ವರದಿ: ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನ ಮಾಡಿದ ಮಂಡ್ಯದ ಇಬ್ಬರು ವ್ಯಕ್ತಿಗಳ ವಿರುದ್ಧ ಮೈಸೂರಿನಲ್ಲೂ ಕುರುಬರ ರಾಜ್ಯ ಸಂಘದಿಂದ ದೂರು ನೀಡಲಾಯಿತು.
ಮೈಸೂರಿನ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಮತ್ತು ಅಹಿಂದ ಒಕ್ಕೂಟಗಳ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ನೇತೃತ್ವದಲ್ಲಿ ಸಿದ್ಧಾರ್ಥನಗರದ ಕನಕಭವನದಲ್ಲಿ ಕುರುಬರ ಸಮುದಾಯದ ಸಭೆ ನಡೆಸಿದರು. ಈ ವೇಳೆ ಮಂಡ್ಯದಲ್ಲಿ ಹಾಲುಮತಸ್ಥ ಸಮುದಾಯದ ವಿರುದ್ಧ ಮಾತನಾಡಿರುವುದನ್ನು ಖಂಡಿಸಿದರು. ಸಭೆ ಬಳಿಕ ನಿಯೋಗವೊಂದು ನಗರ ಪೆÇಲೀಸ್ ಆಯುಕ್ತರ ಕಚೇರಿಗೆ ತೆರಳಿ ಅವಹೇನಕಾರಿ ಮಾತುಗಳನ್ನಾಡಿದವರ ವಿರುದ್ಧ ದೂರು ದಾಖಲಿಸಿದರು. ಬಳಿಕ ಕರ್ನಾಟಕ ರಾಜ್ಯ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ ಮಾತನಾಡಿ, ಯಾವುದೇ ಸಮುದಾಯದ ವಿರುದ್ಧ ಯಾರೇ ಮಾತನಾಡಿದರು ಅದು ತಪ್ಪು, ಅದರಲ್ಲೂ ಹಾಲು ಮತಸ್ಥ ಸಮುದಾಯದ ಬಗ್ಗೆ ಮಾತನಾಡುವುದು ಅಕ್ಷಮ್ಯ ಅಪರಾಧವಾಗಿದೆ. ಏ.8 ರಂದು ಮಾತನಾಡಿರುವ ದುಷ್ಕರ್ಮಿಗಳ ವಿರುದ್ಧ ಇದುವರೆವಿಗೂ ಯಾವುದೇ ಕಾನೂನು ಕ್ರಮ ಆಗಿಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಆ.12 ರಂದು ಮದ್ದೂರು ತಾಲ್ಲೂಕಿನ ಬಸರಾಳು ಗ್ರಾಮ ಬಂದ್‍ಗೆ ಕರೆ ನೀಡಿದ್ದೇವೆ. ಅದಾಗಿಯೂ ಅವಹೇಳನಕಾರಿ ಹೇಳಿಕೆ ನೀಡಿದವರನ್ನು ಬಂಧಿಸಿ, ಗಡಿಪಾರು ಮಾಡದಿದ್ದರೆ ಅವರ ವಿರುದ್ಧ ರಾಜ್ಯ ಬಂದ್‍ಗೂ ಕರೆ ನೀಡಲು ತಯಾರಿ ಮಾಡುವುದಾಗಿ ಇದೇ ವೇಳೆ ಎಚ್ಚರಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನುದಾನ ತಾರತಮ್ಯದ ವಿರುದ್ಧ ಮುಕ್ತವಾಗಿ ಅಂಕಿ ಅಂಶಗಳ ಮೂಲಕ ಮಾತನಾಡುವ ಎಕೈಕ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಆಗಿದ್ದಾರೆ. ಹೀಗಾಗಿ ಅಂತಹ ಸಿದ್ದರಾಮಯ್ಯರನ್ನು ಗುರಿಯಾಗಿಸಿಕೊಂಡು ಮಾತನಾಡುವವರ ವಿರುದ್ಧ ಷಡ್ಯಂತ್ರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ಗೋಪಿ, ವರುಣ ಸುರೇಶ್, ಕೋಟೆ ಆನಂದ್, ನಾಡನಹಳ್ಳಿ ರವಿ, ಶೋಭಾ, ವಕೀಲ ಪುಟ್ಟಸಿದ್ದೇಗೌಡ, ಜಯಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯ ಗಡ್ಡ ಕೃಷ್ಣಮೂರ್ತಿ, ಚಾಮರಾಜನಗರ ನಗರ ಜಿಲ್ಲಾಧ್ಯಕ್ಷ ನಂಜೇಗೌಡ, ವಿವಿಧ ತಾಲ್ಲೂಕು ಅಧ್ಯಕ್ಷರಾದ ಬಸವರಾಜು, ಆನಂದ್, ಕೆಂಪಣ್ಣ, ಅಭಿ, ರವಿ, ಅಪ್ಪುಗೌಡ, ಕೃಷ್ಣ, ಧರ್ಮೇಂದ್ರ, ಡಿ.ಹುಚ್ಚೇಗೌಡ, ಎಚ್.ಕೆ.ಗೋಪಾಲ್, ಹಿನಕಲ್ ಉದಯ್, ಮಹೇಶ್, ಕಾಡನಹಳ್ಳಿ ಸ್ವಾಮಿಗೌಡ, ಅಭಿ ಇನ್ನಿತರರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಾಡು ಕಂಡ ಅಪರೂಪದ ಜನಾನುರಾಗಿ ನಾಯಕರು, ಎರಡು ಬಾರಿ ಮುಖ್ಯಮಂತ್ರಿಯಾಗಿ ಪಂಚ ಗ್ಯಾರೆಂಟಿ ಯೋಜನೆ ಜತೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಈ ರಾಜ್ಯಕ್ಕೆ ನೀಡಿದ್ದಾರೆ. ಅವರ ವಿರುದ್ಧ ಮಾತನಾಡಿರುವ ಕಿಡಿಗೇಡಿಗಳ ಕುಟುಂಬದವರೂ ಕಾಂಗ್ರೆಸ್ ಸರ್ಕಾರದ ಫಲಾನುಭವಿಗಳು, ಇದೀಗ ಕಿಡಿಗೇಡಿಗಳ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು, ಜಾತಿ ಜಾತಿಗಳ ನಡುವೆ ವಿಷ ಬಿತ್ತುತ್ತಿರುವ ಇವರನ್ನು ಗಡಿಪಾರು ಮಾಡಬೇಕು. 12ಕ್ಕೆ ಬಸರಾಜು ಬಂದ್ ಮಾಡುತ್ತೇವೆ. ಬಂಧನವಾಗದಿದ್ದಲ್ಲಿ ಕರ್ನಾಟಕ ಬಂದ್‍ಗೂ ಕರೆ ನೀಡುತ್ತೇವೆ.
• ಬಿ.ಸುಬ್ರಹ್ಮಣ್ಯ,
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷರು ಮತ್ತು ಅಹಿಂದ ಒಕ್ಕೂಟಗಳ ಅಧ್ಯಕ್ಷರು.
0 ಕಾಮೆಂಟ್‌ಗಳು