ಮೈಸೂರು: ಶೀಘ್ರದಲ್ಲೇ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಾದಿಗ ಸಫಾಯಿ ಕರ್ಮಾಚಾರಿ ಒಕ್ಕೂಟದಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಶುಕ್ರವಾರ ಬೆಳಗ್ಗೆ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿ.ಎಸ್.ಸುಬ್ರಹ್ಮಣ್ಯ ಅವರು ಮಾತನಾಡಿ, ಒಳಮೀಸಲಾತಿಯನ್ನು ರಾಜ್ಯ ಸರ್ಕಾರಗಳು ಜಾರಿಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಇದೇ ದಿನ ಐತಿಹಾಸಿಕ ತೀರ್ಪು ನೀಡಿದೆ. ಆದರೇ ರಾಜ್ಯ ಸರ್ಕಾರ ಕಳೆದ ಸುಮಾರು ಒಂದು ವರ್ಷಗಳ ಕಾಲಹರಣ ಮಾಡಿ ಇದೀಗ ಜಸ್ಟೀಸ್ ನಾಗಮೋಹನ್‍ದಾಸ್ ಆಯೋಗ ರಚಿಸಿ ಒಳಪಂಗಡಗಳನ್ನು ಗುರುತಿಸಲು ಮತ್ತು ದತ್ತಾಂಶ ಸಂಗ್ರಹಿಸಲು ಈಗಾಗಲೇ 3 ತಿಂಗಳು ಕಾಲವಕಾಶವನ್ನು ನೀಡಿದೆ. ಈ ವರದಿಯ ಸರ್ವೆ ಕೂಡ ಮುಕ್ತಾಯವಾಗಿದೆ ಆದರೂ ಸರ್ಕಾರ ಒಳಮೀಸಲಾತಿ ಜಾರಿಗೆ ನಿಧಾನ ಮತ್ತು ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ
ರಾಜ್ಯಾದ್ಯಂತ ಮಾದಿಗ ಸಂಘಟನೆಗಳು ಜಿಲ್ಲಾವಾರು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿರುತ್ತೇವೆ ಎಂದರು.
ಈ ಪ್ರತಿಭಟನೆಗೆ ಹಲವಾರು ಪೌರಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ಮತ್ತು ಕಾಲೋನಿಗಳ ಸಂಘ ಸಂಸ್ಥೆಗಳು, ಸಮುದಾಯದ ಹಿರಿಯರು, ಮಹಿಳೆಯರುಗಳು ಸಹಕಾರ ನೀಡಿದ್ದಾರೆ. ಸರ್ಕಾರ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡದೆ ಕೂಡಲೇ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಸಮುದಾಯದ ಮುಖಂಡರಾದ ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ನಾವು ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಬೇಡಿಕೆಗೆ ನ್ಯಾಯಾಲಯ ಸ್ಪಂದಿಸಿದೆ ಆದರೇ, ನಮ್ಮನ್ನು ಆಳುವ ನಮ್ಮ ಮತಗಳನ್ನು ಪಡೆದವರು ಇದನ್ನು ಜಾರಿ ಮಾಡಲು ಮೀನಾಮೇಷ ಏಣಿಸುತ್ತಿದ್ದಾರೆ. ಇದರಿಂದ ಮಾದಿಗ ಸಮುದಾಯದ ಮಕ್ಕಳು ಶಿಕ್ಷಣ, ಉದ್ಯೋಗದಿಂದ ವಂಚಿಸತಾಗುತ್ತಿದ್ದಾರೆ ಎಂದು ಕಿಡಿಕಾರಿದರಲ್ಲದೇ, ಈ ಕೂಡಲೇ ಸರ್ಕಾರ ಒಳಮೀಸಲಾತಿ ಜಾರಿ ಮಾಡಬೇಕು ಇಲ್ಲದಿದ್ದಲ್ಲಿ ನಮ್ಮ ಸಂಘಟನೆ ಮೂಲಕ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರಾದ ಬಿ.ಪಿ.ಮುತ್ತುರಾಜು, ಬೆಳವಾಡಿ ಮಂಜು, ಆರ್.ಸುಬ್ರಹ್ಮಣ್ಯ, ಧರ್ಮರಾಜು, ಹರ್ಷಕುಮಾರ್, ಸುರೇಂದ್ರಬಾಬು, ಧರ್ಮರಾಜು, ಎಂ.ಕೆ.ಮಹದೇವ, ಕುಮಾರಸ್ವಾಮಿ, ಸಿ.ಪಿ.ರಂಗಯ್ಯ, ಮಂಜು, ಭರತೇಶ್, ಕಿಶೋರ್, ನಾಗರಾಜು, ರಂಗಯ್ಯ ಮತ್ತಿರರು ಇದ್ದರು.
0 ಕಾಮೆಂಟ್‌ಗಳು