ಸರ್ಕಾರದ ವಿರುದ್ಧ ನಿರಂತರ ಹೋರಾಟ: ಎಸ್‍ಡಿಪಿಐ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಣಯ


 ಮೈಸೂರು : ಮಂಗಳವಾರ ರಾತ್ರಿ ಮುಕ್ತಾಯಗೊಂಡ ಎಸ್‍ಡಿಪಿಐ ಕರ್ನಾಟಕ ಎರಡು ದಿನಗಳ ರಾಜ್ಯ ಪ್ರತಿನಿಧಿ ಸಭೆಯಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಾತಿ ಗಣತಿ ವರದಿಯ ಬಿಡುಗಡೆ, ಒಳ ಮೀಸಲಾತಿ ಜಾರಿ ಮತ್ತು ಮುಸ್ಲೀಮರ ಮೀಸಲಾತಿ ಹೆಚ್ಚಳ ಕುರಿತಂತೆ ನಿರಂತರ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಮಾಡಲಾಯಿತು.

ರಾಷ್ಟ್ರೀಯ ಮುಖಂಡರಾದ ಬಿ.ಎಂ.ಕಾಂಬ್ಳೆ, ಅಬ್ದುಲ್ ಮಜೀದ್ ಫೈಜಿ, ಮೊಹಮ್ಮದ್ ಅಶ್ರಫ್, ಇಲ್ಯಾಸ್ ತುಂಬೆ, ಅಲ್ಫಾನ್ಸ್ ಫ್ರಾಂಕೊ, ಡಾ. ಮೆಹಬೂಬ್ ಶರೀಫ್ ಮತ್ತು  

ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು :

1. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜನದ್ರೋಹಿ ನಡವಳಿಕೆಗಳಾದ ಒಳ ಮೀಸಲಾತಿ, ನಿರಾಕರಣೆ ಮೀಸಲಾತಿ ಪ್ರಮಾಣ ಹೆಚ್ಚಳದ ನಿರಾಕರಣೆ, ಜಾತಿ ಜನಗಣತಿ ಬಿಡುಗಡೆಗೆ ನಿರಾಕರಣೆ ಕುರಿತಂತೆ ರಾಜ್ಯ ವ್ಯಾಪಿ ಜನ ಚಳುವಳಿಗಳನ್ನು ನ್ಯಾಯ ಸಿಗುವವರೆಗೂ ಕಾಯ್ದುಕೊಳ್ಳುವುದು ಎಂದು ಸಭೆ ತೀರ್ಮಾನಿಸಿದೆ. 

2. ರಾಜ್ಯದ ಶೋಷಿತ ಸಮುದಾಯಗಳಿಗೆ ಸಂವಿಧಾನ ಬದ್ಧ ಹಕ್ಕುಗಳನ್ನು ದೊರಕಿಸುವುದಕ್ಕಾಗಿ ಶಾಸನ ಸಭೆಗೆ ಪ್ರವೇಶಿಸಲೇಬೇಕಾದ ಅನಿವಾರ್ಯತೆಗೆ ಶಾಸನಸಭೆ ಪ್ರವೇಶಿಸಲು ನಿರಂತರವಾದ ಹೋರಾಟ ಜನಜಾಗ್ರತಿ ರಾಜಕೀಯ ಚಳುವಳಿಗಳು ಮತ್ತು ಕಾರ್ಯತಂತ್ರಗಳನ್ನು ರೂಪಿಸುವುದು.

3.ಬಿಜೆಪಿ ಕಾಲದ ಎಲ್ಲಾ ಹಗರಣಗಳು ವಿಶೇಷವಾಗಿ ಕೋವಿಡ್ ಹಗರಣಗಳಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ರಾಜ್ಯ  ಸರ್ಕಾರವು ಕೇವಲ ಬಾಯಿಮಾತಿನ ಹೇಳಿಕೆಗಳು ಮತ್ತು ಕ್ರಮಗಳಿಗೆ ಮಾತ್ರ ಸೀಮಿತವಾಗಿದೆ. ದುರಿತ ಕಾಲದಲ್ಲೂ ಭ್ರಷ್ಟಾಚಾರದ ಮೂಲಕ ರಾಜ್ಯದ ಖಜಾನೆ ಕೊಳ್ಳೆ ಹೊಡೆದ ಬಿಜೆಪಿಯ ವಿರುದ್ಧ

ದಿಟ್ಟ ಮತ್ತು ಕಠಿಣ ಕಾನೂನು ಕ್ರಮಗಳನ್ನು ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ 

4 ದ್ವೇಷ ಭಾಷಣಕಾರರ ವಿರುದ್ಧ ಮತ್ತು ಸಮಾಜಕ್ಕೆ ತಪ್ಪು ಸಂದೇಶಗಳನ್ನು ನೀಡುವುದರ ಮೂಲಕ ಅಶಾಂತಿ ಹರಡುತ್ತಿರುವ ಕೆಲವು ಮಾಧ್ಯಮಗಳ ವಿರುದ್ಧ ಸರ್ಕಾರ ನಿಗಾ ಇಡಬೇಕು. ಅಗತ್ಯ ಬಿದ್ದಲ್ಲಿ ಇಂತಹ ಸಮಾಜ ವಿರೋಧಿ ವ್ಯಕ್ತಿ ಗಳು ಮತ್ತು ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಬಾರದು ಎಂದು ಸರ್ಕಾರವನ್ನು ಸಭೆ  ಒತ್ತಾಯಿಸುತ್ತದೆ. 

5. ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಹಿಂಪಡೆಯಬೇಕು, ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸಬೇಕು, ಮತ್ತು ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯಬೇಕು. 

6. ವಕ್ಫ್ ಮಂಡಳಿಯ ಸ್ವಾಯತ್ತತೆ ಗೆ ಧಕ್ಕೆ ಉಂಟು ಮಾಡುವ ಕೋಮುವಾದಿ ಶಕ್ತಿಗಳ ಯಾವುದೇ  ಷಡ್ಯಂತ್ರಗಳಿಗೆ ರಾಜ್ಯ ಸರ್ಕಾರವು ಮಣಿಯಬಾರದು.

7.ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮಾದರಿಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸುವಂತೆ ಸಭೆ  ಒತ್ತಾಯಿಸಿದೆ 

8. ಕರಾವಳಿ ಕರ್ನಾಟಕದಲ್ಲಿ ನಿರುದ್ಯೋಗ ಕೊನೆಗೊಳಿಸಿ ಸ್ಥಳೀಯ ಯುವಕರಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಹಾಗೂ ಇನ್ನಿತರ ಅವಕಾಶ ಇರುವಂತಹ ವಲಯಗಳಿಗೆ ಪ್ರಾಧಾನ್ಯತೆ ನೀಡಿ ವಿಶೇಷ ಯೋಜನೆಯನ್ನು ರೂಪಿಸುವುದು, ಇದಕ್ಕಾಕಿ ಮುಂದಿನ ಬಜೆಟ್ನಲ್ಲಿ ಕನಿಷ್ಠ ಮೂರು  ಸಾವಿರ ಕೋಟಿ ರೂಪಾಯಿ ಮೀಸಲಿಡುವುದು  ಸರ್ಕಾರವನ್ನು ಒತ್ತಾಯಿಸುತ್ತದೆ

9. ಮಂಗಳೂರು ಬಾಗಲಕೋಟೆ, ಉತ್ತರ ಕನ್ನಡ ಇತ್ಯಾದಿ ಜಿಲ್ಲೆಗಳಲ್ಲಿ ಸರಕಾರಿ  ಮೆಡಿಕಲ್ ಕಾಲೇಜು ಮತ್ತು ಸರಕಾರಿ ಸ್ಪೆಷಾಲಿಟಿ  ಆಸ್ಪತ್ರೆಗಳನ್ನು ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸುದಾಗಿ  ಎಸ್‍ಡಿಪಿಐ ಆರನೇ ರಾಜ್ಯ ಪ್ರತಿನಿಧಿ ಸಭೆಯು ನಿರ್ಣಯ ಕೈ ಗೊಂಡಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು