮ ತಾಲ್ಲೂಕು ಅಧ್ಯಕ್ಷರಾದ ಹರ್ಷವರ್ಧನ್, ಉಪಾಧ್ಯಕ್ಷರಾದ ಬಲರಾಮ್, ಖಜಾಂಚಿ ವೆಂಕಟೇಶ್, ರ‍್ಯಾಚಾ, ಕೆ.ಆರ್.ನಗರ ತಾಲ್ಲೂಕು ಅಧ್ಯಕ್ಷರಾದ ಕುಮಾರ್, ಪಿರಿಯಾಪಟ್ಟಣ ಮಡಿವಾಳ ಸಮುದಾಯದ ಮುಖಂಡರಾದ ಕೆ.ಮಹದೇವ, ಜಿಲ್ಲಾ ಸಂಚಾಲಕರಾದ ಹನಗೂಡು ಬಸವರಾಜು, ಜಿಲ್ಲಾ ಸಮಿತಿ ನಿರ್ದೇಶಕರಾದ ರಾಂಪುರ ಮಹೇಶ್, ಜಿಲ್ಲಾ ಸಂಚಾಲಕರಾದ ಕೆಂಬಾಲ್ ಶ್ರೀರಾಮ್, ಜಿಲ್ಲಾ ನಿರ್ದೇಶಕರಾದ ಹಾಡ್ಯ ಶ್ರೀನಿವಾಸ್, ನಂಜನಗೂಡು ತಾಲ್ಲೂಕು ಗೌರವ ಅಧ್ಯಕ್ಷರಾದ ಚಂದ್ರಶೇಖರ್, ಶಿವಣ್ಣ, ಮಡುವಿನಹಳ್ಳಿ ಮಹದೇವಣ್ಣ, ಪ್ರಧಾನ ಕಾರ್ಯದರ್ಶಿ ಬಸವರಾಜು, ಮುಖಂಡರಾದ ಶೇಖರ್, ಸಿದ್ದಲಿಂಗಪುರ ಮಹದೇವು, ಜಿಲ್ಲಾ ಮಹಿಳಾ ಅಧ್ಯಕ್ಷರಾದ ವಸಂತಕುಮಾರಿ, ಹೆಚ್.ಟಿ.ಕೋಟೆ ತಾಲ್ಲೂಕು ಅಧ್ಯಕ್ಷರಾದ ರಂಗಸ್ವಾಮಿ, ಜಿಲ್ಲಾ ನಿರ್ದೇಶಕರಾದ ರಮೇಶ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ, ಹುಣಸೂರು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹೊಸ ರಾಮನಹಳ್ಳಿ ರಘು, ಪತ್ರಕರ್ತರಾದ ರಾಜೇಶ್, ಮಡಿವಾಳ ಮುಖಂಡ ಚಿಕ್ಕಣ್ಣ, ಮಿರ್ಲೆ ಚಂದ್ರು, ಸತೀಶ್, ಸಾಲಿಗ್ರಾಮ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಮಡಿಕಟ್ಟೆ ಮುಖಂಡರುಗಳು ಇದ್ದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು