ಡಾ.ಪುಷ್ಪ ಅಮರ್ ನಾಥ್ ಜನ್ಮದಿನ ಪ್ರಯುಕ್ತ ಅಭಿಮಾನಿಗಳಿಂದ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಪೂಜೆ

ವರದಿ-ಜಯರಾಮ್‌ ಹುಣಸೂರು
ಹುಣಸೂರು‌ : ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್‌  ಅಧ್ಯಕ್ಷರಾದ ಡಾ.ಪುಷ್ಪ ಅಮರ್ ನಾಥ್ ಅವರ ಜನುಮ ದಿನದ ಅಂಗವಾಗಿ ಅಭಿಮಾನಿಗಳು ಹಾಗೂ ತಾ.ಕಾಂಗ್ರೆಸ್ ಕಾರ್ಯಕರ್ತರು  ಪಟ್ಟಣದ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಪೂಜೆ  ಸಲ್ಲಿಸಿ ನಂತರ  ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ  ಮಾಡಿದರು.
ವೇಳೆ ಕಾಂಗ್ರೆಸ್‌ ಕಾರ್ಯಧ್ಯಕ್ಷ ಪುಟ್ಟರಾಜ್, ನಗರ ಕಾಂಗ್ರೆಸ್‌ ಅಧ್ಯಕ್ಷ ಕಲ್ಕುಣಿಕೆ ರಮೇಶ್, ಮಾಜಿ ಅಧ್ಯಕ್ಷ ಬಿಳಿಕೆರೆ ಬಸವರಾಜ್,   ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷರಾದ ಕುಮಾರ್, ಕಲ್ಕುಣಿಕೆ ರಾಘು, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಚಿಕ್ಕಸ್ವಾಮಿ, ಮುಖಂಡರಾದ ಚಿಲ್ಕುಂದ ಶಿವಕುಮಾರ್, ಅಟೋ ಶಿಲ್ಪಿ, ರಮೀಜ್, ರೇಣುಕ ಸೇರಿದಂತೆ ಇತರರು ಇದ್ದರು
.