ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ : ಕ್ರಿಶನ್ ಪಾಲ್ ಗುರ್ಜರ್
ಜನವರಿ 11, 2024
ಬಿಜೆಪಿ ಸರ್ಕಾರದ ಕಲ್ಯಾಣ ಕಾರ್ಯಕ್ರಮ, ಪ್ರಧಾನಿ ನರೇಂದ್ರಮೋದಿ ಅವರ ಕಾರ್ಯದಕ್ಷತೆ ಪ್ರತಿಫಲ

ವರದಿ-ಶ್ರೀನಿವಾಸ್
ಕೆ.ಆರ್.ಪೇಟೆ
ಕೆ.ಆರ್.ಪೇಟೆ : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು
ವಿಶ್ವವೇ ಮೆಚ್ಚಿದ್ದು, ಕಡಿಮೆ
ಅವಧಿಯಲ್ಲಿ ನೂರಾರು ಜನ ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ.
ಇದರಿಂದ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ
ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಇಂದನ ಹಾಗೂ ಭಾರೀ
ಕೈಗಾರಿಕೆ ರಾಜ್ಯ ಸಚಿವರಾದ ಕಿಶನ್ಪಾಲ್ ಗುರ್ಜಾರ್ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಎಪಿಎಂಸಿ ಅವರಣದಲ್ಲಿ ಬ್ಯಾಂಕ್ ಆಫ್ ಬರೋಡ ವತಿಯಿಂದ ಆಯೋಜಿಸಿದ್ದ “ವಿಕಸಿತ ಭಾರತ ಸಂಕಲ್ಪ ಯಾತ್ರೆ” ಕಾರ್ಯಕ್ರಮವನ್ನು
ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ವಿವಿಧ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
ದಕ್ಷ, ಪ್ರಾಮಾಣಿಕ ಆಡಳಿತ ನೀಡಿ ಗ್ರಾಮಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು
ಅನುಷ್ಠಾನಗೊಳಿಸಿರುವ ಮೋದಿ ಅವರು ಬಡತನ, ನಿರುದ್ಯೋಗ, ಹಾಗೂ ಹಸಿವು ಮುಕ್ತ ಭಾರತದ ನಿರ್ಮಾಣಕ್ಕಾಗಿ ಹಗಲಿರುಳೆನ್ನದೆ ಕೆಲಸ ಮಾಡುವ ಮೂಲಕ ದೇಶದ ಜನತೆ
ತಮ್ಮ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಂಡಿದ್ದಾರೆ.
ಜನತೆಗೆ ಕೊಟ್ಟ ಮಾತು ಈಡೇರಿಸಿ, ಜನತೆಗೆ ನೀಡಿದ ಭರವಸೆಗಳನ್ನು ಸಾಕಾರಗೊಳಿಸಿರುವ
ಮೋದಿಜಿ ಶ್ರೀಸಾಮಾನ್ಯರ ಪ್ರಧಾನಿಯಾಗಿ ಸಮಾಜದಲ್ಲಿನ ನೊಂದವರು,
ತುಳಿತಕ್ಕೊಳಗಾದವರು, ಮಹಿಳೆಯರು, ರೈತಭಾಂದವರು ಹಾಗೂ ಯುವ ಜನರಿಗೆ ಭರವಸೆಯ ಹೊಂಬೆಳಕಾಗಿದ್ದಾರೆ
ಎಂದು ಅಭಿಮಾನದಿಂದ ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ೨೮ ಸ್ಥಾನಗಳಲ್ಲೂ
ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು,
ಮೋದಿಜಿ ಅವರು ಮತ್ತೊಮ್ಮೆ ಪ್ರಧಾನಿಯಾಗುವ ಲಕ್ಷಣಗಳು ಕಾಣುತ್ತಿವೆ ಎಂದರು.
ನಮ್ಮ
ಎಲ್ಲಾ ಗ್ಯಾರಂಟಿಗಳು ಈಡೇರಿವೆ, ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ೫ ಗ್ಯಾರಂಟಿಗಳು ಶೇ.೧೦೦ಕ್ಕೆ ನೂರರಷ್ಟು ಈಡೇರಿಲ್ಲ, ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಗೆ
ರಾಜ್ಯ
ಸರ್ಕಾರ ತನ್ನ ಹೆಸರು ಹಾಕಿಕೊಂಡು ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ
ಕೆಲಸ ಮಾಡುತ್ತಿದೆ. ಚುನಾವಣೆಯ ಸಮಯದಲ್ಲಿ ೧೦ಕೆಜಿ
ಅಕ್ಕಿ ನೀಡುತ್ತೇವೆಂದ ಕಾಂಗ್ರೆಸ್ ಖಾತೆದಾರರ ಖಾತೆಗೆ ಹಣ ಹಾಕಲು ವಿಫಲವಾಗಿದೆ ಎಂದು ಕಿಡಿ ಕಾರಿದರು.
ನಬಾರ್ಡ್ ಎಜಿಎಂ ಸ್ಮಿತಾ, ಬ್ಯಾಂಕ್ ಆಫ್ ಬರೋಡ ಹಿರಿಯ ವ್ಯವಸ್ಥಾಪಕ ಅರುಣಕುಮಾರ್, ಪ್ರಶಾಂತ್, ತಾಪಂ ಇಓ ಸತೀಶ್,
ತಹಸೀಲ್ದಾರ್ ನಿಸರ್ಗಪ್ರಿಯ, ಇನ್ಸ್
ಪೆಕ್ಟರ್, ಸುಮಾರಾಣಿ, ಎಪಿಎಂಸಿ ಕಾರ್ಯದರ್ಶಿ ಸ್ಯೆಯದ್ ರಫೀಕ್ಅಹ್ಮದ್, ಬಿಜೆಪಿ ಮುಖಂಡರಾದ ಡಾ.ಸಿದ್ಧರಾಮಯ್ಯ, ಕೆ.ಜೆ.ವಿಜಯಕುಮಾರ್, ಪರಮೇಶ್ ಅರವಿಂದ್, ಚೋಕನಹಳ್ಳಿ ಪ್ರಕಾಶ್, ಶೀಳನೆರೆ ಭರತ್, ಭಾರತೀಪುರ ಪುಟ್ಟಣ್ಣ, ಬೂಕನಕೆರೆ
ಮಧುಸೂಧನ್, ಬ್ಯಾಂಕ್ ವ್ಯವಸ್ಥಾಪಕ ಮನೋಜ್ಶೆಟ್ಟಿ, ಕರ್ನಾಟಕ ಗ್ರಾಮೀಣ
ಬ್ಯಾಂಕ್ನ ಗಂಗಾಧರ್, ಮನಮುಲ್ ನಿರ್ದೇಶಕರ ಡಾಲುರವಿ, ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ. ಲೋಕೇಶ್, ಲೆನಿನ್ ಲೋಕೇಶ್, ಹೇಮಂತ್ಕುಮಾರ್, ಫಲಾನುಭವಿಗಳಾದ ಕುಮಾರ್, ರೂಪೇಶಾಚಾರ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು