ಕಾಂಗ್ರೆಸ್ ಪಕ್ಷದ ಮೈಸೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾದ ಎಂ.ರಸೂಲ್ ಅವರಿಂದ ನರಸಿಂಹರಾಜ, ಚಾಮರಾಜ ಕ್ಷೇತ್ರಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ವಿಭಾಗಕ್ಕೆ ನೇಮಕಾತಿ


 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಅನುಕೂಲವಾಗುವಂತೆ ಮೈಸೂರು ನಗರ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಬೀದಿ ಬದಿ ವ್ಯಾಪಾರಿಗಳ ವಿಭಾಗದಿಂದ ನಗರದ ನರಸಿಂಹರಾಜ ಮತ್ತು ಚಾಮರಾಜ ಕ್ಷೇತ್ರಗಳಲ್ಲಿ ವಿವಿಧ ನೇಮಕಾತಿಗಳನ್ನು ಸಮಿತಿಯ ಜಿಲ್ಲಾ ಅಧ್ಯಕ್ಷ ಎಂ.ರಸೂಲ್ ಘೋಷಿಸಿದರು.

ಮಹಮ್ಮದ್ ಷರೀಫ್, ಕೆ.ಬಿ., ಅವರನ್ನು ವಾರ್ಡ್ ನಂ.10ರ ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರನ್ನಾಗಿ, ಮಹಮ್ಮದ್ ಜಾಫರ್(ಪ್ರಧಾನ ಕಾರ್ಯದರ್ಶಿ), ನಹೀದುಲ್ಲಾ ಷರೀಫ್ ಮತ್ತು ನಯಾಜ್ ಅಹಮದ್ ಅವರುಗಳನ್ನು ಕಾರ್ಯದರ್ಶಿಯನ್ನಾಗಿ ನೇಮಿಸಿ ಕ್ರಮವಾಗಿ ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರಗಳಿಗೆ ನೇಮಕ ಮಾಡಿ ಸ್ಥಳದಲ್ಲಿಯೇ ನೇಮಕಾತಿ ಪತ್ರಗಳನ್ನು ವಿತರಿಸಿಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ಜಿಲ್ಲಾ ಸಮಿತಿ ಅಧ್ಯಕ್ಷರಾದ ಎಂ.ರಸೂಲ್ ಮಾತನಾಡಿ, ಮುಂಬರುವ ಪಾಲಿಕೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾವು ಪಕ್ಷವನ್ನು ಬಲವಾಗಿ ಸಂಘಟನೆ ಮಾಡುತ್ತಿದ್ದೇವೆ. ಶಾಸಕರಾದ ತನ್ವೀರ್ ಸೇಠ್ ಮತ್ತು ಕೆ,.ಹರೀಶ್‍ಗೌಡ ಅವರ ಶಿಫಾರಸ್ಸಿನ ಅನ್ವಯ, ಮತ್ತು ಕಾಂಗ್ರೆಸ್ ಪಕ್ಷದ ಬೀದಿ ಬದಿ ವ್ಯಾಪಾರಿಗಳ ರಾಜ್ಯ ಸಮಿತಿ ಅಧ್ಯಕ್ಷರಾದ ರಂಗಸ್ವಾಮಿ ಅವರ ಅನುಮೋದನೆ ಮೇರೆಗೆ ಈ ನೇಮಕಾತಿ ಮಾಡಲಾಗಿದೆ ಎಂದರು.

ದೇಶದಲ್ಲಿ ಒಟ್ಟು 7.5 ಕೋಟಿ ಜನ ಬೀದಿ ಬದಿ ವ್ಯಾಪಾರಿಗಳು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ. ಇಡೀ ಕಾಂಗ್ರೆಸ್ ಪಕ್ಷ ಬೀದಿ ಬದಿ ವ್ಯಾಪಾರಿಗಳ ಜತೆಗಿದೆ, ಮೈಸೂರಿನಲ್ಲೂ 2829 ಬೀದಿ ಬದಿ ವ್ಯಾಪಾರಿಗಳು ನಮ್ಮ ಪಕ್ಷದ ಜತೆಗಿದ್ದು, ನಾವು ಅವರಿಗೆ ಕಾರ್ಪೋರೇಷನ್ ಜತೆ ಲಿಂಕ್ ಮಾಡಿಸಿ ವ್ಯಾಪಾರ ನಡೆಸಲು ಲೈಸೆನ್ಸ್ ಕೊಡಿಸಿದ್ದೇವೆ. ಇನ್ನೂ ಹೆಚ್ಚಿನ ಜನರಿಗೆ ಅಗತ್ಯ ಅನುಕೂಲ ಮಾಡಿಕೊಡಲು ನಮ್ಮ ತಂಡ ಸದಾ ಸಿದ್ದವಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಭಾರಿ ಗಾತ್ರದ ಸೇಬಿನ ಹಾರ ಹಾಕುವ ಮೂಲಕ ಎಂ.ರಸೂಲ್ ಅವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸೈಯದ್ ಫಾರೂಖ್, ಮಜರ್ ಪಾಷ, ನಿಜಾಮುದ್ದೀನ್, ಮೊಹಮ್ಮದ್ ಸಿದ್ದೀಖ್, ಸಾದೀಖ್, ಇಬ್ರಾಹೀಂ, ಮೊಹಮ್ಮದ್ ಜಾಫರ್, ನಯಾಜ್ ಖಾನ್, ಟೀಪೂ, ಅಜ್ಮಲ್ ಮುಂತಾದವರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು