ಮೈಸೂರು : ಶಾಸಕ ತನ್ವೀರ್ ಸೇಠ್ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಯೊಬ್ಬರು
ಶಾಸಕರಿಗೆ ಚಿನ್ನಲೇಪಿತ ಹುಲಿಯನ್ನು ಉಡುಗೊರೆಯಾಗಿ ನೀಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ಕಾಂಗ್ರೆಸ್ ಮುಖಂಡ ಹಾಗೂ ತನ್ವೀರ್ ಸೇಠ್ ಕಟ್ಟಾ ಅಭಿಮಾನಿ ಸುಹೇಲ್
ಪಾಷ ಮಂಗಳವಾರ ಬೆಳಗ್ಗೆ ಶಾಸಕ ತನ್ವೀರ್ ಸೇಠ್ ಅವರ ಮನೆಗೆ ಧಾವಿಸಿ ಹುಟ್ಟು ಹಬ್ಬದ ಶುಭಾ ಶಯ ಕೋರಿ.
ಚಿನ್ನ ಲೇಪಿತ ಹುಲಿಯ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದು ಸಾರ್ವಜನಿಕರನ್ನು ಹುಬ್ಬೇರಿಸುವಂತೆ
ಮಾಡಿತು.
ಬಳಿಕ ಅವರು ಮಾ ಧ್ಯಮದವರೊಂದಿಗೆ ಮಾತನಾ ಡಿ, ನಮ್ಮ ನಾಯಕ ತನ್ವೀರ್
ಸೇಠ್ ಈ ಭಾಗದ ಹುಲಿಯಾಗಿದ್ದಾರೆ. ಅದು ಸದಾಕಾಲ ಅವರ ನೆನಪಿನಲ್ಲಿ ಉಳಿಯಲು ನಾನು ಹುಲಿಯ ಮೂರ್ತಿಯನ್ನು
ಉಡುಗೊರೆಯಾಗಿ ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಅಝಾನ್, ಸಾದಿಖ್,ವಿನ್ಸನ್, ಶಶಿ, ಕ್ರೂಸ್,
ಮೊಹಮ್ಮದ್ ಸಮಿ ಮುಂತಾದವರು ಇದ್ದರು.
0 ಕಾಮೆಂಟ್‌ಗಳು