ಬೇಬಿ ಬೆಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಚಿನಕುರಳಿ ಪ್ರದೀಪ್ ಒತ್ತಾಯ
ಜೂನ್ 01, 2024
ಪಾಂಡವಪುರ : ಇತಿಹಾಸ ಪ್ರಸಿದ್ಧ ಬೇಬಿ ಬೆಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಮಠಕ್ಕೆ ಬರುವ ಭಕ್ತರಿಗೆ ತೀವ್ರ ಅನಾಕೂಲ ಉಂಟಾಗಿದೆ. ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸಮಾಜ ಸೇವಕ ಚಿನಕುರಳಿ ಪ್ರದೀಪ್ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೇಬಿಬೆಟ್ಟದ ರಾಮಯೋಗೀಶ್ವರ ಮಠಕ್ಕೆ ದಿನನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಹಬ್ಬ ಹರಿದಿನದಲ್ಲಿ ಮತ್ತು ವಿಶೇಷ ಪೂಜೆಗಳು ನಡೆಯುವ ಸಂದರ್ಭದಲ್ಲಿ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಈ ವೇಳೆ ಕುಡಿಯಲು ಮತ್ತು ಇನ್ನಿತರೆ ಬಳಕೆಗೆ ನೀರಿನ ಅವಶ್ಯಕತೆಯೂ ಹೆಚ್ಚಾಗುತ್ತದೆ. ಈಗಾಗಲೇ ಕುಡಿಯುವ ನೀರು ಯೋಜನೆಯ ಕಾಮಗಾರಿ ಮುಗಿದಿದೆ. ಪೈಪ್‌ಲೈನ್ ಕೂಡ ಹಾಕಿದ್ದಾರೆ. ಆದರೇ, ನೀರು ಬಿಟ್ಟಿಲ್ಲ ಕೂಡಲೇ ನೀರು ಹರಿಸಬೇಕು ಎಂದು ಪ್ರದೀಪ್ ಒತ್ತಾಯಿಸಿದರು. ಮಠದಲ್ಲಿ ಬೋರ್‌ವೆಲ್ ಇದೆ. ಆದರೇ, ಬೇಸಿಗೆ ಕಾರಣದಿಂದ ಅಂತರ್ಜಲ ಕುಸಿದು ನೀರು ಬರುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ವಿಷಯವನ್ನು ಶಾಸಕರ ಗಮನಕ್ಕೆ ತರಲಾಗಿದೆ. ಅವರು ಭಾನುವಾರ ಭೇಟಿ ನೀಡುವುದಾಗಿ ಹೇಳಿದ್ದಾರೆ ಎಂದು ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಹೇಳಿದರು.
0 ಕಾಮೆಂಟ್‌ಗಳು