ಬಡ ಮಕ್ಕಳ ಶಿಕ್ಷಣಕ್ಕೆ ಎಲ್ಲ ರೀತಿಯ ನೆರವು : ಹರೀಶ್‌ಗೌಡ
ಮೈಸೂರು : ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ಸರ್ಕಾರ ಒಂದು ವರ್ಷ ಪೂರೈಸಿದ ಕಾರಣ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗ ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಜರ್‌ಬಾದ್ ಬಡಾವಣೆಯ ರೇಡಿಯೋ ಪಾರ್ಕಿನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಶ್ರೀಪಾಲ್ ಮತ್ತು ಗೆಳೆಯರ ನೇತೃತ್ವದಲ್ಲಿ ಏರ್ಪಡಿಸಿದ್ದ ಅಭಿವೃದ್ಧಿಯ ಯಶಸ್ವಿ ಮಿಲನ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಮನುಷ್ಯನ ಸಾಮಾಜಿಕ, ನೈತಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸುಧಾರಣೆಗೆ ಶಿಕ್ಷಣ ಅತ್ಯಗತ್ಯವಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಬಡ ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಯಾವುದೇ ಸಂಕೋಚವಿಲ್ಲದೇ ನನ್ನನ್ನು ಸಂಪರ್ಕಿಸಿ. ನನ್ನ ಕ್ಷೇತ್ರದಲ್ಲಿ ಶಾಶ್ವತವಾಗಿ ಉಳಿಯುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಾನು ಇಚ್ಚಿಸಿದ್ದೇನೆಂದು ಹರೀಶ್‌ಗೌಡ ಮಕ್ಕಳಲ್ಲಿ ಭರವಸೆ ತುಂಬಿದರು.
ನಮ್ಮ ಸರ್ಕಾರ ಬಂದೂ ಒಂದು ವರ್ಷ ಪೂರೈಸಿದ್ದು, ಹಲವು ಅಭಿವೃದ್ಧಿ ಕಾರ್ಯಕ್ರಮ ಕ್ಷೇತ್ರದಲ್ಲಿ ಆಗಿದೆ. ಆದರೆ, ಇನ್ನೂ ಹೆಚ್ಚಿನ ಹಾಗೂ ಶಾಶ್ವತ ಅಭಿವೃದ್ಧಿ ಕೆಲಸ ಮಾಡುವ ತುಡಿತ ನನಗಿದೆ. ನಿಮ್ಮ ಸಮಸ್ಯೆ ಎನೇ ಇದ್ದರೂ ತಿಳಿಸಿ ಬಗೆಹರಿಸುವುದಾಗಿ ಹೇಳಿದರು.
ನಮ್ಮ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ನಜರ್‌ಬಾದ್, ಇಟ್ಟಿಗೆಗೂಡು ಮತ್ತು ಲಷ್ಕರ್ ಮೊಹಲ್ಲಾ ನಿವಾಸಿಗಳು ಈ ಕಾರ್ಯಕ್ರಮದ ಮೂಲಕ ಸರ್ಕಾರದ ಸಾಧನೆಯನ್ನು ಜನರ ಮನಸ್ಸಿಗೆ ಮುಟ್ಟಿಸಿದ್ದಾರೆ. ಈ ಕಾರ್ಯಕ್ರಮದ ನೇತೃತ್ವ ವಹಿಸಿರುವ ಶ್ರೀಪಾಲ್ ಮತ್ತು ಗೆಳೆಯರ ಕರ್ತವ್ಯ, ಪಕ್ಷನಿಷ್ಠೆ ಶ್ಲಾಘನೀಯ ಎಂದರು.
ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯದರ್ಶಿ ಆರ್. ಶ್ರೀಪಾಲ್ ಮಾತನಾಡಿ, ನಗರಪಾಲಿಕೆ ೪೦ ಹಾಗೂ ೫೨ ನೇ ವಾರ್ಡಿನ ಜನತೆ ಅರ್ಥ ಮಾಡಿಕೊಳ್ಳಬೇಕು. ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸುವ ಮನಸ್ಸು ಮಾಡಬೇಕಿದೆ. ಬಿಜೆಪಿಯ ಬೆಂಬಲಿಗರು ಸಹ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಅನ್ನು ಬೆಂಬಲಿಸಿದಾಗ ಮಾತ್ರ ಈ ಭಾಗದ ಅಭಿವೃದ್ಧಿ ಸಾಧ್ಯ. ಮುಂದಿನ ದಿನಗಳಲ್ಲಿ ಈ ಭಾಗದ ಜನರ ಸಮಸ್ಯೆ ಆಲಿಸಲು ಜನಸ್ಪಂದನಾ ಕಚೇರಿ ತೆರೆಯಲಾಗುವುದು ಎಂದು ಹೇಳಿದರು.
ಮಾಜಿ ಶಾಶಕ ಎಂ.ಕೆ.ಸೋಮಶೇಖರ್ ದೀಪಕ್ ಪುಟ್ಟಸ್ವಾಮಿ, ಮೋಹನ್ ಕುಮಾರ್ ಗೌಡ, ಸುನೀಲ್, ರವಿ, ಮಹದೇವ್ ಶಿವಣ್ಣ, ವಿಕಾಸ್ ಯೋಗೇಶ್ ಯಾದವ್, ಪವನ್ ಸಿದ್ದರಾಮು, ಕೆ. ಶಿವರಾಂ ಇನ್ನಿತರರು ಬಾಗಿಯಾಗಿದ್ದರು.
ಕಾರ್ಯಕ್ರಮದ ಅಂಗವಾಗಿ, ಆರೋಗ್ಯ ತಪಾಸಣೆ ಮತ್ತು ಆಟೋ ಚಾಲಕರಿಗೆ ಜೀವ ವಿಮೆ ಹಾಗೂ ಪ್ರತಿಭಾ ಪುರಸ್ಕಾರ ಮಾಡಲಾಯಿತು. ೪೦ ಮತ್ತು ೫೨ನೇ ವಾರ್ಡಿನ ಜನರ ಉಚಿತ ಆರೋಗ್ಯ ತಪಾಸಣೆ, ಆಟೋ ಚಾಲಕರಿಗೆ ಉಚಿತ ಆಕ್ಸಿಡೆಂಟ್ ಇನ್ಸೂರೆನ್ಸ್ ಮಾಡಿಸಿ ಕೊಡಲಾಯಿತು.
ಗ್ಯಾರಂಟಿಗಳು ಬಡವರಲ್ಲಿ ಶಕ್ತಿ ತುಂಬಿವೆ
ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಬಡಜನರನ್ನು ಆರ್ಥಿಕವಾಗಿ ಮುನ್ನಡೆಸಿದೆ. ಅವರಲ್ಲಿ ಚೈತನ್ಯ ತುಂಬಿದೆ. ವಿರೋಧ ಪಕ್ಷಗಳು ಯಾವುದೇ ರೀತಿಯ ಟೀಕೆ, ಟಿಪ್ಪಣಿ ಮಾಡಿದರೂ ಲೆಕ್ಕಿಸದೆ ನಮ್ಮ ಮುಖ್ಯಮಂತ್ರಿಗಳು ಜನಸಾಮಾನ್ಯರ ಏಳಿಗೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡಿದ್ದಾರೆ.
ಕೆ.ಹರೀಶ್‌ಗೌಡ, ಶಾಸಕರು
0 ಕಾಮೆಂಟ್‌ಗಳು