ಕುರಿಮಂಡಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ವಿನೋದ್ ಕುಮಾರ್ ಉಸ್ತುವಾರಿಯಲ್ಲಿ ಜನಸ್ಪಂದನ ಕಚೇರಿ ಉದ್ಘಾಟಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ತನ್ವೀರ್ ಸೇಠ್
ಜೂನ್ 15, 2024
ಮೈಸೂರು : ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ನಗರದ ಕುರಿಮಂಡಿ ಬಡಾವಣೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ವಿನೋದ್ ಕುಮಾರ್ ಪ್ರಾರಂಭಿಸಿರುವ ಜನಸ್ಪಂದನ ಕಚೇರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ, ತನ್ವೀರ್ ಸೇಠ್ ಶನಿವಾರ ಸಂಜೆ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಕುರಿಮಂಡಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಯುವ ಕಾಂಗ್ರೆಸ್ ಮುಖಂಡ ವಿನೋದ್ ಕುಮಾರ್ ಜನಸ್ಪಂದನ ಕಚೇರಿ ಪ್ರಾರಂಭಿಸಿರುವುದು ಉತ್ತಮವಾದ ಕೆಲಸ. ಇಂತಹ ಕ್ರಿಯಾಶೀಲ ಯುವಕ, ಯುವತಿಯರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಟಿಕೆಟ್, ಸ್ಥಾನಮಾನ ಕೊಡುವುದು ಪಕ್ಷದ ತೀರ್ಮಾನ. ನಾವು ಎಷ್ಟೆಲ್ಲಾ ಸಾಧ್ಯವೋ ಅಷ್ಟು ಪ್ರೋತ್ಸಾಹ ನೀಡುತ್ತೇವೆ. ಮಹಿಳಾ ಮೀಸಲಾತಿ, ಹಿರಿಯರಿಗೆ ಸ್ಥಾನಮಾನ, ಯುವಕರಿಗೆ ಆದ್ಯತೆ ಎಲ್ಲವನ್ನೂ ಪಕ್ಷ ಪರಿಗಣಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಬಡಾವಣೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಉಚಿತ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರಲ್ಲದೇ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದರು.
ಯುವ ಕಾಂಗ್ರೆಸ್ ಮುಖಂಡ ವಿನೋದ್ ಕುಮಾರ್ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಕುರಿಮಂಡಿ ಬಡಾವಣೆಯಲ್ಲಿ ಜನಸೇವೆ ಮಾಡುತ್ತಿದ್ದೇನೆ. ಕೋವಿಡ್ ಸಂದರ್ಭದಲ್ಲಿಯೂ ನನ್ನ ಬಡಾವಣೆಯಲ್ಲಿ ಜನಸೇವೆ ಮಾಡಿದ್ದೇನೆ. ಪ್ರಸ್ತುತ ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಸೇವೆ, ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕಚೇರಿ ಕೆಲಸ ಮಾಡಲಿದೆ. ಅಲ್ಲದೇ ಪ್ರತಿವರ್ಷ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ ಮಾಡುತ್ತಿದ್ದೇನೆ. ಇದರಿಂದ ಮಕ್ಕಳಿಗೆ ಪ್ರೋತ್ಸಾಹ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಮೈಸೂರು ಮಹಾನಗರಪಾಲಿಕೆಗೆ ಸ್ಪರ್ಧಿಸುವ ಆಸಕ್ತಿ ಹೊಂದಿದ್ದೇನೆ ಎಂದರು.
ಕಾಂಗ್ರೆಸ್ ಮುಖಂಡ ಗಫೂರ್ ಆಜಾದ್ ಮಾತನಾಡಿ, ವಿನೋದ್ ಕುಮಾರ್ ಜಾತ್ಯತೀತ ವ್ಯಕ್ತಿತ್ವವುಳ್ಳ ಉತ್ಸಾಹಿ ಯುವಕರಾಗಿದ್ದು, ಐದಾರು ವರ್ಷಗಳಿಂದ ಈ ಭಾಗದಲ್ಲಿ ಜನಸೇವೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಡಾವಣೆಯ ಜನರು ಅವರ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಶಾಹಿದ್, ಸೈಯದ್ ಇಕ್ಬಾಲ್, ದಕ್ಷಿಣಮೂರ್ತಿ, ಓಬಿಸಿ ಉಪಾಧ್ಯಕ್ಷ ಮಹದೇವು, ಸಿದ್ದರಾಜು, ಗಫೋರ್ ಆಝಾದ್, ಚಂದ್ರು, ಕಾಂಗ್ರೆಸ್ ಯುವ ಮುಖಂಡರಾದ ವಿನೋದ್ ಕುಮಾರ್, ಚಿನ್ನತಾಯಮ್ಮ, ನಳಿನಾ ಸೇರಿದಂತೆ ಕುರಿಮಂಡಿಯ ನೂರಾರು ಜನರು ಭಾಗಿಯಾಗಿದ್ದರು.
0 ಕಾಮೆಂಟ್‌ಗಳು