ಕಾನೂನು ಉಲ್ಲಂಘಿಸಿ ಆಸ್ಪತ್ರೆ ಕಟ್ಟಡ ನಿರ್ಮಾಣ : ವಕೀಲ ಪುಟ್ಟರಾಜು ಆರೋಪ

ವರದಿ-ಜಯರಾಮ್‌ ಹುಣಸೂರು
ಹುಣಸೂರು : ಹುಣಸೂರಿನ ಕಾವೇರಿ ಅಸ್ಪತ್ರೆಯ ನೂತನ  ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಉಸ್ತುವಾರಿ ಸಚಿವರು ಆಗಮಿಸುತ್ತಿಲ್ಲವೆಂದು ಕಾಂಗ್ರೆಸ್‌ ಪಕ್ಷದ ಕಾರ್ಯಧ್ಯಕ್ಷ ವಕೀಲ ಪುಟ್ಟರಾಜ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ,    ಹುಣಸೂರಿನಕಾವೇರಿ ಆಸ್ಪತ್ರೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ,  ಆರೋಗ್ಯ ಸಚಿವ ದಿನೇಶ್ ಗುಂಡುರಾವ್  ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಸಿ ಮಹದೇವಪ್ಪನವರು ಆಗಮಿಸುತ್ತಿದ್ದಾರೆ ಎಂದು ಹುಣಸೂರಿನ  ಕಾವೇರಿ ಆಸ್ಪತ್ರೆಯವರು  ತಾಲೂಕಿನ ಜನರಲ್ಲಿ ಸುಳ್ಳುಪ್ರಚಾರ ಮಾಡುತ್ತಿದ್ದಾರೆ.
ಖಾಸಗಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮಕ್ಕೆ  ಮುಖ್ಯಮಂತ್ರಿಗಳು ಸೇರಿದಂತೆ ಸರ್ಕಾರದ  ಯಾವುದೇ ಮಂತ್ರಿಗಳು ಆಗಮಿಸುತ್ತಿರುವುದಿಲ್ಲ.
 
ಜತೆಗೆ ನೂತನ  ಕಟ್ಟಡವು KPME (ಕರ್ನಾಟಕ ಆರೋಗ್ಯ ಇಲಾಖೆ) ಕಾಯ್ದೆಯಡಿ ಕಾನೂನುಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದು
 ಕಟ್ಟಡವನ್ನೂ ಹುಣಸೂರು ನಗರ ಯೋಜನಾ ಪ್ರಾಧಿಕಾರದ  ಯೋಜನೆಯಂತೆ ನಿರ್ಮಾಣ ಮಾಡದೇ ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ ಎಂದು  ದೂರಿದ್ದಾರೆ.
ನಗರದ ಬೈಪಾಸ್  ರಸ್ತೆಯ ನೂತನ ಕಟ್ಟಡಕ್ಕೆ ಚೆಸ್ಕಾಂ ಇಲಾಖೆಯ ಖಾಯಂ ಅನುಮತಿ ಪಡೆದಿರುವುದಿರುದಿಲ್ಲ,
ಟೌನ್ ಪ್ಲಾನಿಂಗ್ ವಿರುದ್ದವಾಗಿ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಿರುವುದಲ್ಲದೇ ನಗರ ಸಭೆಯಿಂದ NOC ಪಡೆದಿರುವುದಿಲ್ಲ. ಇದಲ್ಲದೇ ಸಾರ್ವಜನಿಕರಿಗೆ ಮೀಸಲಿಟ್ಟಿರುವ ಸಾರ್ವಜನಿಕ ಉದ್ಯಾನವನದ ಸ್ಥಳದಲ್ಲಿ  STP (ಘನ ತ್ಯಾಜ್ಯ ವಸ್ತುಗಳ ಸಂಗ್ರಹ ಸ್ಥಳ) ಘಟಕ ನಿರ್ಮಾಣ ಮಾಡಿರುವುದಕ್ಕೆ ಸ್ಥಳೀಯ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿರುವುದರಿಂದ   ಲೋಪ ದೋಷಗಳುಕಂಡು ಬಂದಿರುವುದರಿಂದ  ಹುಣಸೂರಿನ ಖಾಸಗಿ ಆಸ್ಪತ್ರೆ ಕಟ್ಟಡ ಉದ್ಘಾಟನೆ   ಸರ್ಕಾರದ ಗಣ್ಯರು ಆಗಮಿಸುತ್ತಿಲ್ಲವೆಂದು   ತಾಲೂಕಿನಜನತೆಗೆ ತಿಳಿಯಪಡಿಸುತ್ತಿದ್ದೇವೆ ಎಂದರು.
ಆಸ್ಪತ್ರೆಯ ಎಲ್ಲಾಕಾಮಗಾರಿಗಳನ್ನು ಸಂಪೂರ್ಣಗೊಳಿಸಿ ಆರೋಗ್ಯ ಇಲಾಖೆಯ KPMP ಕಾಯ್ದೆಯಡಿ ಕಾನೂನು ರೀತಿಯಲ್ಲಿ ಉದ್ಘಾಟನೆಗೆ ನಮ್ಮ ಅಭ್ಯಂತರವಿಲ್ಲವೆಂದು ಸ್ಪಷ್ಟ ಪಡಿಸಿದರು.
ಸುದ್ದಿ ಗೋಷ್ಠಿ ಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಕಲ್ಕುಣಿಕೆ ರಮೇಶ್ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಚಿಕ್ಕಸ್ವಾಮಿ, ತಾ.ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಲ್ಕುಣಿಕೆ ರಾಘು ಇದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು