ವರದಿ-ಪ್ರಭು ಬನ್ನೂರು
ಬನ್ನೂರು: ಎಷ್ಟೇ ಕೋಟಿ ಹಣ ಸಂಪಾದಿಸಿದರೂ ಅದು ವಿದ್ಯೆಯ ಮುಂದೆ ಸಾಲದು. ಹಣ ದೋಚಬಹುದು ಆದರೆ ವಿದ್ಯೆಯನ್ನು ಕದಿಯಲು ಆಗುವುದಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ವಿದ್ಯೆಯನ್ನು ನೀಡಬೇಕೆ ವಿನಃ ಆಸ್ತಿಯನ್ನು ನೀಡುವ ಅವಶ್ಯಕತೆ ಇಲ್ಲ ಎಂದು ಆದಿಚುಂಚನಗಿರಿ ಮಠದ ಸೋಮನಾಥಸ್ವಾಮೀಜಿ ತಿಳಿಸಿದರು.ಪಟ್ಟಣದ ಆದಿಚುಂಚನಗಿರಿ ಬಾಲಜಗತ್ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂಸ್ಥೆಯಿಂದ ಶಿಕ್ಷಣ ಪಡೆದವರು ಸಮಾಜದ ನಾನಾ ಭಾಗಗಳಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದಾರೆಂದು ತಿಳಿಸಿದರು.
ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಸಮಾಜದಲ್ಲಿ ಸಮಾನತೆ ಮುಖ್ಯ. ಸಮಾನತೆಯನ್ನು ಗಳಿಸಿಕೊಳ್ಳಲು ವಿದ್ಯೆ ಮುಖ್ಯ. ವಿದ್ಯೆಯನ್ನು ಶಿಕ್ಷಕರು ಉತ್ತಮ ರೀತಿಯಲ್ಲಿ ನೀಡಿದರೆ ಭವಿಷ್ಯದಲ್ಲಿ ಮಕ್ಕಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆಂದು ಸಲಹೆ ನೀಡಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಬೋರೇಗೌಡ, ಸಮಾಜ ಸೇವಕ ವೈ.ಎಸ್. ರಾಮಸ್ವಾಮಿ, ಬನ್ನೂರು ಪುರಸಭಾ ಸದಸ್ಯ ಸಿ.ಸಿ. ಸುರೇಶ್, ವಿಜಯ್‌ಕುಮಾರ್, ಚಲುವರಾಜು, ಶಿಕ್ಷಣ ಸಂಯೋಜಕ ಪರಮೇಶ್ವರ, ಮುಖ್ಯಶಿಕ್ಷಕ ಉಮಾಶಂಕರ್, ಆಡಳಿತಾಧಿಕಾರಿ ಆನಂದ್, ಪ್ರಾಂಶುಪಾಲ ಅಶ್ವಥ್ ಹಾಗೂ ಪೋಷಕರು ಇದ್ದರು.
0 ಕಾಮೆಂಟ್‌ಗಳು