ಮೈಸೂರು : ಎಸ್‍ಡಿಪಿಐ ರಾಜ್ಯಾಧ್ಯಕ್ಷರಾಗಿ 2ನೇ ಬಾರಿಗೆ ಅಬ್ದುಲ್ ಮಜೀದ್ ಆಯ್ಕೆಯಾಗಿದ್ದಾರೆ.
ನಗರದಲ್ಲಿ ನಡೆದ ಎರಡು ದಿನಗಳ ರಾಜ್ಯ ಪ್ರತಿನಿಧಿ ಸಭೆಯಲ್ಲಿ 2024-27ನೇ ಸಾಲಿನ ನೂತನ ಸಮಿತಿ ಮತ್ತು ಪದಾಧಿಕಾರಿಗಳನ್ನು ಆಯ್ಕೆಯಲ್ಲಿ ನೂತನ ರಾಜ್ಯ ಸಮಿತಿ ಘೋಷಣೆ ಮಾಡಲಾಯಿತು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫೈಝಿ, ನೂತನ ರಾಜ್ಯ ಸಮಿತಿಯನ್ನು ಮತ್ತು ಮೊಹಮ್ಮದ್ ಅಶ್ರಫ್ ಅವರು ನೂತನ ಪದಾಧಿಕಾರಿಗಳನ್ನು ಘೋಷಿಸಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಅಬ್ದುಲ್ ಹನ್ನಾನ್, ದೇವನೂರ ಪುಟ್ಟನಂಜಯ್ಯ, ಶಾಹಿದಾ ತಸ್ನೀಮ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಮುಜಾಹಿದ್ ಪಾಷ, ಇಬ್ರಾಹಿಂ ಮಜೀದ್ ತುಂಬೆ, ಬಿ.ಆರ್, ಭಾಸ್ಕರ್ ಪ್ರಸಾದ್, ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿಗಳಾಗಿ ಅಫ್ಸರ್ ಕೆ.ಆರ್.ನಗರ, ಅಂಗಡಿ ಚಂದ್ರು, ಮೌಲಾನ ಅಕ್ರಮ್, ರಂಜಾನ್ ಕಡಿವಾಳ್, ರಿಯಾಝ್ ಕಡಂಬು ಮತ್ತು ರಾಜ್ಯ ಕೋಶಾಧಿಕಾರಿಯಾಗಿ ಮೈಸೂರಿನ ಅಮ್ಜದ್ ಖಾನ್ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಇತರ 17 ಮಂದಿಯನ್ನು ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ರಾಜ್ಯ ಸಮಿತಿ ಘೋಷಣೆಯ ನಂತರ ರಾಷ್ಟ್ರೀಯ ಪ್ರತಿನಿಧಿ ಸಭೆಗೆ ಭಾಗವಹಿಸಬೇಕಾದ 11 ಮಂದಿ ಕೌನ್ಸಿಲರ್‍ಗಳನ್ನು ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಘೋಷಣೆ ಮಾಡಿದರು.
ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಂ. ಕಾಂಬ್ಳೆ, ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ, ರಾಷ್ಟೀಯ ಕಾರ್ಯದರ್ಶಿ ಅಲ್ಫಾನ್ಸ್ ಫ್ರಾಂಕೊ, ರಾಷ್ಟೀಯ ಸಮಿತಿ ಸದಸ್ಯ ಡಾ. ಮೆಹಬೂಬ್ ಶರೀಫ್ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು