ಮಲೇ ಮಹದೇಶ್ವರ ಬೆಟ್ಟದಲ್ಲಿ ಅಮವಾಸ್ಯೆ ಪೂಜೆ : ಚಿನ್ನದ ರಥೋತ್ಸವ ಕಣ್ತುಂಬಿಕೊಂಡ ಭಕ್ತರು

ವರದಿ :ವಿಜಯ್ ಕುಮಾರ್. ಕಾಂಚಳ್ಳಿ.
ಹನೂರು : ಪ್ರಸಿದ್ದ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಭಕ್ತರ ದಂಡು ಆಗಮಿಸಿತ್ತು.
ಮಲೆ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ ಮತ್ತು ಪೂಜಾ ಕೈಂಕರ್ಯಗಳು ಬೇಡ ಗಂಪಣ ಅರ್ಚಕರಿಂದ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿದವು.
ಎಣ್ಣೆ ಮಜ್ಜನ ಸೇವೆ ಬಳಿಕ ಮಲೆ ಮಾದಪ್ಪನಿಗೆ ಅಭಿಷೇಕ, ಬಿಲ್ವಾರ್ಚನೆ ವಿವಿಧ ಅಭಿಷೇಕ ಪೂಜೆಗಳನ್ನು ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.
 ಗುರುವಾರ ನಡೆದ  ಅಮಾವಾಸ್ಯೆ ಪ್ರಯುಕ್ತ  ಚಿನ್ನದ ರಥೋತ್ಸವವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು.
ರುದ್ರಾಕ್ಷಿ ವಾಹನ, ಹುಲಿ ವಾಹನ, ಬಸವ ವಾಹನ ರಥೋತ್ಸವ ವನ್ನ ಭಕ್ತರು ಎಳೆದು ಮಾದಪ್ಪನ ಕೃಪೆಗೆ ಪಾತ್ರರಾದರು.
ಬೆಂಗಳೂರು, ಕನಕಪುರ,ಮಂಡ್ಯ, ಮೈಸೂರು, ಮಳವಳ್ಳಿ,ಚಾಮರಾಜನಗರ, ಕೊಳ್ಳೇಗಾಲ ಹಾಗೂ ನಾನಾ ಜಿಲ್ಲೆಗಳಿಂದ ಹಾಗೂ ತಮಿಳುನಾಡು ರಾಜ್ಯದಿಂದ  ಭಕ್ತರು ಆಗಮಿಸಿದ್ದರು.
ಬರುವ ಭಕ್ತರಿಗೆ ದೇವಸ್ಥಾನದ ಪ್ರಾಧಿಕಾರದಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ವ್ಯವಸ್ಥಿತ ಸರತಿ ಸಾಲು, 60 ವರ್ಷ ಮೇಲ್ಪಟ್ಟವರಿಗೆ ವಿಶೇಷ ದರ್ಶನ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲಾಗಿತ್ತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು