ಬಸವಮಾರ್ಗ
ಫೌಂಡೇಷನ್ ೪ನೇ ವಾರ್ಷಿಕೋತ್ಸವ ೩೬ನೇ
೧೦ ದಿನಗಳ ಮಧ್ಯವರ್ಜನ ಶಿಬಿರದ ಸಮಾರೋಪ
ವರದಿ-ನಜೀರ್ ಅಹಮದ್
ಮೈಸೂರು : ಬಹುತೇಕ ಮಧ್ಯವರ್ಜನ ಕೇಂದ್ರಗಳಲ್ಲಿ ಶಿಬಿರಾರ್ಥಿಗಳಿಗೆ
ದೈಹಿಕ ಹಿಂಸೆ ನೀಡಲಾಗುತ್ತಿರುವ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿವೆ. ಇವುಗಳ ಮಧ್ಯೆ ಬಸವಮಾರ್ಗ
ಫೌಂಡೇಷನ್ ಸಂಸ್ಥೆಯು ಶಿಬಿರಾರ್ಥಿಗಳೊಂದಿಗೆ ಸ್ನೇಹದಿಂದ ವರ್ತಿಸಿ ಅವರನ್ನು ಮಾನಸಿಕವಾಗಿ ಬದಲಾವಣೆ
ಮಾಡುವ ಮೂಲಕ ಹೊಸ ಬದುಕು ನೀಡುತ್ತಿದೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ನಗರದ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಬಸವಮಾರ್ಗ ಸಂಸ್ಥೆಯ ೪ನೇ
ವಾರ್ಷಿಕೋತ್ಸವ ಹಾಗೂ ೩೬ನೇ ೧೦ ದಿನಗಳ ಕುಡಿತ ಬಿಡುವ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ
ಅವರು ಮಾತನಾ ಡಿದರು.
ಮಧ್ಯಪಾನ ಒಂದು ಕೆಟ್ಟ ವ್ಯಸನ ಎಂದು ತಿಳಿದಿದ್ದರೂ ಅನೇಕ ಜನರು ಇದರ
ದಾಸರಾಗಿ ತಮ್ಮ ಕುಟುಂಬಗಳನ್ನು ಬೀದಿ ಪಾಲು ಮಾಡುತ್ತಿದ್ದಾರೆ. ಇದರಿಂದ ತಮ್ಮ ಮಕ್ಕಳ ಭವಿಷ್ಯ ಅತಂತ್ರವಾಗುತ್ತದೆ.
ಯಾವುದೇ ಕಾರಣಕ್ಕೂ ಕುಡಿತದ ದಾಸರಾಗಬೇಡಿ ನಿಮ್ಮನ್ನು ನಂಬಿಕೊಂಡು ನಿಮ್ಮ ಹೆಂಡತಿ ಮಕ್ಕಳು ತಂದೆ ತಾಯಿ
ಸೇರಿದಂತೆ ಹಲವು ಜನರು ಇರುತ್ತಾರೆ. ಮನೆಯ ಯಜಮಾನನಾದವನು ಇಂತಹ ದುಶ್ಚಟಕ್ಕೆ ಬಲಿಯಾದರೆ ಮನೆ ಬೀದಿ
ಪಾಲಾಗುತ್ತದೆ. ಇಂದು ವ್ಯಸನ ಮುಕ್ತರಾದವರು ಬೇರೆಯವರಿಗೆ ತಿಳಿವಳಿಕೆ ನೀಡುವ ಮೂಲಕ ಅವರನ್ನು ಮಧ್ಯಪಾನದಿಂದ
ದೂರವಿರಿಸಬೇಕು ಎಂದು ಸಲಹೆ ನೀಡಿದರು.
ಬಸವಮಾರ್ಗ ಫೌಂಡೇಷನ್ ಸಂಸ್ಥೆಯ ಸಂಸ್ಥಾಪಕರಾದ ಬಸವರಾಜು ಅವರು ಅತ್ಯಂತ
ಮುತುವರ್ಜಿಯಿಂದ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿ
೪ ವರ್ಷದಿಂದ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಶಿಬಿರಾರ್ಥಿಗಳಿಗೆ ಪೌಷ್ಠಿಕ ಆಹಾರ, ಗುಣಮಟ್ಟದ ಔಷದೋಪಚಾರ,
ಶುಚಿತ್ವವುಳ್ಳ ವಸತಿ ಸೌಲಭ್ಯ ನೀಡುತ್ತಿದ್ದು, ವಿಶೇಷವಾಗಿ ಶಿಬಿರಾರ್ಥಿಗಳಿಗೆ ಯಾವುದೇ ರೀತಿಯ ದೈಹಿಕ
ಹಿಂಸೆ ನೀಡದೆ ಅವರನ್ನು ಪ್ರೀತಿಯಿಂದ ಕಂಡು ಧ್ಯಾನ, ಯೋಗ, ವಿವಿಧ ಚಟುವಟಿಕೆಗಳ ಮೂಲಕ ಮಾನಸಿಕವಾಗಿ
ಬದಲಾವಣೆ ಮಾಡುತ್ತಿದ್ದಾರೆ ಇದು ಅತ್ಯಂತ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ.ಆರ್.ಆಸ್ಪತ್ರೆ ಮನೋವೈದ್ಯ
ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎನ್.ರವೀಶ್ ಮಾತನಾಡಿ, ನಿರಂತರ ಮಧ್ಯಪಾನ ವ್ಯಸನವಾಗಿ ಮಾರ್ಪಟ್ಟು
ನಂತರ ಮಾನಸಿಕ ಕಾಯಿಲೆಯಾಗಿ ಪರಿವರ್ತನೆಯಾಗಿತ್ತದೆ. ಇಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ವ್ಯಸನಿಗಳಿಗೆ
ಮನೋ ವೈದ್ಯರ ಸಲಹೆ ಅತ್ಯಗತ್ಯವಾಗಿದೆ. ಶಾಸಕ ಕೆ.ಹರೀಶ್‌ಗೌಡ ಅವರು ಪ್ರತಿಯೊಂದು ಶಿಬಿರಕ್ಕೂ ಭೇಟಿ
ನೀಡುವಂತೆ ನಮಗೆ ಸಲಹೆ ನೀಡಿದ್ದು, ಅದರ ಪ್ರಕಾರ ಮುಂದಿನ ಶಿಬಿರಗಳಲ್ಲಿ ಸಲಹೆ ಸಹಕಾರ ನೀಡಲಾಗುವುದು
ಎಂದರು.
ಬಸವ ಮಾರ್ಗ ಫೌಂಡೇಷನ್ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ನಮ್ಮ
ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಮಧ್ಯ ವ್ಯಸನಿಗಳನ್ನು
ವ್ಯಸನ ಮುಕ್ತರನ್ನಾಗಿ ಮಾಡಿ ಅವರಿಗೆ ಹೊಸ ಬದುಕು ನೀಡಿರುವುದು ನಮಗೆ ಅತ್ಯಂತ ಹೆಮ್ಮೆ ಎನಿಸಿದೆ.
ಮುಂದೆ ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವ ಇಚ್ಛೆ ಹೊಂದಿದ್ದು, ಅದಕ್ಕೂ ಮುನ್ನ ಪ್ರಸಕ್ತ ಸಾಲಿನಲ್ಲಿ
೧೦೦ ಜನ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ.
ಜತೆಗೆ ೫೦ ಜನ ವಿವಿಧ ಕ್ರೀಡೆ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರತಿಭೆ ಹೊಂದಿರುವವರಿಗೆ
ಸಹಕಾರ ನೀಡುತ್ತೇವೆ ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ರಾಜಯೋಗ ಉಪನ್ಯಾಸಕಾರಾದ ಬಿ.ಕೆ.ಸಂಧ್ಯಾ,
ಯೋಗಗುರು ನವೀನ್, ವ್ಯವಸ್ಥಾಪಕರಾದ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಹ್ವಾನಿತ ಗಣ್ಯರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸುಮಾರು ೨೦೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಮತ್ತು ಅವರ ಕುಟುಂಬದವರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು