ನಂದಗೋಕುಲ ಗೃಹ ನಿರ್ಮಾಣ ಸಂಘದಿಂದ ಮೈಸೂರಿನಲ್ಲಿ ಕಡಿಮೆ ಬೆಲೆಗೆ ನಿವೇಶನ

ಮೈಸೂರು : ಉದ್ದೇಶಿತ ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘದಿಂದ ಷೇರುದಾರರಿಗೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಕಂತುಗಳ ಮುಖಾಂತರ ನಿವೇಶನಗಳನ್ನು ನೀಡುವ ಉದ್ಧೇಶ ಹೊಂದಿದ್ದು, ಸಾರ್ವಜನಿಕರು 

ಹೆಚ್ಚಿನ ಸಂಖ್ಯೆಯಲ್ಲಿ ಷೇರುಗಳನ್ನು ಪಡೆಯಬೇಕೆಂದು ಸಹಕಾರ ಸಂಘದ ಸಂಸ್ಥಾಪಕರಾದ, ನಟ, ನಿರ್ಮಾಪಕ, ನಿರ್ದೇಶಕ ಶಿವಾಜಿ ಕೋರಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಲಕ್ಷಾಂತರ ಜನರು ಇಂದಿಗೂ ಸ್ವಂತ ನಿವೇಶನ ಹೊಂದಿಲ್ಲ. ಜತೆಗೆ ಸಾವಿರಾರು ಜನರು ತಮ್ಮ ಕನಸಿನ ಮನೆಯನ್ನು

ಕಟ್ಟಬೇಕೆಂಬ ಸಂಕಲ್ಪ ಮಾಡಿರುತ್ತಾರೆ. ಇಂತಹವರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೌಲಭ್ಯಗಳುಳ್ಳ ನಿವೇಶನಗಳನ್ನು ನೀಡುವುದು ನಮ್ಮ ಸಹಕಾರ ಸಂಘದ ಉದ್ಧೇಶವಾಗಿರುತ್ತದೆ ಎಂದರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ನಿವೇಶನ ಕೊಳ್ಳುವುದು ಸಾಧ್ಯವಾಗುತ್ತಿಲ್ಲ.

1200 ಚದರ ಅಡಿ ನಿವೇಶನದ ಬೆಲೆ 60 ಲಕ್ಷದಿಂದ ಒಂದು ಕೋಟಿ ರೂಪಾಯಿ ದಾಟಿದೆ. ಜತೆಗೆ ಮೈಸೂರಿನಲ್ಲಿ ಕೆಲವು ಗೃಹ ನಿರ್ಮಾಣ ಸಹಕಾರ ಸಂಘಗಳು ವಿವಿಧ ಕಾರಣಗಳಿಂದ ತಮ್ಮ ಸದಸ್ಯರುಗಳಿಗೆ ನಿವೇಶನಗಳನ್ನು ಹಂಚಲು ವಿಫಲರಾಗಿರುತ್ತಾರೆ. ಜತೆಗೆ ಅನೇಕ ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿಗಳನ್ನು ಹಾಕಿ ಹಲವಾರು ಕಂತುಗಳನ್ನು ಕಟ್ಟಿದವರಿಗೂ ಇನ್ನೂ ನಿವೇಶನಗಳು ಸಿಕ್ಕಿಲ್ಲ. ಈ ಎಲ್ಲ ವಿಷಯಗಳನ್ನು ಗಮನಿಸಿ ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘದ ಪ್ರವರ್ತಕರು ತಮ್ಮ ಷೇರುದಾರರಿಗೆ ಸಂಸ್ಥೆ ನೋಂದಣಿ ಆದ ತಕ್ಷಣ ನಿವೇಶನಗಳನ್ನು ಕೊಡಲು ಸಿದ್ದವಾಗಿದೆ. ಈಗಾಗಲೇ ಮೈಸೂರು ನಗರ ಬಸ್ ನಿಲ್ದಾಣದಿಂದ 14 ಕಿ.ಮೀ ಅಂತರದಲ್ಲಿರುವ ಬನ್ನೂರು ರಸ್ತೆಗೆ

ಹೊಂದಿಕೊಂಡಿರುವ ಸುಗ್ಗನಹಳ್ಳಿ ಗ್ರಾಮದಲ್ಲಿ ಶಾಲಾ, ಕಾಲೇಜುಗಳು, ಮತ್ತು ಆಸ್ಪತ್ರೆಗಳು, ಸಿಟಿ ಬಸ್

ಸೌಲಭ್ಯಗಳ ಅನುಕೂಲವಿರುವ ಜಮೀನು ಕ್ರಯಕ್ಕೆ ಪಡೆಯಲು ಮುಂದಾಗಿದೆ. ಇದರಲ್ಲಿ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ನಿವೇಶನ ನೀಡುವುದಾಗಿ ಹೇಳಿದರು.

ಅಲ್ಲದೇ, ಮುಡಾ ವ್ಯಾಪ್ತಿಯಲ್ಲಿನ ಹಂಚ್ಯಾ ಗ್ರಾಮಕ್ಕೆ ಸೇರಿರುವ ಜ್ಞಾನ ಸರೋವರ ಶಾಲೆಯ ಹಿಂಭಾಗದಲ್ಲಿಯೂ 10 ಎಕರೆ ಜಮೀನಿನಲ್ಲಿ ಬಡಾವಣೆಯನ್ನು ರಚಿಸಲು ಚಿಂತಿಸುತ್ತಿದ್ದೇವೆ.

ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉದ್ದೇಶಿತ ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘದ ಮುಖ್ಯ ಪ್ರವರ್ತಕರಾದ ಎಸ್.ಮಹೇಶ್, 

ಪ್ರವರ್ತಕರುಗಳಾದ ಎಂ.ಬಿ. ಬಸವರಾಜು, ಕೆ.ಎ.ಸತೀಶ್, ಹರೀಶ ಎ, ಲೋಕೇಶ್ ಎಸ್., ಇದ್ದರು.

‘ಚಿತ್ರ ನಗರಿ ಬಡಾವಣೆ’ 

ಉದ್ದೇಶಿತ ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿಈಗಾಲೇ ಚಲನ ಚಿತ್ರ ನಟರು, ನಿರ್ದೇಶಕರು, ತಂತ್ರಜ್ಞರು ಷೇರುದಾರರಾಗಿದ್ದಾರೆ. ಅವರುಗಳ ಪೈಕಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ

ಸಾ.ರಾ. ಗೋವಿಂದ, ಕನ್ನಡ ಪರ ಹೋರಾಟಗಾರರು ಮತ್ತು ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷರಾದ ಪ್ರವೀಣ್ ರಂಗನಾಥ್, ಕರ್ನಾಟಕ ಚಲನ ಚಿತ್ರ ಮಂಡಳಿಯ ಖಜಾಂಚಿಗಳಾದ ಜಯಸಿಂಹ ಮುಸುರಿ ಕೃಷ್ಣಮೂರ್ತಿ, ಖ್ಯಾತ ನಿರ್ದೇಶಕರಾದ ಓಂಪ್ರಕಾಶ್ ಅವರು ಪ್ರಮುಖರು. ಹೆಚ್ಚಾಗಿ ಚಲನಚಿತ್ರ ನಟ ನಟಿಯರು ಷೇರುದಾರರಾಗಿರುವ ಕಾರಣ ಮೊದಲ ಬಡಾವಣೆಗೆ ‘ಚಿತ್ರನಗರಿ’ ಎಂದು ಹೆಸರಿಡಲಾಗಿದೆ.

ನಿವೇಶನಗಳ ಬೆಲೆ

ಪ್ರಮುಖವಾಗಿ ಮಧ್ಯಮವರ್ಗದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನ ಒದಗಿಸುವ ಉದ್ಧೇಶ ಹೊಂದಿರುವುದರಿಂದ 50 ಎಕರೆ ಸುಗ್ಗನಹಳ್ಳಿ ಜಮೀನಿನಲ್ಲಿ ನಿರ್ಮಾಣ ಮಾಡುತ್ತಿರುವ ``ಚಿತ್ರ ನಗರಿ'' ಬಡಾವಣೆಯಲ್ಲಿ ಸದಸ್ಯರುಗಳಿಗೆ ಕಾನೂನಿನ ಚೌಕಟ್ಟಿನೊಳಗೆ 600 ಚದರ ಅಡಿ ಅಳತೆಯ ನಿವೇಶನ ರೂ.5 ಲಕ್ಷಕ್ಕೆ, 1200 ಚದರ ಅಡಿ ನಿವೇಶನ ರೂ.10 ಲಕ್ಷಕ್ಕೆ, 2400 ಚದರ ಅಡಿ ಅಳತೆಯ

ನಿವೇಶನ 20 ರೂ.ಲಕ್ಷಕ್ಕೆ ಕಂತಿನ ಮುಖಾಂತರ ನೀಡಲು ಉದ್ದೇಶಿಸಲಾಗಿದೆ.

ಎಲ್ಲಿ ಸಂಪರ್ಕಿಸಬೇಕು

ಆಸಕ್ತರು ಕಚೇರಿ ನಂ,1784, 2ನೇ ಮಹಡಿ, ಶಿವಾಜಿ ಟವರ್, ಕಬೀರ್ ರಸ್ತೆ, ಮಂಡಿ ಮೊಹಲ್ಲಾ ಮೈಸೂರು ಇಲ್ಲಿ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ-7259351111, 9739739732 ಸಂಪರ್ಕಿಸಬಹುದು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು