ಜೆಇಇ ಮೇನ್ಸ್‌ನಲ್ಲಿ ಉತ್ತಮ ಫಲಿತಾಂಶ ಗಳಿಸಿದ ಮಹಾಜನ ವಿದ್ಯಾಸಂಸ್ಥೆಯ ಆರ್‌ವಿಪಿಬಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸನ್ಮಾನ
ಫೆಬ್ರವರಿ 26, 2024
ಮೈಸೂರು : ೨೦೨೩-೨೪ನೇ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದ ಮಹಾಜನ ವಿದ್ಯಾಸಂಸ್ಥೆಯ ಆರ್‌ವಿಪಿಬಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹಾಜನ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಎಸ್.ಎನ್ ಪ್ರಸಾದ್ ಅವರು, ಉತ್ತಮ ಅಂಕ ಗಳಿಸಿದ ಪಿ.ಯಾಗ್ ಅಯ್ಯಪ್ಪ (೯೯.೨೬%), ಪರಮ್.ಎಸ್., (೯೮.೯೧%), ಜಾನ್ಹವಿ ತುಮ್ನರ್ ಗುರುರಾಜ್ (೯೮.೪೩%), ಅದಿತ್.ವಿ.ಕೆ (೯೮.೧೯%), ಸಾತ್ವಿಕ್.ವಿ (೯೮.೧೩%), ಯದುವಂಶಿ.ಪಿ (೯೭.೭೦%), ಆಮಿಲ್ ಫಿನೋಜ್ (೯೭.೦೧%), ಜಿ.ಶ್ಲೋಕ್ (೯೬.೮೯), ಸಾಯಿ ಶ್ರೇಷ್ಠ ಅಂಬತಿ ಗಂಗಾ (೯೬.೩೨%), ಅನಂತ್.ಜಿ.ಕಾರಂತ್ (೯೫.೬೪%) ಇವರನ್ನು ಸನ್ಮಾನಿಸಿದರು. ಬಳಿಕ ಅವರು ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಐಐಟಿ ಮತ್ತು ಎನ್‌ಐಟಿ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗಬೇಕು ಮತ್ತು ನಮ್ಮ ದೇಶದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇತರೆ ರಾಷ್ಟ್ರಗಳಲ್ಲಿ ಛಾಪು ಮೂಡಿಸಬೇಕು ಎಂದರು. ಮಹಾಜನ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿಜಯಲಕ್ಷ್ಮೀ ಮುರಳೀಧರ್‌ರವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರುಗಳ ಸಹಕಾರದಿಂದ ಈ ರೀತಿಯ ಅತ್ಯುತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಶ್ರಮ ವಹಿಸಿ ಅತ್ಯುತ್ತಮ ಫಲಿತಾಂಶವನ್ನು ಪಡೆಯಬೇಕು ಎಂದು ಸ್ಫೂರ್ತಿ ತುಂಬಿದರು. ಐಎಂಎಸ್‌ಸಿ ನಿರ್ದೇಶಕರಾದ ದಿನೇಶ್ ಟಿ.ಪಿ ಮಾತನಾಡಿ, ಮಹಾಜನ ವಿದ್ಯಾಸಂಸ್ಥೆಯ ಆರ್‌ವಿಪಿಬಿ ಸಹಯೋಗದೊಂದಿಗೆ ಈ ಬಾರಿ ಜೆಇಇ ಮೈನ್ಸ್ ೨೦೨೪ ಜನವರಿ ಮಾಹೆಯಲ್ಲಿ ನಡೆದಿರುವ ಫಲಿತಾಂಶವು ಅತ್ಯುತ್ತಮವಾಗಿದ್ದು, ಮುಂದೆ ಬರುವ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಇನ್ನು ಹೆಚ್ಚಿನ ಅಂಕಗಳನ್ನು ಗಳಿಸಿ ಕಾಲೇಜು ಮತ್ತು ನಮ್ಮ ಸಂಸ್ಥೆಗೆ ಕೀರ್ತಿ ತರಬೇಕೆಂದು ಆಶಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿಜಯಲಕ್ಷ್ಮೀ ಮುರಳೀಧರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಾಜನ ವಿದ್ಯಾಸಂಸ್ಥೆಯ ಉನ್ನತ ಶಿಕ್ಷಣ ನಿರ್ದೇಶಕರಾದ ರೇಣುಕಾರ್ಯ, ಆರ್‌ವಿಪಿಬಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಂದ್ರ ಕೆ.ಎಂ. ಮತ್ತು ಐಎಂಎಸ್‌ಸಿ ನಿರ್ದೇಶಕರುಗಳಾದ ದಿನೇಶ್ ಟಿ.ಪಿ, ಅಂತ್ರಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಚೇತನಾ ಕೆ.ಆರ್., ಕಾರ್ಯಕ್ರಮವನ್ನು ನಿರೂಪಣೆ ಮಾಡಿದರೆ, ಧನ್ಯಶ್ರೀ ಇ.ಬಿ., ವಂದನಾರ್ಪಣೆ ಮಾಡಿದರು. ರಿತ್ವಿಕ್ ಪ್ರಾರ್ಥನೆ ಮಾಡಿದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಮಹೇಂದ್ರ ಕೆ.ಎಂ., ರವರು ಮಾತನಾಡಿ, ಗುರು ಮತ್ತು ಗುರಿಗಳ ನಡುವೆ ಗುರುವಿನ ಪಾತ್ರ ಮಹತ್ವವಾಗಿದ್ದು, ವಿದ್ಯಾರ್ಥಿಗಳು ಮುಂದಿನ ಗುರಿಯ ಜೊತೆಗೆ ಗುರುವಿನ ಮಾರ್ಗದರ್ಶನದೊಂದಿಗೆ ನಡೆದರೆ ಯಾವುದೇ ಫಲಿತಾಂಶವು ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
0 ಕಾಮೆಂಟ್‌ಗಳು