ತಾಯಿ ಅಂತ್ಯಕ್ರಿಯೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಮಗ ಸೋಸೆ ಅಪಘಾತದಲ್ಲಿ ದಾರುಣ ಸಾವು
ಮಾರ್ಚ್ 02, 2024
ವರದಿ-ಜಯರಾಮ್
ಹುಣಸೂರು
ಹುಣಸೂರು:
ಬೈಕ್
ಮತ್ತು
ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ವ್ಯಕ್ತಿಯೊಬ್ಬರು
ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಬೈಕ್‌ನಲ್ಲಿದ್ದ
ವ್ಯಕ್ತಿಯ ಪತ್ನಿ ಆಸ್ಪತ್ರೆಯಲ್ಲಿ ಮೃತಪಟ್ಟ
ಜನರ ಮನ ಕಲಕುವ ದಾರುಣ ಘಟನೆ ಹುಣಸೂರು - ಮೈಸೂರು ಮುಖ್ಯ ರಸ್ತೆಯ ಕನಕ
ಭವನದ ಎದುರಿನಲ್ಲಿ ನಡೆದಿದೆ.
ನಗರದ ಮಂಜುನಾಥ ಬಡಾವಣೆಯ ನಿವಾಸಿ ನಿವೃತ್ತ ಪೋಸ್ಟ್ ಮ್ಯಾನ್ ರಾಜು (64), ಹಾಗೂ ಇವರ ಪತ್ನಿ ಸುನಂದ (55) ಸಾವನ್ನಪ್ಪಿದವರು.
ಮೃತರಿಗೆ ಒರ್ವ
ಪುತ್ರ ಇದ್ದಾರೆ.
ಘಟನೆ ವಿವರ
:
ತಾಲೂಕಿನ ಬನ್ನಿಕುಪ್ಪೆ ಗ್ರಾಮದ ನಿವಾಸಿಯಾಗಿದ್ದ ರಾಜು ಅವರ ತಾಯಿ, ಗುರುವಾರ ನಿಧನ ಹೊಂದಿದ್ದರು, ನಿವೃತ್ತ
ಪೋಸ್ಟ್ ಮ್ಯಾನ್ ರಾಜು ನಗರದ
ಮಂಜುನಾಥ ಬಡಾವಣೆಯಲ್ಲಿ ವಾಸವಿದ್ದು ತಮ್ಮ ತಾಯಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಗಂಡ ಹೆಂಡತಿ ಇಬ್ಬರೂ ತೆರಳಿ ಅಂತ್ಯಕ್ರಿಯೆಯಲ್ಲಿ ಬಾಗವಹಿಸಿ ನಗರಕ್ಕೆ ಮದ್ಯಾಹ್ನ ವಾಪಸ್
ಆಗುತ್ತಿದ್ದ ವೇಳೆ ಹುಣಸೂರು ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ಗೂಡ್ಸ್ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ತಲೆ. ಮುಖಕ್ಕೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಇವರ ಪತ್ನಿ ತೀವ್ರಗಾಯಗೊಂಡಿದ್ದ ಸುನಂದ ರನ್ನು ಹುಣಸೂರಿನ
ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಹೋಗಿದ್ದಾರೆ
ಅದಕ್ಕೂ ಮುನ್ನ ದಾರಿಯ ಮಧ್ಯದಲ್ಲಿ ಸಾವನ್ನಪ್ಪಿದ್ದರು.
ಈ
ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
0 ಕಾಮೆಂಟ್‌ಗಳು