ಮೈಸೂರು: ನಗರದ 37ನೇ ವಾರ್ಡ್'ನಲ್ಲಿ ಪಿ.ರಾಜೇಶ್ವರಿ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ 2023-2024ನೇ ಸಾಲಿನಲ್ಲಿ ತೇರ್ಗಡೆಯಾದ ಪ್ರತಿಭಾ ಪುರಸ್ಕಾರ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಉದ್ಘಾಟಿಸಿದರು.
ರಾಘವೇಂದ್ರ ನಗರದ ರಾಘವೇಂದ್ರ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಗೌರವಿಸಿ ಶಾಸಕ ತನ್ವೀರ್ ಸೇಠ್ ಮಾತನಾಡಿ, ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವ ಮೂಲಕ ಅವರಲ್ಲಿನ ಪ್ರತಿಭೆ ಮತ್ತಷ್ಟು ಹೊರಹೊಮ್ಮಲು ಉತ್ತೇಜನ ನೀಡಿದಂತಾಗುತ್ತದೆ. ಮಕ್ಕಳು ಅತ್ಯುತ್ತಮವಾಗಿ ತಮ್ಮ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು. ಈ ಮೂಲಕ ನಮ್ಮ ನಾಡು, ನೀವು ಓದಿದ ಶಾಲೆ, ನಿಮ್ಮ ಶಿಕ್ಷಕರು ಹಾಗೂ ಪೋಷಕರಿಗೆ ಗೌರವ ತರಬೇಕು. ಇಂತಹ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗೌರವಸಿದರಾಜೇಶ್ವರಿ ಅವರು ಅಭಿನಂದನಾರ್ಹರು ಎಂದರು.
ಇದೇ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಯಿತು. ಜತೆಗೆ ಹಲವಾರು ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು.
ಸಾಹುಕಾರ್ ಚನ್ನಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಎನ್.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂವಾರಿಯಾದ ಪಿ.ರಾಜೇಶ್ವರಿ, ಡಾ.ಪರಮೇಶ್, ನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಡಿ.ಗೋಪಾಲ್, ಪಿ.ದೇವರಾಜ್, ರಘುರಾಜೇಅರಸ್, ಕಾಂಗ್ರೆಸ್ ಮುಖಂಡರಾದ ಎಚ್.ಶಶಿಕುಮಾರ್, ಹರೀಶ್ ನಂಜಯ್ಯ, ವಿದ್ವಾನ್ ಗಣೇಶ್, ತಹಶಿಲ್ದಾರ್ ರುಕಿಯಾ ಬೇಗಂ, ಶ್ರೀನಿವಾಸ್(ಶ್ರೀ), ಪರಮೇಶ್, ಜಯಲಕ್ಷ್ಮಿ, ಲೀಲಾವತಿ, ಯಶೋಧ ಹಾಗೂ 37ನೇ ವಾರ್ಡ್ ವಿದ್ಯಾನಗರ, ರಾಘವೇಂದ್ರ ಬಡಾವಣೆ, ಪಾಳ್ಯಾ, ಸಿದ್ಧಾರ್ಥನಗರದ ಮುಖಂಡರುಗಳು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು,
0 ಕಾಮೆಂಟ್‌ಗಳು