ತನ್ವೀರ್ ಸೇಠ್ ಹುಟ್ಟುಹಬ್ಬ : ಕಾಂಗ್ರೆಸ್ ಮುಖಂಡ ರಸೂಲ್ ನೇತೃತ್ವದಲ್ಲಿ ಕೆ.ಆರ್.ಆಸ್ಪತ್ರೆ ರೋಗಿಗಳಿಗೆ ಅನ್ನ ಸಂತರ್ಪಣೆ

ಮೈಸೂರು : ಎನ್‌ ಆರ್‌ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ ಹುಟ್ಟು ಹಬ್ಬದ ಪ್ರಯುಕ್ತ ಕಾಂಗ್ರೆಸ್‌ ಮುಖಂಡ ಎಂ.ರಸೂಲ್‌ ನೇತೃತ್ವದಲ್ಲಿ ನಗರದ ಕೆ.ಆರ್‌.ಆಸ್ಪತ್ರೆ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಿತು.

ಮಂಗಳವಾರ ಬೆಳಿಗ್ಗೆ ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ ನೂರಾರು ತನ್ವೀರ್‌ ಸೇಠ್‌ ಅಭಿಮಾನಿಗಳು  ಚಲುವಾಂಬ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬಿಸ್ಕತ್‌ ಮತ್ತು ಬ್ರೆಡ್‌ ವಿತರಿಸಿ ಬಳಿಕ ಹೊರ ಆವರಣದಲ್ಲಿ ನೂರಾರು ಜನರಿಗೆ ಉಪಹಾರ ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಎಂ.ರಸೂಲ್‌ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನಾವು ಜನಾನುರಾಗಿ ಶಾಸಕ ತನ್ವೀರ್‌ ಸೇಠ್‌ ಅವರ ಹುಟ್ಟುಹಬ್ಬವನ್ನು ನಾವು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಬೆಳಗ್ಗೆ ನಮ್ಮ ಬಡಾವಣೆಯ ಮಕ್ಕಳಿಗೆ ಪುಸ್ತಕ ವಿತರಣೆ, ಅನ್ನಸಂತರ್ಪಣೆ ನಡೆಸಲಾಗಿದೆ. ಜತೆಗೆ ಚಲುವಾಂಬ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು, ಬ್ರೆಡ್‌ ಮತ್ತು ಬಿಸ್ಕತ್‌ ವಿತರಣೆ ಮಾಡಿ ಉಪಹಾರವನ್ನೂ ಸಹ ನೀಡುವ ಮೂಲಕ ತನ್ವೀರ್‌ ಸೇಠ್‌ ಅವರಿಗೆ ಶುಭವಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.
ಸತತ ಆರು ಬಾರಿ ಗೆಲ್ಲುವ ಮೂಲಕ ತನ್ವೀರ್‌ ಸೇಠ್‌ ಅವರು ನಮ್ಮ ಕ್ಷೇತ್ರದ ಮೆಚ್ಚಿನ ನಾಯಕರಾಗಿದ್ದಾರೆ. ಯಾವುದೇ ಪಕ್ಷಭೇದ ಮಾಡದೆ ಅಭಿವೃದ್ಧಿ ಕಾರ್ಯಕ್ರಮ ಮಾ ಡುತ್ತಿದ್ದಾರೆ. ಎಲ್ಲ ಜಾತಿ, ವರ್ಗ., ಸಮುದಾಯದದೊಂದಿಗೆ ನಮ್ಮ ಶಾಸಕರು ಅನ್ಯೋನ್ಯತೆಯಿಂದ ಇರುವುದರಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿ ಕ್ಷೇತ್ರವನ್ನು ಅಭಿವೃದ್ಧಿತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಬಳಿಕ ಅವರು ತನ್ವೀರ್‌ ಸೇಠ್‌ ಅವರ ನಿವಾಸಕ್ಕೆ ತೆರಳಿ ಶುಭ ಕೋರಿದರು. ಈ ಸಂದರ್ಭದಲ್ಲಿ ರಸೂಲ್‌ ಬಳಗದ ನೂರಾರು ಅಭಿಮಾನಿಗಳು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು