ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹುಟ್ಟು ಹಬ್ಬದ ಪ್ರಯುಕ್ತ ಸಮಾಜ ಸೇವಕ ಲಯನ್ ಸುರೇಶ್ ಗೋಲ್ಡ್ ನೇತೃತ್ವದಲ್ಲಿ ಅನ್ನಸಂತರ್ಪಣೆ
ಜುಲೈ 11, 2024
ಮೈಸೂರು : ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಸಮಾಜ ಸೇವಕ ಲಯನ್ ಸುರೇಶ್ ಗೋಲ್ಡ್ ನೇತೃತ್ವದಲ್ಲಿ ನಗರದ ಚಲುವಾಂಬ ಆಸ್ಪತ್ರೆ ಎದುರು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗುರುವಾರ ಮದ್ಯಾಹ್ನ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅವರು ಊಟ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ನನ್ನ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು, ಹಿತೈಷಿಗಳು ಚಲುವಾಂಬ ಆಸ್ಪತ್ರೆ ಎದುರು ಅನ್ನ ಸಂತರ್ಪಣೆ ಏರ್ಪಡಿಸುವ ಮೂಲಕ ಒಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ನನಗೆ ಅತ್ಯಂತ ಸಂತಸ ಮತ್ತು ಹೆಮ್ಮೆ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಮಾವುತ ಕನ್ನಡ ಚಲನಚಿತ್ರದ ನಿರ್ಮಾಪಕರಾದ ಲಯನ್ ಸುರೇಶ್ ಗೋಲ್ಡ್ ಮಾತನಾಡಿ ಸಿ.ಎನ್.ಮಂಜೇಗೌಡ ಅವರು ನಿವೃತ್ತ ಸೈನಿಕರೂ ಆಗಿದ್ದು, ನಮ್ಮ ಹೆಮ್ಮೆಯ ನಾಯಕರಾಗಿದ್ದಾರೆ. ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಾವು ಮಾವುತ ಚಿತ್ರತಂಡ ಹಾಗೂ ಕರ್ನಾಟಕ ಚಾಲಕರ ಒಕ್ಕೂಟದ ಸಹಯೋಗದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಲಕ್ಷ್ಮಿಪತಿ ಬಾಲಾಜಿ, ರಾಮನಾಥಪುರ ಲೋಕೇಶ್, ಲಯನ್ ಪ್ರಮೀಳ, ಮಂಜುನಾಥ್, ಪೂರ್ಣಚಂದ್ರ, ಭೀಮರಾಜ್, ಕರ್ನಾಟಕ ಚಾಲಕರ ಒಕ್ಕೂಟದ ಮೈಸೂರು ಜಿಲ್ಲಾ ಅಧ್ಯಕ್ಷ ಮುರುಗನ್, ಶಿವಕುಮಾರ, ವಿನಾಯಕ, ಸತ್ಯನಾರಾಯಣಸಿಂಗ್, ಸುರೇಶ್ ಇದ್ದರು.
0 ಕಾಮೆಂಟ್‌ಗಳು